AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಟೀಂ ಇಂಡಿಯಾದ ಈ ಐದು ದಾಖಲೆಗಳನ್ನು ಪಾಕಿಸ್ತಾನಕ್ಕೆ ಕನಸಿನಲ್ಲೂ ಮುರಿಯಲು ಸಾಧ್ಯವಿಲ್ಲ..!

IND vs PAK: ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಗಳಲ್ಲಿ ಭಾರತ ತಂಡ ಪ್ರಾಬಲ್ಯ ಮೆರೆದಿರುವುದು ಗೊತ್ತೇ ಇದೆ. ಭಾರತವು ಪ್ರಸ್ತುತ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 12-1 ದಾಖಲೆಯನ್ನು ಹೊಂದಿದೆ

IND vs PAK: ಟೀಂ ಇಂಡಿಯಾದ ಈ ಐದು ದಾಖಲೆಗಳನ್ನು ಪಾಕಿಸ್ತಾನಕ್ಕೆ ಕನಸಿನಲ್ಲೂ ಮುರಿಯಲು ಸಾಧ್ಯವಿಲ್ಲ..!
TV9 Web
| Updated By: ಪೃಥ್ವಿಶಂಕರ|

Updated on:Aug 21, 2022 | 8:37 PM

Share

ಏಷ್ಯಾಕಪ್ 2022 (Asia Cup 2022)ರಲ್ಲಿ, ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಬ್ಲಾಕ್ಬಸ್ಟರ್ ಪಂದ್ಯವು ಆಗಸ್ಟ್ 28 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಜಕೀಯ ಅರಾಜಕತೆ ಮತ್ತು ರಾಜತಾಂತ್ರಿಕ ಸಂಬಂಧಗಳ ವಿಚಾರದಲ್ಲಿ ದ್ವಂದ್ವ ನಿಲುವುಗಳಿಂದ ಉಭಯ ದೇಶಗಳು ಜನವರಿ 2012 ರಿಂದ ಪರಸ್ಪರ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಏಷ್ಯಾಕಪ್ ಅಥವಾ ಐಸಿಸಿ ಈವೆಂಟ್‌ಗಳ ಸಂದರ್ಭದಲ್ಲಿ ಮಾತ್ರ ಉಭಯ ದೇಶಗಳ ಆಟಗಾರರು ಪರಸ್ಪರ ಮೈದಾನದಲ್ಲಿ ಸೆಣಸಾಡುತ್ತಾರೆ.

ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಹೆಚ್ಚು ಪಂದ್ಯಗಳನ್ನು ಗೆದ್ದಿದೆ. ಅದೇ ಹೊತ್ತಿಗೆ ಟಿ20 ಮಾದರಿಯಲ್ಲಿ ಭಾರತ ಮೇಲುಗೈ ಸಾಧಿಸಿದೆ. ಎಂಟು ಪಂದ್ಯಗಳಲ್ಲಿ ಭಾರತ ಆರರಲ್ಲಿ ಗೆಲುವು ಸಾಧಿಸಿದೆ. ಉಭಯ ತಂಡಗಳ ಆಟಗಾರರು ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಸಂಚಿಕೆಯಲ್ಲಿ, ನಾವು ಈಗ ಭಾರತ ತಂಡದ ಕೆಲವು ದಾಖಲೆಗಳ ಬಗ್ಗೆ ಹೇಳಲಿದ್ದು, ಈ ದಾಖಲೆಗಳನ್ನು ಮುರಿಯಲು ಪಾಕಿಸ್ತಾನಕ್ಕೆ ಈಗಲೂ ಸಾಧ್ಯವಾಗಿಲ್ಲ.

T20 ಪಂದ್ಯದಲ್ಲಿ ಅತ್ಯಧಿಕ 200+ ಸ್ಕೋರ್‌- ಟೀಮ್ ಇಂಡಿಯಾ T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ರನ್​ಗಳನ್ನು ಅಧಿಕ ಬಾರಿ ಸ್ಕೋರ್ ಮಾಡಿದ ತಂಡವಾಗಿದೆ. ಭಾರತ 21 ಬಾರಿ 200ರ ಗಡಿ ತಲುಪಿದರೆ, ಪಾಕಿಸ್ತಾನ ಕೇವಲ 10 ಬಾರಿ ಮಾತ್ರ ಈ ಸ್ಕೋರ್ ಮಾಡಲು ಸಾಧ್ಯವಾಗಿದೆ. ಭಾರತದ ಸಂಖ್ಯೆಗೆ ಪಾಕಿಸ್ತಾನ ಹತ್ತಿರ ಬರುವುದು ಬಹುತೇಕ ಅಸಾಧ್ಯ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಕೂಡ ಈ ವಿಷಯದಲ್ಲಿ ಪಾಕಿಸ್ತಾನಕ್ಕಿಂತ ಮುಂದಿವೆ.

ಇದನ್ನೂ ಓದಿ
Image
Ind vs Pak: ಏಷ್ಯಾಕಪ್ ಇತಿಹಾಸದಲ್ಲಿ ರೋಚಕತೆ ಸೃಷ್ಟಿಸಿದ ಭಾರತ- ಪಾಕಿಸ್ತಾನ ನಡುವಿನ 5 ಪಂದ್ಯಗಳಿವು
Image
Asia Cup 2022: ಏಷ್ಯಾಕಪ್​ನಿಂದ ಶಾಹೀನ್ ಶಾ ಆಫ್ರಿದಿ ಔಟ್; ಗೋಳು ತೋಡಿಕೊಂಡ ಪಾಕ್ ಫ್ಯಾನ್ಸ್
Image
Asia Cup 2022: ಏಷ್ಯಾಕಪ್​ಗೆ ಎಲ್ಲಾ ಪ್ರಮುಖ ತಂಡಗಳು ಪ್ರಕಟ; ಹೀಗಿದೆ ಆಟಗಾರರ ಸಂಪೂರ್ಣ ಪಟ್ಟಿ

ತವರಿನಲ್ಲಿ ಟೆಸ್ಟ್ ಜಯ: ಭಾರತ ತವರಿನಲ್ಲಿ ಇದುವರೆಗೆ 112 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ತಂಡ ತವರಿನಲ್ಲಿ 60 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. 2012-13ರ ಸೀಸನ್​ನಲ್ಲಿ ಇಂಗ್ಲೆಂಡ್ ವಿರುದ್ಧ 1-2 ಅಂತರದಲ್ಲಿ ಸೋತ ನಂತರ ಟೀಮ್ ಇಂಡಿಯಾ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿಲ್ಲ. ಮತ್ತೊಂದೆಡೆ, ಈ ವರ್ಷದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ 0-1 ಅಂತರದ ಸೋಲು ಅನುಭವಿಸಬೇಕಾಯಿತು.

ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಸತತ ಗೆಲುವು: ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಗಳಲ್ಲಿ ಭಾರತ ತಂಡ ಪ್ರಾಬಲ್ಯ ಮೆರೆದಿರುವುದು ಗೊತ್ತೇ ಇದೆ. ಭಾರತವು ಪ್ರಸ್ತುತ T20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 12-1 ದಾಖಲೆಯನ್ನು ಹೊಂದಿದೆ (ಏಳು ODIಗಳು, 5 T20 ವಿಶ್ವಕಪ್‌ಗಳು). ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ 10 ವಿಕೆಟ್‌ಗಳಿಂದ ಭಾರತದ 12 ಪಂದ್ಯಗಳ ಗೆಲುವಿನ ಸರಣಿಯನ್ನು ಮುರಿದಿತ್ತು. ಆದರೆ, ಅದಕ್ಕಾಗಿ 29 ವರ್ಷ ಕಾಯಬೇಕಾಯಿತು. ಇದುವರೆಗೆ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಲು ಸಾಧ್ಯವಾಗಿಲ್ಲ.

ಆಸ್ಟ್ರೇಲಿಯಾದಲ್ಲಿ ಸತತ ಎರಡು ಟೆಸ್ಟ್ ಸರಣಿ ಜಯ: ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಏಕೈಕ ಏಷ್ಯಾದ ತಂಡ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ. ಭಾರತ ಸತತ ಎರಡು ಬಾರಿ ಈ ಸಾಧನೆ ಮಾಡಿದೆ. ಮೊದಲನೆಯದಾಗಿ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತವು 2018-19ರ ಟೆಸ್ಟ್ ಸರಣಿಯಲ್ಲಿ ಸರಣಿಯನ್ನು ವಶಪಡಿಸಿಕೊಂಡಿತ್ತು. ಅದರ ನಂತರ, 2020-21 ರಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಬ್ರಿಗೇಡ್ 2-1 ರಿಂದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು. ಪಾಕಿಸ್ತಾನದ ಬಗ್ಗೆ ಮಾತನಾಡುವುದಾದರೆ, ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ICC ODI ನಾಕೌಟ್‌ಗಳಲ್ಲಿ ಪ್ರಾಬಲ್ಯ: ICC ನಾಕೌಟ್ ಪಂದ್ಯಗಳಿಗೆ ಬಂದಾಗ ಭಾರತವು ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. 2011ರ ವಿಶ್ವಕಪ್‌ನಿಂದ ಐಸಿಸಿಯ ಪ್ರತಿಯೊಂದು ODI ಪಂದ್ಯಾವಳಿಯಲ್ಲಿ ಭಾರತ ನಾಕೌಟ್ ಹಂತವನ್ನು ತಲುಪಿದೆ. ಐಸಿಸಿ ಏಕದಿನ ಮಾದರಿಯಲ್ಲಿ ಭಾರತ ತಂಡ ಇದುವರೆಗೆ 26 ನಾಕೌಟ್ ಪಂದ್ಯಗಳನ್ನು ಆಡಿದೆ. ಆದರೆ ಪಾಕಿಸ್ತಾನ ಕೇವಲ 18 ನಾಕೌಟ್ ಪಂದ್ಯಗಳನ್ನು ಮಾತ್ರ ಗೆದ್ದಿದೆ.

Published On - 8:37 pm, Sun, 21 August 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ