ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್-2022 ರಲ್ಲಿ ಸೆಮಿಫೈನಲ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯ ಸಾಧಿಸುವುದರೊಂದಿಗೆ ಕೆಲವು ದಾಖಲೆಗಳನ್ನೂ ಸಹ ನಿರ್ಮಾಣ ಮಾಡಿದೆ.
ಇದು ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ 26ನೇ ಜಯವಾಗಿದ್ದು, ವಿಶ್ವಕಪ್‌ನಲ್ಲಿ ಈ ಅತಿ ಕಡಿಮೆ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ವಿಷಯದಲ್ಲಿ ಭಾರತ ಎರಡನೇ ಸ್ಥಾನಕ್ಕೇರಿದೆ.
2007ರಲ್ಲಿ ಆರಂಭವಾದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ಶ್ರೀಲಂಕಾ ತಂಡ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಮುಂಚೂಣಿಯಲ್ಲಿದೆ. ಶ್ರೀಲಂಕಾ ಇದುವರೆಗೆ 31 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 26 ಮತ್ತು ಪಾಕಿಸ್ತಾನ 25 ಪಂದ್ಯಗಳನ್ನು ಗೆದ್ದಿವೆ.
ಈ ಪಂದ್ಯವನ್ನು ಗೆಲ್ಲುವ ಮೂಲಕ ರೋಹಿತ್ ಕೂಡ ದಾಖಲೆ ಬರೆದಿದ್ದು, ಇದು ಕ್ಯಾಲೆಂಡರ್ ವರ್ಷದಲ್ಲಿ ಭಾರತಕ್ಕೆ 20ನೇ ಟಿ20 ಅಂತಾರಾಷ್ಟ್ರೀಯ ಗೆಲುವಾಗಿದೆ. ಹೀಗಾಗಿ ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ಎರಡನೇ ನಾಯಕ ಎಂಬ ಕೀರ್ತಿಗೆ ರೋಹಿತ್ ಪಾತ್ರರಾಗಿದ್ದಾರೆ.
ಜೊತೆಗೆ ಒಂದು ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೆಲುವುಗಳನ್ನು ಗಳಿಸಿದ ನಾಯಕರ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಇದ್ದು, ಅವರು 2021 ರಲ್ಲಿ ತಮ್ಮ ತಂಡವನ್ನು ಹೆಚ್ಚು ಗೆಲುವಿನತ್ತ ಮುನ್ನಡೆಸಿದ ದಾಖಲೆ ಬರೆದಿದ್ದಾರೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 64 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಐಸಿಸಿ ಈವೆಂಟ್‌ಗಳಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದವರ ಪಟ್ಟಿಯಲ್ಲಿ ಅವರು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಇಬ್ಬರೂ ತಲಾ 10 ಬಾರಿ ಈ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಈ ಇನ್ನಿಂಗ್ಸ್ ನಂತರ, ಕೊಹ್ಲಿ ಐಸಿಸಿ ಪಂದ್ಯಾವಳಿಗಳಲ್ಲಿ ಒಟ್ಟು 3350 ರನ್ ಗಳಿಸಿದ್ದು ಈ ವಿಷಯದಲ್ಲಿ ಅವರು ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ. ಆದರೆ ಸಚಿನ್ ಯಾವುದೇ ಟಿ20 ವಿಶ್ವಕಪ್ ಆಡಿಲ್ಲ. ಬದಲಿಗೆ ಅವರು ಏಕದಿನ ವಿಶ್ವಕಪ್ ಮಾತ್ರ ಆಡಿದ್ದಾರೆ.
Published On - 7:28 pm, Wed, 2 November 22