India vs Pakistan: ಟೀಮ್ ಇಂಡಿಯಾ ಪಾಲಿಗೆ ವಿಲನ್​ ಆದ ಸ್ಪೈಡರ್ ಕ್ಯಾಮೆರಾ..!

| Updated By: ಝಾಹಿರ್ ಯೂಸುಫ್

Updated on: Oct 23, 2022 | 5:59 PM

India vs Pakistan: ಈ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಪರದಾಡಿದ ಪಾಕ್ ತಂಡಕ್ಕೆ ಆ ಬಳಿಕ ಆಸರೆಯಾಗಿದ್ದು ಶಾನ್ ಮಸೂದ್ ಹಾಗೂ ಇಫ್ತಿಕರ್ ಅಹ್ಮದ್.

India vs Pakistan: ಟೀಮ್ ಇಂಡಿಯಾ ಪಾಲಿಗೆ ವಿಲನ್​ ಆದ ಸ್ಪೈಡರ್ ಕ್ಯಾಮೆರಾ..!
India vs Pakistan
Follow us on

India vs Pakistan:  ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಪಾಕಿಸ್ತಾನ್ (India vs Pakistan) ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ಆರಂಭಿಕರಿಗೆ ಅರ್ಷದೀಪ್ ಸಿಂಗ್ ಆರಂಭಿಕ ಆಘಾತ ನೀಡಿದ್ದರು. ಎರಡನೇ ಓವರ್​ನ ಮೊದಲ ಎಸೆತದಲ್ಲೇ ನಾಯಕ ಬಾಬರ್ ಆಜಂ (0) ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ಅರ್ಷದೀಪ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ 4ನೇ ಓವರ್​ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ರಿಜ್ವಾನ್ (4) ಅರ್ಷದೀಪ್ ಔಟ್ ಮಾಡಿದರು.

ಈ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಪರದಾಡಿದ ಪಾಕ್ ತಂಡಕ್ಕೆ ಆ ಬಳಿಕ ಆಸರೆಯಾಗಿದ್ದು ಶಾನ್ ಮಸೂದ್ ಹಾಗೂ ಇಫ್ತಿಕರ್ ಅಹ್ಮದ್. 34 ಎಸೆತಗಳಲ್ಲಿ 51 ರನ್​ ಬಾರಿಸಿದ ಇಫ್ತಿಕರ್ ಅಹ್ಮದ್ ಅವರನ್ನು ಮೊಹಮ್ಮದ್ ಶಮಿ ಔಟ್ ಮಾಡುವ ಮೂಲಕ ಅಮೂಲ್ಯ ಯಶಸ್ಸು ತಂದುಕೊಟ್ಟರು.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿ ಶಾನ್ ಮಸೂದ್ ಅಜೇಯ 52 ರನ್ ಬಾರಿಸಿದರು. ಆದರೆ ಶಾನ್ ಮಸೂದ್​ ಹಾಫ್ ಸೆಂಚುರಿ ಬಾರಿಸಲು ಜೀವದಾನವೊಂದು ಲಭಿಸಿತ್ತು ಎಂಬುದು ವಿಶೇಷ.

ಅಂದರೆ ಪಂದ್ಯದ 14ನೇ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ಶಾನ್ ಮಸೂದ್‌ಗೆ ಶಾರ್ಟ್ ಲೆಗ್​ನತ್ತ ಭರ್ಜರಿಯಾಗಿ ಬಾರಿಸಿದ್ದರು. ಆದರೆ ಅತ್ತ ಬೌಂಡರಿ ಲೈನ್​ನಿಂದ ಕ್ಯಾಚ್ ಹಿಡಿಯಲು ಓಡಿ ಬಂದ ವಿರಾಟ್ ಕೊಹ್ಲಿ ನಿರಾಸೆ ಕಾದಿತ್ತು. ಏಕೆಂದರೆ ಆಕಾಶದತ್ತ ಚಿಮ್ಮಿದ್ದ ಮೈದಾನದ ಮೇಲೆ ಹಾರಾಡುತ್ತಿದ್ದ ಸ್ಪೈಡರ್ ಕ್ಯಾಮೆರಾಗೆ ಬಡಿಯಿತು. ಇದರಿಂದ ಚೆಂಡು ಅಲ್ಲೇ ನೆಲಕ್ಕೆ ಬಿತ್ತು.

ಇದರಿಂದ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಇತರೆ ಟೀಮ್ ಇಂಡಿಯಾ ಆಟಗಾರರು ಅಸಮಾಧಾನಗೊಂಡರು.

ಹೀಗೆ 31 ರನ್​ಗಳಿಸಿದ್ದ ವೇಳೆ ವಿಭಿನ್ನವಾಗಿ ಜೀವದಾನ ಪಡೆದ ಶಾನ್ ಮಸೂದ್ ಅಂತಿಮವಾಗಿ 34 ಎಸೆತಗಳಲ್ಲಿ 51 ರನ್ ಗಳಿಸಿ ಪಾಕ್ ತಂಡದ ಮೊತ್ತವನ್ನು ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್​ಗೆ ತಂದು ನಿಲ್ಲಿಸಿದರು.

ಇದಾಗ್ಯೂ 160 ರನ್​ಗಳ ಟಾರ್ಗೆಟ್​ ಅನ್ನು ಬೆನ್ನತ್ತಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಅವರ ಅಜೇಯ 82 ರನ್​ಗಳ ನೆರವಿನಿಂದ  ಭರ್ಜರಿ ಜಯ ಸಾಧಿಸಿತು. ಈ ಮೂಲಕ 2021 ರ ಟಿ20 ವಿಶ್ವಕಪ್ ಸೋಲಿನ ಸೇಡನ್ನು ಟೀಮ್ ಇಂಡಿಯಾ ತೀರಿಸಿಕೊಂಡಿರುವುದು ವಿಶೇಷ.

 

 

 

 

Published On - 5:59 pm, Sun, 23 October 22