AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yuzvendra Chahal – Dhanashree Verma: ಚಹಾಲ್ ಜೊತೆಗಿನ ಬ್ರೇಕ್​ಅಪ್ ಸುದ್ದಿ: ಕೊನೆಗೂ ಮೌನ ಮುರಿದ ಧನಶ್ರೀ..!

Yuzvendra Chahal - Dhanashree Verma: ಈ ಗಾಯ ಅಥವಾ ಯಾವುದೇ ಆಧಾರರಹಿತ ವದಂತಿಗಳಿಂದ ನನ್ನನ್ನು ನಾನು ಕುಗ್ಗಲು ಬಿಡುವುದಿಲ್ಲ. ವಾಸ್ತವವಾಗಿ, ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

Yuzvendra Chahal - Dhanashree Verma: ಚಹಾಲ್ ಜೊತೆಗಿನ ಬ್ರೇಕ್​ಅಪ್ ಸುದ್ದಿ: ಕೊನೆಗೂ ಮೌನ ಮುರಿದ ಧನಶ್ರೀ..!
Yuzvendra Chahal - Dhanashree Verma
TV9 Web
| Updated By: ಝಾಹಿರ್ ಯೂಸುಫ್|

Updated on: Aug 22, 2022 | 11:24 AM

Share

ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಬಹುಚರ್ಚಿತ ಜೋಡಿಗಳಲ್ಲಿ ಒಂದಾದ ಯುಜುವೇಂದ್ರ ಚಹಾಲ್ (Yuzvendra Chahal ) ಮತ್ತು ಧನಶ್ರೀ ವರ್ಮಾ (Dhanashree Verma)  ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಯಾಗಿತ್ತು. ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ‘ಚಹಾಲ್’ ಎಂಬ ಉಪನಾಮವನ್ನು ತೆಗೆದುಹಾಕಿದ್ದರು. ಮತ್ತೊಂದೆಡೆ ಚಹಾಲ್ “ಹೊಸ ಜೀವನವು ಲೋಡ್ ಆಗುತ್ತಿದೆ…” ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು. ಇದರೊಂದಿಗೆ ಚಹಾಲ್ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ. ಇಬ್ಬರೂ ದೂರವಾಗುತ್ತಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು.

ಈ ಊಹಾಪೋಹಗಳು ಮಹತ್ವ ಪಡೆದುಕೊಳ್ಳುತ್ತಿದ್ದಂತೆ, ನಮ್ಮ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವದಂತಿಗಳನ್ನು ನಂಬಬೇಡಿ ಎಂದು ಚಹಾಲ್ ತಿಳಿಸಿದ್ದರು. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ, ಸುಳ್ಳು ಸುದ್ದಿಗಳನ್ನು ಹರಬೇಡಿ ಎಂದು ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದರು.

ಇದೀಗ ಧನಶ್ರೀ ವರ್ಮಾ ಕೂಡ ಸುದೀರ್ಘ ಪೋಸ್ಟ್ ಹಾಕುವ ಮೂಲಕ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಹರಿದಾಡಿದ್ದ ಸುದ್ದಿಗಳ ಬಗ್ಗೆ ಮೌನ ಮುರಿದಿದ್ದಾರೆ. ಅಲ್ಲದೆ ನಾನು ಚಹಾಲ್ ಈಗಲೂ ಜೊತೆಗಿದ್ದೇವೆ ಎಂದು ತಿಳಿಸಿದ್ದಾರೆ. ಈ ಪೋಸ್ಟ್‌ಗೆ ಖುದ್ದು ಯುಜ್ವೇಂದ್ರ ಚಹಾಲ್ ಮೈ ವುಮನ್ ಎಂದು ಕಾಮೆಂಟ್ ಕೂಡ ಮಾಡಿರುವುದು ವಿಶೇಷ.

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಧನಶ್ರೀ ವರ್ಮಾರ ಇನ್​ಸ್ಟಾಗ್ರಾಮ್ ಪೋಸ್ಟ್​ನ ಸಾರಾಂಶ ಹೀಗಿದೆ..ನಾನು ಚೇತರಿಸಿಕೊಳ್ಳಲು ನಿದ್ರೆ ಮಾಡಬೇಕಾಗಿತ್ತು. ಆದರೂ ತಮಾಷೆಯಾಗಿದೆ, ನಾನು ಇಂದು ತುಂಬಾ ಆತ್ಮವಿಶ್ವಾಸದಿಂದಲೇ ಎದ್ದಿದ್ದೇನೆ. ಕಳೆದ 14 ದಿನಗಳಿಂದ ಏನನ್ನೋ ಹುಡುಕುತ್ತಿದ್ದೆ. ಏಕೆಂದರೆ ನೃತ್ಯ ಮಾಡುವಾಗ ಸಂಭವಿಸಿದ ಮೊಣಕಾಲಿನ ಗಾಯದಿಂದಾಗಿ ನಾನು ಸಂಪೂರ್ಣವಾಗಿ ಆತ್ಮವಿಶ್ವಾಸವನ್ನು ಕಳೆದುಕೊಂಡೆ. ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಸದ್ಯ ನಾನು ನನ್ನ ಹಾಸಿಗೆಯಿಂದ ನನ್ನ ಮಂಚದವರೆಗೆ (ಪ್ರತಿದಿನ ಫಿಸಿಯೋಥೆರಪಿ ಮತ್ತು ರಿಹ್ಯಾಬ್ ಜೊತೆಗೆ) ಮಾತ್ರ ಚಲಿಸಬಲ್ಲೆ. ಈ ವೇಳೆಯೂ ನನಗೆ ನನ್ನ ಪತಿಯ, ನನ್ನ ಕುಟುಂಬ ಮತ್ತು ನನ್ನ ಹತ್ತಿರದ ಸ್ನೇಹಿತರಿಂದ ಅತ್ಯುತ್ತಮ ಬೆಂಬಲ ಸಿಕ್ಕಿದೆ.

ವೈದ್ಯರ ಶಿಫಾರಸಿನಂತೆ, ನಾನು ಜೀವನದಲ್ಲಿ ಮತ್ತೆ ನೃತ್ಯ ಮಾಡಬೇಕಿದ್ದರೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು. ಇಂತಹ ಸಂದರ್ಭದಲ್ಲಿ ನನ್ನ ವೈಯುಕ್ತಿ ಜೀವನದ ಬಗ್ಗೆ ಹಲವರು ಸುಳ್ಳು ಸುದ್ದಿಗಳನ್ನು ಹರಿಬಿಟ್ಟಿದ್ದರು. ನಿಜವಾಗಿಯೂ ಇದು ಅಸಹ್ಯಕರವಾಗಿತ್ತು. ಅಷ್ಟೇ ಅಲ್ಲದೆ ನನಗೆ ತುಂಬಾ ನೋವುಂಟು ಮಾಡಿತ್ತು.

ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಮತ್ತು ನನ್ನ ಗೌರವವನ್ನು ಗಳಿಸಿದ್ದೇನೆ. ಈ ಗಾಯ ಅಥವಾ ಯಾವುದೇ ಆಧಾರರಹಿತ ವದಂತಿಗಳಿಂದ ನನ್ನನ್ನು ನಾನು ಕುಗ್ಗಲು ಬಿಡುವುದಿಲ್ಲ. ವಾಸ್ತವವಾಗಿ, ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅಲ್ಲದೆ ನನ್ನನ್ನು ಇನ್ನಷ್ಟು ನಿರ್ಭೀತರನ್ನಾಗಿ ಮಾಡಿದೆ. ಸೆಲೆಬ್ರಿಟಿ ಜೀವನದಲ್ಲಿರುವ ಕೆಲ ವಾಸ್ತವಗಳನ್ನು  ಸಹಿಸಿಕೊಳ್ಳುವ ಸಾಮರ್ಥ್ಯ ನನಗಿದೆ ಎಂದು ನನಗೆ ಈಗ ಖಚಿತವಾಗಿದೆ.

ನನ್ನ ದೌರ್ಬಲ್ಯವನ್ನು ನನ್ನ ಶಕ್ತಿಯನ್ನಾಗಿ ಪರಿವರ್ತಿಸಿದ್ದಕ್ಕಾಗಿ ಮತ್ತು ನನ್ನ ಸಮಗ್ರತೆಯನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು. ಎಲ್ಲರಿಗೂ ಪ್ರೀತಿ ಮತ್ತು ಸಂತೋಷವನ್ನು ಹಂಚೋಣ..ಇತರೆ ವಿಷಯಗಳನ್ನು ನಿರ್ಲಕ್ಷಿಸೋಣ ಎಂದು ಧನಶ್ರೀ ವರ್ಮಾ ಬರೆದುಕೊಂಡಿದ್ದಾರೆ.

ವಿಶೇಷ ಎಂದರೆ ಚಹಾಲ್ ಅವರ ಸರ್​ ನೇಮ್​ ತೆಗೆದುಹಾಕಿದ್ದರಿಂದ ಶುರುವಾಗಿದ್ದ ಡೈವೋರ್ಸ್ ವದಂತಿಗೆ ತಮ್ಮ ಪೋಸ್ಟ್​ ಕೊನೆಯಲ್ಲಿ DVC (ಧನಶ್ರೀ ವರ್ಮಾ ಚಹಾಲ್) ಬರೆಯುವ ಮೂಲಕ ಧನಶ್ರೀ ಉತ್ತರ ನೀಡಿದ್ದಾರೆ. ಈ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಮತ್ತೊಂದೆಡೆ ಇದೇ ಪೋಸ್ಟ್​ಗೆ ಪತಿ ಯುಜ್ವೇಂದ್ರ ಚಹಾಲ್ ಕೂಡ ಮೈ ವುಮನ್ ಕಾಮೆಂಟ್ ಮಾಡುವ ಮೂಲಕ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ