Rohit Sharma: ಐಪಿಎಲ್ ​ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ರೋಹಿತ್ ಶರ್ಮಾ

Rohit Sharma's Knee Surgery: ರೋಹಿತ್ ಶರ್ಮಾ ಅವರು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದು, ಮಂಡಿಯ ದೀರ್ಘಕಾಲದ ಗಾಯದಿಂದ ಬಳಲುತ್ತಿರುವ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. 2027ರ ವಿಶ್ವಕಪ್ ಗಾಗಿ ಚೇತರಿಸಿಕೊಳ್ಳಲು ಇದು ಸೂಕ್ತ ಸಮಯ ಎಂದು ಅವರು ಭಾವಿಸಿದ್ದಾರೆ. ಐಪಿಎಲ್ ನಂತರ ಶಸ್ತ್ರಚಿಕಿತ್ಸೆ ನಡೆಯಲಿದೆ ಮತ್ತು ಚೇತರಿಕೆಗೆ 3-4 ತಿಂಗಳು ಬೇಕಾಗಬಹುದು.

Rohit Sharma: ಐಪಿಎಲ್ ​ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ರೋಹಿತ್ ಶರ್ಮಾ
Rohit Sharma

Updated on: May 21, 2025 | 7:36 PM

ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ರೋಹಿತ್ ಶರ್ಮಾ (Rohit Sharma) ಇನ್ನು ಮುಂದೆ ಏಕದಿನ ತಂಡದಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ (IPL 2025) ಮುಂಬೈ ಇಂಡಿಯನ್ಸ್ ಪರ ಕಳೆದ ಕೆಲವು ಪಂದ್ಯಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್ ಮುಗಿದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ವರದಿಗಳ ಪ್ರಕಾರ, ರೋಹಿತ್ ಕಳೆದ ಐದು ವರ್ಷಗಳಿಂದ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಐಪಿಎಲ್ ನಂತರ ಅವರು ಈ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ.

ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ರೋಹಿತ್

ವರದಿಗಳ ಪ್ರಕಾರ, ರೋಹಿತ್ ಶರ್ಮಾ 2027 ರ ವಿಶ್ವಕಪ್​ಗಾಗಿ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಇದು ಸರಿಯಾದ ಸಮಯ ಎಂಬುದು ರೋಹಿತ್ ಅಭಿಪ್ರಾಯ. ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದ ಕಾರಣ ಮತ್ತು ದೊಡ್ಡ ಪಂದ್ಯಾವಳಿಗಳ ಕಾರಣದಿಂದಾಗಿ ಈ ಶಸ್ತ್ರಚಿಕಿತ್ಸೆಯನ್ನು ಬಹಳ ಸಮಯದಿಂದ ಮುಂದೂಡುತ್ತಿದ್ದಾರೆ. ಆದರೆ ಈಗ ಅವರು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದು, ಈಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಚೇತರಿಸಿಕೊಳ್ಳಲು ಅವರಿಗೆ ಸಾಕಷ್ಟು ಸಮಯವಿದೆ.

ರೋಹಿತ್ ಶರ್ಮಾ ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ಆಡುತ್ತಿಲ್ಲ. ಮುಂದಿನ 3 ತಿಂಗಳು ಯಾವುದೇ ಏಕದಿನ ಸರಣಿ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರೋಹಿತ್‌ಗೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯವಿದೆ. ರೋಹಿತ್ ಶರ್ಮಾ 2016 ರಲ್ಲಿ ಕ್ವಾಡ್ ಸ್ನಾಯುರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಅವರಿಗೆ 3 ತಿಂಗಳು ಬೇಕಾಯಿತು. ಮಂಡಿರಜ್ಜು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಅವರಿಗೆ 3-4 ತಿಂಗಳುಗಳು ಬೇಕಾಗಬಹುದು.

ರೋಹಿತ್- ಕೊಹ್ಲಿಗೆ ಎ+ ಗ್ರೇಡ್​ನಿಂದ ಹಿಂಬಡ್ತಿ? ಬಿಸಿಸಿಐ ಕಾರ್ಯದರ್ಶಿ ಹೇಳಿದ್ದೇನು?

2027 ರ ಏಕದಿನ ವಿಶ್ವಕಪ್

ಭಾರತ ತನ್ನ ಮುಂದಿನ ಏಕದಿನ ಸರಣಿಯನ್ನು ಬಾಂಗ್ಲಾದೇಶ ವಿರುದ್ಧ ಆಡಬೇಕಾಗಿದೆ. ಬಾಂಗ್ಲಾದೇಶ ಮತ್ತು ಭಾರತ ನಡುವಿನ ಸಂಬಂಧಗಳು ಕೂಡ ಹದಗೆಟ್ಟಿರುವುದರಿಂದ ಈ ಪ್ರವಾಸ ಇನ್ನೂ ದೃಢಪಟ್ಟಿಲ್ಲ. ಇದರರ್ಥ ರೋಹಿತ್‌ಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವುದಕ್ಕೆ ಇದು ಸರಿಯಾದ ಸಮಯ. ರೋಹಿತ್ 2027 ರ ವಿಶ್ವಕಪ್ ಗೆಲ್ಲಲು ಬಯಸಿದರೆ, ಅವರು ಸಂಪೂರ್ಣವಾಗಿ ಫಿಟ್ ಆಗಿರಬೇಕು. ಹೀಗಾಗಿ ಅವರಿಗೆ ಈ ಶಸ್ತ್ರಚಿಕಿತ್ಸೆ ಬಹಳ ಅಗತ್ಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:31 pm, Wed, 21 May 25