ರೋಹಿತ್, ಹಾರ್ದಿಕ್ ಯೋ-ಯೋ ಟೆಸ್ಟ್ ರಿಸಲ್ಟ್ ಔಟ್: ಪರೀಕ್ಷೆಗೆ ಹಾಜರಾಗದ ಕೆಎಲ್ ರಾಹುಲ್
Rohit Sharma And Hardik Pandya Clear ‘Yo Yo’ Test: ಕೊಹ್ಲಿ ಬಳಿಕ ಇದೀಗ ನಾಯಕ ರೋಹಿತ್ ಶರ್ಮಾ ಹಾಗೂ ಉಪ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಯೋ-ಯೋ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ. ಕೆಎಸ್‌ಸಿಎ-ಆಲೂರ್ ಮೈದಾನದಲ್ಲಿ ರೋಹಿತ್, ರಾಹುಲ್ ಪರೀಕ್ಷೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಬಹುನಿರೀಕ್ಷಿತ ಏಷ್ಯಾಕಪ್ 2023 (Asia Cup 2023) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 30 ರಂದು ಈ ಟೂರ್ನಿಗೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿ ಆಗಲಿದೆ. ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ. ಭಾರತದ ಎಲ್ಲ ಪಂದ್ಯಗಳು ಸಿಂಹಳೀಯರ ನಾಡಲ್ಲಿ ಆಯೋಜಿಸಲಾಗಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸ ಶುರುಮಾಡಿಕೊಂಡಿದ್ದಾರೆ.
ಈಗಾಗಲೇ ಬೆಂಗಳೂರಿನ ಎನ್ಸಿಎಗೆ ಬಂದಿರುವ ಭಾರತೀಯ ಆಟಗಾರರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಏಷ್ಯಾಕಪ್ಗೆ ಆಯ್ಕೆ ಆಗಿರುವ ಎಲ್ಲ ಆಟಗಾರರು ಯೋ-ಯೋ ಟೆಸ್ಟ್‌ನಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಿದ್ದು, ಇದರಲ್ಲಿ ತೇರ್ಗಡೆ ಆಗಬೇಕಿದೆ. ವಿರಾಟ್ ಕೊಹ್ಲಿ ಮೊದಲಿಗರಾಗಿ ಯೋ-ಯೋ ಟೆಸ್ಟ್‌ಗೆ ಒಳಗಾಗಿ, ಈ ಟೆಸ್ಟ್‌ನಲ್ಲಿ 17.2 ಅಂಕ ಸಂಪಾದಿಸುವುದರೊಂದಿಗೆ ತೇರ್ಗಡೆಗೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಕೊಹ್ಲಿ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.
PAK vs AFG: ಕೊನೆಯ ಓವರ್ ಡ್ರಾಮಾ; ಅಫ್ಘಾನ್ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ
ಕೊಹ್ಲಿ ಬಳಿಕ ಇದೀಗ ನಾಯಕ ರೋಹಿತ್ ಶರ್ಮಾ ಹಾಗೂ ಉಪ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಯೋ-ಯೋ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ. ಕೆಎಸ್‌ಸಿಎ-ಆಲೂರ್ ಮೈದಾನದಲ್ಲಿ ರೋಹಿತ್, ಹಾರ್ದಿಕ್ ಪರೀಕ್ಷೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. “ಪರೀಕ್ಷೆಗಳು ಯಶಸ್ವಿಯಾಗಿವೆ ಮತ್ತು ವರದಿಗಳನ್ನು ಶೀಘ್ರದಲ್ಲೇ ಬಿಸಿಸಿಐಗೆ ಕಳುಹಿಸಲಾಗುವುದು” ಎಂದು ಮೂಲಗಳು ಪಿಟಿಐಗೆ ತಿಳಿಸಿದೆ. ಆದರೆ, ಫಿಟ್‌ನೆಸ್ ಪ್ರಮುಖವಾಗಿರುವ ಕೆಎಲ್ ರಾಹುಲ್ ಇನ್ನೂ ಈ ಟೆಸ್ಟ್‌ನಲ್ಲಿ ಭಾಗವಹಿಸಿಲ್ಲ ಎಂದು ತಿಳಿದುಬಂದಿದೆ.
ಯೋ-ಯೋ ಟೆಸ್ಟ್ ಮಾತ್ರವಲ್ಲದೆ ಶಿಬಿರದಲ್ಲಿ ಲಿಪಿಡ್ ಪ್ರೊಫೈಲ್, ಬ್ಲಡ್ ಶುಗರ್, ಯೂರಿಕ್ ಆಸಿಡ್, ಕ್ಯಾಲ್ಸಿಯಂ, ವಿಟಮಿನ್ ಬಿ 12 ಮತ್ತು ಡಿ, ಕ್ರಿಯೇಟಿನೈನ್, ಟೆಸ್ಟೋಸ್ಟೆರಾನ್ ಮತ್ತು ಡೆಕ್ಸಾ ಪರೀಕ್ಷೆಗಳು ಸೇರಿದಂತೆ ಆಟಗಾರರನ್ನು ಅನೇಕ ರೀತಿಯಲ್ಲಿ ಪರಿಶೀಲಿಸಲಾಗುತ್ತದೆ. ಫಿಟ್‌ನೆಸ್ ಹೊರತಾಗಿ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಮೂಲಕ ಮ್ಯಾಚ್ ಸಿಮ್ಯುಲೇಶನ್ ಸೆಷನ್ ಅನ್ನು ಸಹ ಏರ್ಪಡಿಸಲಾಗಿದೆ.
ಈ ಮೂಲಕ ರಾಹುಲ್ ದ್ರಾವಿಡ್ ಮತ್ತು ಟೀಮ್ ಇಂಡಿಯಾದ ಎಲ್ಲ ಆಟಗಾರರು ಎನ್ಸಿಎನಲ್ಲಿ ತರಭೇತಿ ಆರಂಭಿಸಿದ್ದಾರೆ. ಏಷ್ಯಾಕಪ್ಗೆ ಆಯ್ಕೆ ಆದ ಎಲ್ಲ ಆಟಗಾರರು ಇಲ್ಲಿ ಒಟ್ಟುಗೂಡಿದ್ದಾರೆ. ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಮತ್ತು ಜಸ್ಪ್ರಿತ್ ಬುಮ್ರಾ ಐರ್ಲೆಂಡ್ನಿಂದ ಹೊರಟು ಇಂದು ಅಥವಾ ನಾಳೆ ತಂಡ ಸೇರಿಕೊಳ್ಳಲಿದ್ದಾರೆ. ಏಷ್ಯಾಕಪ್ 2023 ತರಬೇತಿ ಶಿಬಿರವು ಆಗಸ್ಟ್ 29 ರವರೆಗೆ ಇರಲಿದೆ. ಭಾರತ ಆಗಸ್ಟ್ 30 ರಂದು ಕೊಲಂಬೋಕ್ಕೆ ತೆರಳಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ