ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ವಿರಾಟ್ ಕೊಹ್ಲಿ (Virat Kohli) ದಿಢೀರ್ ಆಗಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡು ಕ್ರಿಕೆಟ್ ಜಗತ್ತಿಗೆ ಶಾಕ್ ಕೊಟ್ಟಿದ್ದಾರೆ. ಕೊಹ್ಲಿ ತಮ್ಮ ನಿರ್ಧಾರವನ್ನು ತಂಡದ ಆಟಗಾರರಿಗೆ ಶುಕ್ರವಾರವಷ್ಟೆ ತಿಳಿಸಿದರಂತೆ. ಬಿಸಿಸಿಐಗೆ (BCCI) ಶನಿವಾರ ಮಧ್ಯಾಹ್ನ ಹೇಳಿದರು ಎಂಬ ಮಾತುಗಳಿವೆ. ಕೊಹ್ಲಿಯ ಈ ಹಠಾತ್ ನಿರ್ಧಾರದಿಂದ ಕೋಟ್ಯಾಂತರ ಅಭಿಮಾನಿಗಳು ಶಾಕ್ ನಲ್ಲಿದ್ದಾರೆ. ಇತ್ತ ಭಾರತ ಟೆಸ್ಟ್ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಕೂಡ ಹುಟ್ಟುಕೊಂಡಿದೆ. ಕೆಎಲ್ ರಾಹುಲ್, ರಿಷಭ್ ಪಂತ್, ಆರ್. ಅಶ್ವಿನ್ ಹೀಗೆ ಕೆಲವು ಹೆಸರುಗಳು ಕೇಳಿಬರುತ್ತಿವೆ. ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ ಬೆನ್ನಲ್ಲೇ ಅನೇಕರು ಟ್ವೀಟ್ ಮಾಡುವ ಮೂಲಕ ಆಘಾತ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ಸೀಮಿತ ಓವರ್ಗಳ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ಈ ಬಗ್ಗೆ ಹೇಳಿಕೊಂಡಿದ್ದಾರೆ.
ರೋಹಿತ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೊಹ್ಲಿ ಜೊತೆಗಿರುವ ಟೆಸ್ಟ್ ಪಂದ್ಯದ ಫೋಟೋ ಒಂದನ್ನು ಹಂಚಿಕೊಂಡು, “ಆಘಾತವಾಯಿತು!! ಆದರೆ ಭಾರತದ ನಾಯಕನಾಗಿ ಯಶಸ್ವಿ ಪ್ರದರ್ಶನ ನೀಡಿದಕ್ಕೆ ಅಭಿನಂದನೆಗಳು,” ಎಂದು ಬರೆದುಕೊಂಡಿದ್ದಾರೆ.
33 ವರ್ಷದ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪದತ್ಯಾಗದ ನಿರ್ಧಾರವನ್ನು ಪ್ರಕಟಿಸಿದ್ದು, ಅವರಿಗೆ ಧನ್ಯವಾದ ಹೇಳುವ ಮೂಲಕ ಬಿಸಿಸಿಐ ಕೂಡ ಅದನ್ನು ಅಂಗೀಕರಿಸಿದೆ. ಬಿಸಿಸಿಐ ಜತೆಗಿನ ತಮ್ಮ ಸಂಬಂಧ ಹಳಸಿರುವ ಸಮಯದಲ್ಲೇ ಕೊಹ್ಲಿ ಈ ದಿಢೀರ್ ನಿರ್ಧಾರ ಪ್ರಕಟಿಸಿರುವುದು ಹಲವಾರು ಅನುಮಾನ ಮತ್ತು ಗೊಂದಲಗಳಿಗೂ ಕಾರಣವಾಗಿದೆ.
ಕೊಹ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಭಾರತ ತಂಡದ ಮೂರೂ ಮಾದರಿಯ ಕ್ರಿಕೆಟ್ನ ನಾಯಕ ಸ್ಥಾನದಿಂದ ಕೆಳಗಿಳಿದಂತಾಗಿದೆ. ಏಕದಿನ ಹಾಗೂ ಟಿ20 ಮಾದರಿಯ ನಾಯಕತ್ವವನ್ನು ಈಗಾಗಲೇ ಬಿಸಿಸಿಐ, ರೋಹಿತ್ ಶರ್ಮಗೆ ನೀಡಿದ್ದರೆ, ಟೆಸ್ಟ್ ತಂಡಕ್ಕೆ ಯಾರು ನಾಯಕರಾಗಲಿದ್ದಾರೆ ಎನ್ನುವ ಕುತೂಹಲ ಈಗ ಆರಂಭವಾಗಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿ ಅವರ ಈ ನಿರ್ಧಾರ ಅವರ ವೈಯಕ್ತಿಕವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. “ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಎಲ್ಲ ಮಾದರಿಗಳಲ್ಲಿ ವೇಗವಾಗಿ ಬಹು ಎತ್ತರಕ್ಕೆ ದಾಪುಗಾಲು ಇಟ್ಟಿದೆ. ಟೆಸ್ಟ್ ತಂಡಕ್ಕೆ ರಾಜೀನಾಮೆ ಘೋಷಣೆ ಮಾಡಿರುವುದು ಅವರ ವೈಯಕ್ತಿಕ ನಿರ್ಧಾರದೆ. ಕೊಹ್ಲಿ ಅವರ ಈ ನಿರ್ಧಾರವನ್ನು ಬಿಸಿಸಿಐ ಗೌರವಿಸುತ್ತದೆ. ಭವಿಷ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅವರೊಬ್ಬ ಶ್ರೇಷ್ಠ ಆಟಗಾರ. ವೆಲ್ ಡನ್,” ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.
Virat Kohli Resigns: ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಗ್ಗೆ ಸೌರವ್ ಗಂಗೂಲಿ ಮಾತು: ಏನಂದ್ರು ಕೇಳಿ
U19 World Cup 2022: ಯಶ್ ಧುಲ್ ಭರ್ಜರಿ ಆಟ: ಅಂಡರ್-19 ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಭಾರತಕ್ಕೆ ಗೆಲುವು