AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಪ್ರೇಯಸಿಗಾಗಿ ಐಷರಾಮಿ ಫ್ಲಾಟ್ ಖರೀದಿಸಿದ ಶಿಖರ್ ಧವನ್; ಇದರ ಬೆಲೆ ಎಷ್ಟು ಕೋಟಿ ಗೊತ್ತಾ?

Shikhar Dhawan's Luxurious New Home: ಕ್ರಿಕೆಟಿಗ ಶಿಖರ್ ಧವನ್ ತಮ್ಮ ಹೊಸ ಪ್ರೇಯಸಿ ಸೋಫಿ ಶೈನ್‌ಗಾಗಿ ಗುರುಗ್ರಾಮ್‌ನಲ್ಲಿ 69 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. 6040 ಚದರ ಅಡಿ ವಿಸ್ತೀರ್ಣದ ಈ ಅಪಾರ್ಟ್‌ಮೆಂಟ್ 'ದಿ ಡೇಲಿಯಾಸ್' ಎಂಬ ಸೂಪರ್-ಐಷಾರಾಮಿ ವಸತಿ ಯೋಜನೆಯಲ್ಲಿದೆ. ಸೋಫಿ ಶೈನ್ ಐರ್ಲೆಂಡ್ ಮೂಲದವರಾಗಿದ್ದು, ಈ ಜೋಡಿ 2025 ರ ಆರಂಭದಲ್ಲಿ ಡೇಟಿಂಗ್ ಮಾಡುತ್ತಿರುವುದಾಗಿ ಘೋಷಿಸಿತ್ತು.

ಹೊಸ ಪ್ರೇಯಸಿಗಾಗಿ ಐಷರಾಮಿ ಫ್ಲಾಟ್ ಖರೀದಿಸಿದ ಶಿಖರ್ ಧವನ್; ಇದರ ಬೆಲೆ ಎಷ್ಟು ಕೋಟಿ ಗೊತ್ತಾ?
Shikhar Dhawan
ಪೃಥ್ವಿಶಂಕರ
|

Updated on:May 21, 2025 | 5:27 PM

Share

ಕಳೆದ ಕೆಲವು ತಿಂಗಳುಗಳಿಂದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ (Shikhar Dhawan) ಅವರ ವೈಯಕ್ತಿಕ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. ಧವನ್, ಐರ್ಲೆಂಡ್‌ ಮೂಲದ ಸೋಫಿ ಶೈನ್ (Sophie Shine) ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿರುವ ಬಗ್ಗೆ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದ್ದರು. ಅಲ್ಲದೆ ಸೋಫಿ, ಧವನ್ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿ ಧವನ್​ರನ್ನು ತನ್ನ ಪ್ರೀತಿ ಎಂದು ಬರೆದುಕೊಂಡಿದ್ದರು. ಇದರೊಂದಿಗೆ ಸೋಫಿ, ಧವನ್ ಅವರ ಹೊಸ ಪ್ರೇಯಸಿ ಎಂಬುದು ದೃಢಪಟ್ಟಿತ್ತು. ಇದೀಗ ಹೊಸ ಪ್ರೇಯಸಿಗಾಗಿ ಧವನ್ ಕೋಟಿ ಮೌಲ್ಯದ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಧವನ್ ಗುರುಗ್ರಾಮ್‌ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಡಿಎಲ್‌ಎಫ್‌ನ ಸೂಪರ್-ಐಷಾರಾಮಿ ವಸತಿ ಯೋಜನೆ ‘ದಿ ಡೇಲಿಯಾಸ್’ ನಲ್ಲಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.

ಅಪಾರ್ಟ್ಮೆಂಟ್ ಬೆಲೆ ಎಷ್ಟು?

ರಿಯಲ್ ಎಸ್ಟೇಟ್ ಡೇಟಾ ವಿಶ್ಲೇಷಣಾ ಸಂಸ್ಥೆ CRE ಮ್ಯಾಟ್ರಿಕ್ಸ್ ಪ್ರಕಾರ, ಈ ಅಪಾರ್ಟ್ಮೆಂಟ್ 6040 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, ಇದರ ಬೆಲೆ ಸುಮಾರು 65.61 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಅಲ್ಲದೆ ಇದಕ್ಕೆ 3.28 ಕೋಟಿ ರೂ.ಗಳನ್ನು ಸ್ಟಾಂಪ್ ಡ್ಯೂಟಿಯಾಗಿ ಪಾವತಿಸಲಾಗಿದೆ. ಇದರರ್ಥ ಧವನ್ ಈ ಅಪಾರ್ಟ್ಮೆಂಟ್ಗಾಗಿ ಸುಮಾರು 69 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಡಿಎಲ್‌ಎಫ್ ಹರಿಯಾಣದ ಗುರುಗ್ರಾಮ್‌ನಲ್ಲಿರುವ ಡಿಎಲ್‌ಎಫ್ ಹಂತ 5 ರಲ್ಲಿ 17 ಎಕರೆ ವಿಸ್ತೀರ್ಣದ ಸೂಪರ್ ಐಷಾರಾಮಿ ವಸತಿ ಯೋಜನೆ ‘ದಿ ಡೇಲಿಯಾಸ್’ ಅನ್ನು ಪ್ರಾರಂಭಿಸಿತ್ತು. ಇದರಲ್ಲಿ 420 ಅಪಾರ್ಟ್‌ಮೆಂಟ್‌ಗಳು ಮತ್ತು ಪೆಂಟ್‌ಹೌಸ್‌ಗಳು ಸೇರಿವೆ.

2025 ರ ಆರಂಭದಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಸಮಯದಲ್ಲಿ ಶಿಖರ್ ಮತ್ತು ಸೋಫಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಾದ ನಂತರ, ಈ ಜೋಡಿ ಹಲವು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿತು. ಆ ಬಳಿಕ ಧವನ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಗುಸುಗುಸು ಆರಂಭವಾಗಿತ್ತು. ಆದರೆ ಮೇ 2025 ರಲ್ಲಿ, ಇಬ್ಬರೂ ಡೇಟಿಂಗ್ ಮಾಡುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇದೀಗ ಒಟ್ಟಿಗೆ ವಾಸಿಸಲು ಹೊಸ ಮನೆ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Shikhar Dhawan: ‘ನನ್ನ ಪ್ರೀತಿ’; ಹೊಸ ಪ್ರೇಯಸಿಯನ್ನು ಅಧಿಕೃತವಾಗಿ ಪರಿಚಯಿಸಿದ ಶಿಖರ್ ಧವನ್

ಸೋಫಿ ಶೈನ್ ಯಾರು?

ಸೋಫಿ ಶೈನ್ ಮೂಲತಃ ಐರ್ಲೆಂಡ್‌ನವರು. ವರದಿಗಳ ಪ್ರಕಾರ, ಸೋಫಿ ಕ್ಯಾಸಲ್‌ರಾಯ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಅವರು ಲಿಮೆರಿಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಪದವಿ ಪಡೆದಿದ್ದು, ಉತ್ಪನ್ನ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಸ್ತುತ ಅಬುಧಾಬಿಯ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Wed, 21 May 25