IND vs BAN: ಇಂದು ಅಡಿಲೇಡ್‌ನಲ್ಲಿ ಸೃಷ್ಟಿಯಾಗುವ ದಾಖಲೆಗಳಿವು; ಸೂರ್ಯ- ಕೊಹ್ಲಿಗೆ ಮಹತ್ವದ ದಿನ

T20 World Cup 2022: ಇದು ಟಿ20ಯಲ್ಲಿ ಇಬ್ಬರ ನಡುವಿನ 12ನೇ ಘರ್ಷಣೆಯಾಗಿದೆ. ಇದಕ್ಕೂ ಮುನ್ನ ಆಡಿದ 11 ಪಂದ್ಯಗಳಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ 10-1 ಅಂತರದ ಜಯ ಸಾಧಿಸಿದೆ.

TV9 Web
| Updated By: ಪೃಥ್ವಿಶಂಕರ

Updated on:Nov 02, 2022 | 11:46 AM

ಇಂದು ಅಡಿಲೇಡ್‌ನಲ್ಲಿ ಭಾರತ-ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಹವಾಮಾನವು ಅನುಕೂಲಕರವಾಗಿದ್ದರೆ, ಪಂದ್ಯ ರೋಚಕವಾಗುವುದಂತೂ ಖಚಿತ. ಅಲ್ಲದೆ ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೇಮಿಸ್ ಹಂತಕ್ಕೆ ಹತ್ತಿರವಾಗಲಿದೆ. ಹೀಗಾಗಿಯೇ ಉಭಯ ತಂಡಗಳಿಗೆ ಈ ಪಂದ್ಯ ಬಹುಮುಖ್ಯವಾಗಿದೆ. ಇದರೊಂದಿಗೆ ಈ ಮಹತ್ವದ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಲಿದ್ದು, ಅವುಗಳ ಪೂರ್ಣ ವಿವರ ಹೀಗಿದೆ.

1 / 5
ಭಾರತ ತಂಡ ಅಡಿಲೇಡ್‌ನಲ್ಲಿ ಇದುವರೆಗೆ ಒಂದೇ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದೆ. 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 37 ರನ್‌ಗಳಿಂದ ಗೆದ್ದಿತ್ತು. ಭಾರತ ಬಿಟ್ಟರೆ ಬಾಂಗ್ಲಾದೇಶಕ್ಕೆ ಅಡಿಲೇಡ್‌ನಲ್ಲಿ ಒಂದೇ ಒಂದು ಪಂದ್ಯ ಆಡಿದ ಅನುಭವವಿಲ್ಲ.

2 / 5
ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಇಲ್ಲಿ ಆಡಿದ ಏಕೈಕ ಟಿ20 ಪಂದ್ಯದಲ್ಲಿ ಅವರು 55 ಎಸೆತಗಳಲ್ಲಿ ಅಜೇಯ 90 ರನ್ ಗಳಿಸಿದರು. ಇಂದು ಬಾಂಗ್ಲಾದೇಶದ ವಿರುದ್ಧ, ಕೊಹ್ಲಿ ಕೇವಲ 16 ರನ್ ಗಳಿಸಿದರೆ ಸಾಕು, ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ.

3 / 5
ಬಾಂಗ್ಲಾದೇಶ ವಿರುದ್ಧ ಅಡಿಲೇಡ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಲ್ಲದೆ ಸೂರ್ಯಕುಮಾರ್ ಯಾದವ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ವಾಸ್ತವವಾಗಿ, ಸೂರ್ಯಕುಮಾರ್ ಯಾದವ್ 2022 ರಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ 1000 ರನ್‌ಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಲು 65 ರನ್‌ಗಳ ದೂರದಲ್ಲಿದ್ದು, ಪ್ರಸ್ತುತ 935 ರನ್‌ಗಳನ್ನು ಬಾರಿಸಿದ್ದಾರೆ.

4 / 5
ಇಂದು ಅಡಿಲೇಡ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಇದು ಟಿ20ಯಲ್ಲಿ ಇಬ್ಬರ ನಡುವಿನ 12ನೇ ಘರ್ಷಣೆಯಾಗಿದೆ. ಇದಕ್ಕೂ ಮುನ್ನ ಆಡಿದ 11 ಪಂದ್ಯಗಳಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ 10-1 ಅಂತರದ ಜಯ ಸಾಧಿಸಿದೆ.

5 / 5

Published On - 11:46 am, Wed, 2 November 22

Follow us