ಕೆಎಲ್ ರಾಹುಲ್, ರೋಹಿತ್ಗೆ ಅಲ್ಲ, ಈತನಿಗೆ ನಾಯಕತ್ವ ನೀಡಿ ಎಂದ ಸುನಿಲ್ ಗವಾಸ್ಕರ್
Sunil Gavaskar: ರಿಕಿ ಪಾಂಟಿಂಗ್ ಕೆಳಗಿಳಿದಾಗ ರೋಹಿತ್ ಶರ್ಮಾಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ನೀಡಲಾಯಿತು. ಆ ಬಳಿಕ ಅವರ ಬ್ಯಾಟಿಂಗ್ನಲ್ಲಾದ ಬದಲಾವಣೆಯನ್ನು ನೋಡಿ.
ಟೀಮ್ ಇಂಡಿಯಾ (Team India) ಟೆಸ್ಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ (Virat Kohli) ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಭಾರತ ತಂಡದಲ್ಲಿ ಕೊಹ್ಲಿಯ ಕ್ಯಾಪ್ಟನ್ಸಿಯ ಯುಗಾಂತ್ಯವಾಗಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು (Indian Team Test Captain)? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ. ಈ ಪ್ರಶ್ನೆಗಳಿಗೆ ಉತ್ತರವಾಗಿ ಸದ್ಯ ಕೇಳಿ ಬರುತ್ತಿರುವ ಉತ್ತರ ರೋಹಿತ್ ಶರ್ಮಾ, ಕೆಎಲ್ ರಾಹುಲ್. ಆದರೆ ಈ ಇಬ್ಬರು ಆಟಗಾರರಿಗಿಂತ ಮತ್ತೋರ್ವ ಆಟಗಾರನಿಗೆ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕತ್ವವನ್ನು ನೀಡಿ ಎಂದು ಸಲಹೆ ನೀಡಿದ್ದಾರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್.
ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕತ್ವದ ಬಗ್ಗೆ ಮಾತನಾಡಿದ ಸುನಿಲ್ ಗವಾಸ್ಕರ್, ಸದ್ಯ ಆಯ್ಕೆದಾರರು ವಿರಾಟ್ ಕೊಹ್ಲಿಯ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವಾಗ ಚರ್ಚೆಯಲ್ಲಿ ತೊಡಗಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ಯಾರು ಮುಂದಕ್ಕೆ ಕೊಂಡೊಯ್ಯಬೇಕು ಎಂಬುದರ ಕುರಿತು ಆಯ್ಕೆ ಸಮಿತಿಯು ಸಾಕಷ್ಟು ಚರ್ಚೆ ನಡೆಸಲಿದೆ. ಇಲ್ಲಿ ಮೊದಲ ಆಯ್ಕೆ ಎಂಬುದು ಎಲ್ಲಾ ಮಾದರಿ ಕ್ರಿಕೆಟ್ಗೆ ಆಯ್ಕೆಯಾಗುವ ಆಟಗಾರನಾಗಿರಬೇಕು. ಅಂತಹ ಆಟಗಾರರಿರುವಾಗ ಆಯ್ಕೆ ಕೂಡ ತುಂಬಾ ಸುಲಭ. ಹೀಗಾಗಿಯೇ ನಾನು ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಭಾರತ ಟೆಸ್ಟ್ ತಂಡದ ನಾಯಕನಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದು ಗವಾಸ್ಕರ್ ತಿಳಿಸಿದ್ದಾರೆ.
ನನ್ನ ಪ್ರಕಾರ ರಿಷಭ್ ಪಂತ್ ಯಾಕೆ ನಾಯಕ ಆಗಬೇಕೆಂದರೆ, ಐಪಿಎಲ್ನಲ್ಲಿ ರಿಕಿ ಪಾಂಟಿಂಗ್ ಕೆಳಗಿಳಿದಾಗ ರೋಹಿತ್ ಶರ್ಮಾಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ನೀಡಲಾಯಿತು. ಆ ಬಳಿಕ ಅವರ ಬ್ಯಾಟಿಂಗ್ನಲ್ಲಾದ ಬದಲಾವಣೆಯನ್ನು ನೋಡಿ. ಇದ್ದಕ್ಕಿದ್ದಂತೆ ನಾಯಕನ ಜವಾಬ್ದಾರಿಯು ಅವರನ್ನು ಅತ್ಯುತ್ತಮ ಬ್ಯಾಟರ್ ಆಗಿ ರೂಪಿಸಿತು. 50 ರಿಂದ ನೂರು, 150 ಮತ್ತು 200..ಹೀಗೆ ರೋಹಿತ್ ಶರ್ಮಾ ಅದ್ಭುತ ಇನಿಂಗ್ಸ್ಗಳನ್ನು ಆಡಲಾರಂಭಿಸಿದರು. ರಿಷಬ್ ಪಂತ್ ಅವರಿಗೂ ಇಂತಹ ಜವಾಬ್ದಾರಿ ನೀಡುವುದರಿಂದ ಅವರಿಂದ ದಕ್ಷಿಣ ಆಫ್ರಿಕಾ ವಿರುದ್ದ ಮೂಡಿಬಂದ ಅದ್ಭುತ ಶತಕಗಳಂತೆ ಅತ್ಯುತ್ತಮ ಆಟವನ್ನು ನಾವು ಎದುರು ನೋಡಬಹುದು. ಹೀಗಾಗಿ ನನ್ನ ಪ್ರಕಾರ ಪಂತ್ಗೆ ಟೆಸ್ಟ್ ತಂಡ ನಾಯಕತ್ವ ನೀಡುವುದು ಸೂಕ್ತ ಎಂದು ಗವಾಸ್ಕರ್ ತಿಳಿಸಿದ್ದಾರೆ.
ಈಗಾಗಲೇ ದೆಹಲಿ ರಣಜಿ ತಂಡವನ್ನು ಹಾಗೂ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ರಿಷಭ್ ಪಂತ್ ಅವರಿಗೆ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕತ್ವ ಒಲಿಯಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಯುವ ಬೌಲರ್..!
ಇದನ್ನೂ ಓದಿ: ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Sunil Gavaskar Says Rishabh Pant Can Become India’s Next Test Captain)