South Africa vs India: ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ

ICC warns Virat Kohli's Team India: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರೀ ಸದ್ದು ಮಾಡಿ ವಿವಾದಕ್ಕೆ ಕಾರಣವಾಗಿದ್ದ ಡಿಆರ್​ಎಸ್ ತೀರ್ಪು ಬಗ್ಗೆ ಐಸಿಸಿ ಟೀಮ್ ಇಂಡಿಯಾಕ್ಕೆ ಖಡಕ್ ಆಗಿ ಎಚ್ಚರಿಕೆಯನ್ನು ರವಾನಿಸಿದೆ.

South Africa vs India: ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ
Team India Virat Kohli
Follow us
TV9 Web
| Updated By: Vinay Bhat

Updated on: Jan 16, 2022 | 12:23 PM

ಭಾರತ ಟೆಸ್ಟ್ ಕ್ರಿಕೆಟ್​​ಗೆ ವಿರಾಟ್ ಕೊಹ್ಲಿ (Virat Kohli) ದಿಢೀರ್ ವಿದಾಯ ಘೋಷಿಸಿದ ಆಘಾತದಲ್ಲಿ ಟೀಮ್ ಇಂಡಿಯಾವಿದೆ. ಸದ್ದಿಲ್ಲದೆ, ಯಾವುದೇ ಮುನ್ಸೂಚನೆಯನ್ನೂ ನೀಡದೆ ಕೊಹ್ಲಿ ಟೆಸ್ಟ್​ ಕ್ರಿಕೆಟ್ ನಾಯಕತ್ವ ತ್ಯಜಿಸಿರುವುದು ಅಭಿಮಾನಿಗಳ ಜೊತೆ ತಂಡದ ಆಟಗಾರರಿಗೂ ಶಾಕ್ ಉಂಟು ಮಾಡಿದೆ. ಇದರ ಜೊತೆಗೆ ಭಾರತ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಅಂತಿಮ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರೀ ಸದ್ದು ಮಾಡಿ ವಿವಾದಕ್ಕೆ ಕಾರಣವಾಗಿದ್ದ ಡಿಆರ್​ಎಸ್ ತೀರ್ಪು ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಕೆಲವು ವಿಚಾರಗಳನ್ನು ಹಂಚಿಕೊಂಡಿದೆ. ಜೊತೆಗೆ ಟೀಮ್ ಇಂಡಿಯಾಕ್ಕೆ ಖಡಕ್ ಆಗಿ ಎಚ್ಚರಿಕೆಯನ್ನು ರವಾನಿಸಿದೆ. ಹಾಗಿದ್ರೆ ಏನಿದು ಡಿಆರ್​ಎಸ್ ವಿವಾದ (DRS Controversy)?, ಐಸಿಸಿ ನೀಡಿರುವ ಹೇಳಿಕೆಯಲ್ಲಿ ಏನಿದೆ? ಎಂಬುದನ್ನು ನೋಡೋಣ.

ಏನಿದು ವಿವಾದ?:

ಮೂರನೇ ಟೆಸ್ಟ್​ನ ಮೂರನೇ ಭಾರತ ತಂಡ ಆಫ್ರಿಕಾಕ್ಕೆ ಗೆಲ್ಲಲು 212 ರನ್​ಗಳ ಟಾರ್ಗೆಟ್ ನೀಡಿತು. ಅದರಂತೆ 21ನೇ ಓವರ್‌ನ ಆರ್. ಅಶ್ವಿನ್ ಅವರ 4ನೇ ಎಸೆತದಲ್ಲಿ ನಾಯಕ ಡೀನ್‌ ಎಲ್ಗರ್‌ ಪ್ಲಂಬ್‌ ಎಲ್‌ಬಿಡಬ್ಲ್ಯು ಆದರು. ಸ್ಟ್ರೈಕ್‌ ಅಂಪೈರ್‌ ಮರಾಯಿಸ್‌ ಎರಾಸ್ಮಸ್‌ ಔಟ್‌ ಎಂದು ತೀರ್ಪು ಕೂಡ ನೀಡಿದರು. ಆದರೆ, ಎಲ್ಗರ್​ಗೆ ಔಟ್ ಬಗ್ಗೆ ಅನುಮಾನ ಇದ್ದ ಕಾರಣ ಡಿಆರ್‌ಎಸ್‌ ಮೊರೆ ಹೋದರು. ಡಿಆರ್​ಎಸ್​ನಲ್ಲಿ ವೀಕ್ಷಿಸಿದಾಗ 3ಡಿ ಸ್ಪಿನ್‌ ವಿಷನ್‌ ತಂತ್ರಜ್ಞಾನದಲ್ಲಿ ಚೆಂಡು ವಿಕೆಟ್‌ಗೆ ಬಡಿಯದೇ ಮೇಲೆ ಹೋಗುತ್ತಿದೆ ಎಂದು ತೋರಿಸಿತು. ಆದರೆ, ಚೆಂಡು ಎಲ್ಗರ್‌ ಅವರ ಮಂಡಿಗಿಂತಲೂ ಕೆಳಗೆ ಬಡಿದಿದ್ದ ಕಾರಣ ಅದು ಸ್ಪಷ್ಟವಾಗಿ ವಿಕೆಟ್‌ಗಿಂತ ಮೇಲೆ ಹೋಗಲು ಖಂಡಿತಾ ಸಾಧ್ಯವಿಲ್ಲ ಎಂಬಂತ್ತಿತ್ತು. ಥರ್ಡ್ ಅಂಪೈರ್ ಆನ್‌ ಫೀಲ್ಡ್‌ ಅಂಪೈರ್‌ ಮರಾಯಿಸ್‌ ಎರಾಸ್ಮಸ್‌ ಬಳಿ ನಿಮ್ಮ ನಿರ್ಧಾರವನ್ನು ಬದಲಿಸಿ ನಾಟೌಟ್ ತೀರ್ಪು ಪ್ರಕಟಿಸುವಂತೆ ಹೇಳಿದರು.

ಇತ್ತ ಡಿಆರ್‌ಎಸ್‌ ತೀರ್ಪು ಕಂಡು ವಿರಾಟ್‌ ಕೊಹ್ಲಿ ಕೆಂಡಾಮಂಡಲವಾದರು. ಥರ್ಡ್ ಅಂಪೈರ್ ತೀರ್ಪು ಬಂದ ಬಳಿಕ ಬೌಲಿಂಗ್ ತುದಿಯಲ್ಲಿದ್ದ ಕೊಹ್ಲಿ ಸ್ಟಂಪ್ ಮೈಕ್ ಬಳಿ ಬಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. “ನಿಮ್ಮ ತಂಡದವರು ಚೆಂಡನ್ನು ಹೊಳಪುಗೊಳಿಸುವಾಗ ಮೊದಲು ಗಮನಿಸಿ. ಬರೀ ಎದುರಾಳಿ ತಂಡದವರ ಮೇಲೆ ಕಣ್ಣಿಡುವುದಲ್ಲ…” ಎಂದು ಸಿಟ್ಟು ತೋರ್ಪಡಿಸಿದರು. ಕೆಎಲ್‌ ರಾಹುಲ್‌ ಕೂಡ ಮಾತಿಗಳಿದು, “ಟೀಮ್ ಇಂಡಿಯಾದ 11 ಆಟಗಾರರ ವಿರುದ್ಧ ಇಡೀ ದಕ್ಷಿಣ ಆಫ್ರಿಕಾವೇ ಆಡುತ್ತಿದೆ,” ಎಂದು ಅಸಾಮಾಧನಗೊಂಡರು. ಇತ್ತ ಆರ್‌ ಅಶ್ವಿನ್‌ ಕೂಡ ಪ್ರತಿಕ್ರಿಯೆ ನೀಡಿ, “ನೀವು ಸೂಪರ್​ಸ್ಪೋರ್ಟ್​ನವರು ಗೆಲ್ಲಲು ಇನ್ನೂ ಉತ್ತಮ ಮಾರ್ಗಗಳನ್ನ ಹುಡುಕಿರಿ” ಎಂದು ಸ್ಟಂಪ್ ಮೈಕ್ ಬಳಿ ಬಂದು ಕಿಚಾಯಿಸಿದರು.

ಭಾರತೀಯ ಆಟಗಾರರ ಈ ವರ್ತನೆ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಅನೇಕರು ಕೊಹ್ಲಿ ವರ್ತನೆಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ನಡುವೆ ಇದೀಗ ಐಸಿಸಿ ಟೀಮ ಇಂಡಿಯಾಕ್ಕೆ ಎಚ್ಚರಿಕೆ ನೀಡಿದೆ. ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿರುವ ಐಸಿಸಿ, ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್​ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಮತ್ತೆ ಇಂತಹ ತಪ್ಪು ಪುನರಾವರ್ತನೆಯಾದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಹೇಳಿದೆ.

Virat Kohli Test Captaincy: ಟೆಸ್ಟ್ ನಾಯಕತ್ವ ತ್ಯಜಿಸುವ ಬಗ್ಗೆ ಕೊಹ್ಲಿ ಮೊದಲು ಹೇಳಿದ್ದು ಯಾರಿಗೆ ಗೊತ್ತಾ?

Virat Kohli: ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ ಬೆನ್ನಲ್ಲೇ ರೋಹಿತ್ ಶರ್ಮಾರಿಂದ ಇನ್​ಸ್ಟಾದಲ್ಲಿ ಪೋಸ್ಟ್

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು