Virat Kohli: ಕೊಹ್ಲಿ 45 ರನ್​ಗೆ ಔಟಾದಾಗ ಡ್ರೆಸ್ಸಿಂಗ್ ರೂಮ್​ನಲ್ಲಿ ರೋಹಿತ್ ಶರ್ಮಾ ಮಾಡಿದ್ದೇನು ನೋಡಿ

Rohit Sharma was stunned with Virat Kohli's dismissal: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವಾಗ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಅರ್ಧಶತಕದ ಹೊಸ್ತಿಲಲ್ಲಿ ಔಟಾಗಿ ನಿರಾಸೆ ಮೂಡಿಸಿದರು. ಈ ಸಂದರ್ಭ ನಾಯಕ ರೋಹಿತ್ ಶರ್ಮಾ ಏನು ಮಾಡಿದರು ಎಂಬುದನ್ನು ನೀವೇ ನೋಡಿ.

Virat Kohli: ಕೊಹ್ಲಿ 45 ರನ್​ಗೆ ಔಟಾದಾಗ ಡ್ರೆಸ್ಸಿಂಗ್ ರೂಮ್​ನಲ್ಲಿ ರೋಹಿತ್ ಶರ್ಮಾ ಮಾಡಿದ್ದೇನು ನೋಡಿ
Virat Kohli Out and Rohit Sharma Reaction
Follow us
TV9 Web
| Updated By: Vinay Bhat

Updated on: Mar 05, 2022 | 8:09 AM

ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಣ ಮೊದಲ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ಮೊದಲ ದಿನದಾಟ ಉಭಯ ತಂಡಗಳು ಮೇಲುಗೈ ಸಾಧಿಸಿದವು. ಭಾರತದ ಪ್ರಮುಖ ವಿಕೆಟ್​ಗಳನ್ನೆಲ್ಲ ಸಿಂಹಳೀಯರು ಕಿತ್ತಿದ್ದರೆ, ಇತ್ತ ಟೀಮ್ ಇಂಡಿಯಾ ವಿಕೆಟ್ ಕಳೆದುಕೊಳ್ಳುವುದರ ಜೊತೆಗೆ ಉತ್ತಮ ಮೊತ್ತವನ್ನು ಕೂಡ ಕಲೆಹಾಕಿದೆ. ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ರಿಷಭ್ ಪಂತ್ ಅವರ ಸ್ಫೋಟಕ ಆಟದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 357 ರನ್ ಬಾರಿಸಿದೆ. ಈ ಟೆಸ್ಟ್​ನ ಪ್ರಮುಖ ಹೈಲೇಟ್ ಆಗಿರುವುದು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli). ಇವರಿಗೆ ಇದು 100ನೇ ಟೆಸ್ಟ್ ಪಂದ್ಯ. ಆದರೆ, ಈ ಟೆಸ್ಟ್ ಅನ್ನು ಮತ್ತಷ್ಟು ಸ್ಮರಣೀಯವಾಗಿಸಲು ಕೊಹ್ಲಿಗೆ ಮೊದಲ ಇನ್ನಿಂಗ್ಸ್​ನಲ್ಲಿ ಸಾಧ್ಯವಾಗಲಿಲ್ಲ. ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ ಅರ್ಧಶತಕದ ಹೊಸ್ತಿಲಲ್ಲಿ ಔಟಾಗಿ ನಿರಾಸೆ ಮೂಡಿಸಿದರು. ಈ ಸಂದರ್ಭ ನಾಯಕ ರೋಹಿತ್ ಶರ್ಮಾ (Rohit Sharma) ಏನು ಮಾಡಿದರು ಎಂಬುದನ್ನು ನೀವೇ ನೋಡಿ.

ಎಲ್ಲರೂ ಕೂಡ ವಿರಾಟ್ ಕೊಹ್ಲಿಯ ಶತಕದ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ನಿರೀಕ್ಷೆ ಮಾಡಿದ್ದರು. ಅದರಂತೆ ಕೊಹ್ಲಿ ಕ್ರೀಸ್​ಗೆ ಬಂದಾಗಿನಿಂದಲೂ ಎಚ್ಚರಿಕೆಯಿಂದ ಚೆಂಡು ಎದುರಿಸುತ್ತಿದ್ದರು. ಮನಮೋಹಕ ಹೊಡೆತಗಳನ್ನು ಆಡಿ ಸೆಟಲ್ ಆದಂತೆ ಕೂಡ ಕಂಡರು. ಆದರೆ, 44ನೇ ಓವರ್‌ನ 3ನೇ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ನಿರಾಸೆ ಮೂಡಿಸಿದರು. ಎಡಗೈ ಸ್ಪಿನ್ನರ್‌ ಲಸಿತ್‌ ಎಂಬುಲ್ದೇನಿಯ ಎದುರು ಏಕಾಗ್ರತೆ ಕಳೆದುಕೊಂಡವರಂತೆ ಕಂಡ ವಿರಾಟ್‌ ತಿರುವು ಪಡೆದ ಚೆಂಡನ್ನು ಸರಿಯಾಗಿ ಗಮನಿಸದೆ ಡಿಫೆನ್ಸ್‌ ಮಾಡುವಲ್ಲಿ ವಿಫಲರಾಗಿ ಬೌಲ್ಡ್‌ ಔಟ್‌ ಆದರು.

ಆಡಿದ 76 ಎಸೆತಗಳಲ್ಲಿ 59.21ರ ಸ್ಟ್ರೈಕ್‌ರೇಟ್‌ ಮೂಲಕ 5 ಫೋರ್‌ಗಳ ನೆರವಿನೊಂದಿಗೆ 45 ರನ್‌ ಗಳಿಸಿ ವಿರಾಟ್‌ ಕೊಹ್ಲಿ ಔಟಾಗಿದ್ದು, ಕೇವಲ ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಡ್ರೆಸ್ಸಿಂಗ್ ರೂಮ್​ನಲ್ಲಿದ್ದ ಸ್ವತಃ ನಾಯಕ ರೋಹಿತ್‌ ಶರ್ಮಾ ಅವರಿಗೂ ಬೇಸರ ಮೂಡಿಸಿತು. ಟೆಸ್ಟ್ ಆರಂಭಕ್ಕೂ ಮುನ್ನ ಕೊಹ್ಲಿಯ 100ನೇ ಟೆಸ್ಟ್ ಬಗ್ಗೆ ಸಾಕಷ್ಟು ಆಸೆ ಇಟ್ಟುಕೊಂಡಿದ್ದ ರೋಹಿತ್​​ಗೆ ಕೊಹ್ಲಿ ಅರ್ಧಶತಕದ ಅಂಚಿನಲ್ಲಿ ಔಟಾಗಿದ್ದು ನೋವುಂಟು ಮಾಡಿತು. ಕೊಹ್ಲಿ ವಿಕೆಟ್ ಒಪ್ಪಿಸುತ್ತಿದ್ದಂತೆ ರೋಹಿತ್ ತಲೆ ಮೇಲೆ ತನ್ನ ಎರಡೂ ಕೈಗಳನ್ನು ಹಾಕಿಕೊಳ್ಳುವುದರ ಮೂಲಕ ಬೇಸರವನ್ನು ಹೊರಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

8000 ರನ್​ಗಳ ಸಾಧನೆ:

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ 8,000 ರನ್ ಪೂರೈಸಿದ ಭಾರತದ 6ನೇ ಹಾಗೂ ಒಟ್ಟಾರೆ 32ನೇ ಆಟಗಾರ ಎಂಬ ಸಾಧನೆ ಮಾಡಿದರು. ವಿಶ್ವ ಫರ್ನಾಂಡೋ ಅವರ 39ನೇ ಓವರ್​ನ ಎರಡನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಒಂದು ರನ್ ತೆಗೆದುಕೊಳ್ಳುವ ಮೂಲಕ ಟೆಸ್ಟ್ ಮಾದರಿಯಲ್ಲಿ 8000 ರನ್ ಪೂರೈಸಿದರು. ಹೀಗೆ ಈ ಸಾಧನೆ ಮಾಡಿ ಸಚಿನ್‌ ತೆಂಡೂಲ್ಕರ್ (15921), ರಾಹುಲ್‌ ದ್ರಾವಿಡ್‌ (13265), ಸುನಿಲ್ ಗವಾಸ್ಕರ್‌ (10122), ವಿವಿಎಸ್‌ ಲಕ್ಷ್ಮಣ್ (8781) ಮತ್ತು ವೀರೇಂದ್ರ ಸೆಹ್ವಾಗ್‌ (8503) ಜೊತೆಗೆ ಟೆಸ್ಟ್‌ನಲ್ಲಿ 8 ಸಾವಿರ ರನ್‌ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಕೂಡ ಸೇರ್ಪಡೆಗೊಂಡಿದ್ದಾರೆ. ಇದಿಷ್ಟೆ ಅಲ್ಲದೆ ತನ್ನ 100ನೇ ಟೆಸ್ಟ್​ ಪಂದ್ಯದಲ್ಲೇ 8000 ರನ್ ಗಳಿಸಿದ ಎರಡನೇ ಬ್ಯಾಟ್ಸ್​ಮನ್ ಕೊಹ್ಲಿ ಆಗಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ರಿಕ್ಕಿ ಪಾಂಟಿಂಗ್ ಅವರು 2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ್ದರು.

India vs Sri Lanka 1st Test: 500 ರತ್ತ ಭಾರತ ಚಿತ್ತ: ಕುತೂಹಲ ಕೆರಳಿಸಿದ ಇಂದಿನ ಎರಡನೇ ದಿನದಾಟ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ