IND vs PAK: ‘ಒತ್ತಡ ಇದ್ದೇ ಇರುತ್ತದೆ’; ಏಷ್ಯಾಕಪ್‌ನಲ್ಲಿ ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಹೇಳಿದ್ದಿದು
Asia Cup 2022: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಸುವುದು ಬಹಳ ಮುಖ್ಯ ಎಂದು ರೋಹಿತ್ ಹೇಳಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಏಷ್ಯಾಕಪ್‌ನಲ್ಲಿ (Asia Cup) ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಉಭಯ ತಂಡಗಳ ನಡುವಿನ ಈ ಪಂದ್ಯ ಆಗಸ್ಟ್ 8 ರಂದು ದುಬೈನಲ್ಲಿ ನಡೆಯಲಿದೆ. ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ಈ ಪಂದ್ಯದ ಮೇಲಿದ್ದು, ಆಟಗಾರರ ಮೇಲೂ ಒತ್ತಡವಿದೆ. ರೋಹಿತ್‌ಗೂ ಇದು ಗೊತ್ತಿದ್ದು, ಈ ಪಂದ್ಯದಲ್ಲಿ ಒತ್ತಡ ಇರಲಿದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಈ ಪಂದ್ಯಕ್ಕೂ ಮುನ್ನ ಹೊಸ ಆಟಗಾರರನ್ನು ಆರಾಮವಾಗಿರಿಸುವುದು ಮುಖ್ಯ ಎಂಬುದನನ್ನು ರೋಹಿತ್ ಹೇಳಿದ್ದಾರೆ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಸುವುದು ಬಹಳ ಮುಖ್ಯ ಎಂದು ರೋಹಿತ್ ಹೇಳಿದ್ದಾರೆ. ಈ ಏಷ್ಯಾಕಪ್‌ಗೆ ಮೊದಲು, ಭಾರತ ಮತ್ತು ಪಾಕಿಸ್ತಾನ ತಂಡಗಳು ಕಳೆದ ವರ್ಷ ಟಿ 20 ವಿಶ್ವಕಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು, ಇದರಲ್ಲಿ ಪಾಕಿಸ್ತಾನ ಗೆದ್ದಿತು. ಈ ಗೆಲುವಿನ ಮೂಲಕ ಪಾಕಿಸ್ತಾನ, ಭಾರತದ ವಿರುದ್ಧ ವಿಶ್ವಕಪ್‌ನಲ್ಲಿ ಮೊದಲ ಗೆಲುವು ಸಾಧಿಸಿತ್ತು.
‘ಒತ್ತಡಕ್ಕೆ ಅವಕಾಶ ನೀಡದಿರುವುದು ಮುಖ್ಯ’
ನಾಯಕನಾಗಿ ಒತ್ತಡವು ಆಟಗಾರರನ್ನು ಆವರಿಸದಂತೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ನನಗೆ ಮುಖ್ಯವಾಗಿದೆ ಎಂದು ರೋಹಿತ್ ಹೇಳಿದರು. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರೋಹಿತ್ ಶರ್ಮಾ, “ನಾಯಕನಾಗಿ ನನಗೆ, ಆಟಗಾರರು ಒತ್ತಡದ ವಾತಾವರಣ ಎಂದು ಭಾವಿಸದಂತಹ ವಾತಾವರಣವನ್ನು ಸೃಷ್ಟಿಸುವುದು ನಮಗೆ ಮುಖ್ಯವಾಗಿದೆ. ಆಟಗಾರರು ಮೋಜು ಮಾಡುವ, ಪರಸ್ಪರರ ಒಡನಾಟವನ್ನು ಆನಂದಿಸುವ ವಾತಾವರಣವನ್ನು ನಾವು ಸೃಷ್ಟಿಸಲು ಪ್ರಯತ್ನಿಸುತ್ತೇವೆ ಏಕೆಂದರೆ ಒತ್ತಡವನ್ನು ತೆಗೆದುಕೊಳ್ಳಲು ನಾವು ಬಿಡದಿರುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ.”
“We just have to see them as another opposition” – @ImRo45 ?️ on #INDvPAK.
Catch the skipper in an exclusive interview as he talks about tackling the #GreatestRivalry and more on-#FollowTheBlues | Every Sunday 9 AM | Star Sports Network pic.twitter.com/gj2CKFkdsW
— Star Sports (@StarSportsIndia) August 20, 2022
ಖಂಡಿತ ಒತ್ತಡ ಇರುತ್ತದೆ – ರೋಹಿತ್
ಬೌಲರ್ ಆಗಿರಲಿ ಅಥವಾ ಬ್ಯಾಟ್ಸ್ಮನ್ ಆಗಿರಲಿ ಪಂದ್ಯದಲ್ಲಿ ಒತ್ತಡ ಇದ್ದೇ ಇರುತ್ತದೆ ಎಂದು ರೋಹಿತ್ ಹೇಳಿದ್ದಾರೆ. “ನೀವು ಆಡುವಾಗ, ಒತ್ತಡ ಇರುತ್ತದೆ. ಏಕೆಂದರೆ ನೀವು ಬೌಲರ್ ಆಗಿ ನಿಮ್ಮ ಕೈಯಲ್ಲಿ ಚೆಂಡನ್ನು ಹಿಡಿದಾಗ, ನಿಮ್ಮ ಮೇಲೆ ಒತ್ತಡ ಇರುತ್ತದೆ. ನೀವು ಬ್ಯಾಟಿಂಗ್ ಮಾಡುವಾಗ, ಒತ್ತಡ ಇರುತ್ತದೆ. ಇದು ನಿಮ್ಮ ಬಗ್ಗೆ ಕಾಳಜಿ ವಹಿಸಬೇಕಾದ ವಿಷಯ. ನಾಯಕ, ಕೋಚ್ ಅಥವಾ ಬೇರೆ ಯಾರೇ ಆಗಿರಲಿ, ಇದರಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನೀವೇ ಏನಾದರೂ ಮಾಡಬೇಕು. ನಿಸ್ಸಂಶಯವಾಗಿ ಇದು ನಿಮ್ಮ ಜವಾಬ್ದಾರಿಯಾಗಿದೆ, ಆದರೆ ಇದರ ಹೊರತಾಗಿ ಕೆಲಸ ಮಾಡುವ ಹಲವು ಅಂಶಗಳಿವೆ. ನಾವು ಅವುಗಳ ಬಗ್ಗೆ ಗಮನಹರಿಸಬೇಕಿದೆ ಎಂದು ರೋಹಿತ್ ಹೇಳಿದ್ದಾರೆ.
Published On - 10:27 pm, Sun, 21 August 22