Rohit Sharma: ಅಂಪೈರ್​ಗೆ ಸಿಟ್ಟು ತರಿಸಿದ ರೋಹಿತ್ ಶರ್ಮಾ ನಡೆ: ಡಿಆರ್​ಎಸ್​ ವಿಚಾರದಲ್ಲಿ ತಮಾಷೆ ಮಾಡಿದ್ರಾ ಹಿಟ್​ಮ್ಯಾನ್?

IND vs AUS, WTC Final 2023: ಡಬ್ಲ್ಯೂಟಿಸಿ 2023 ಫೈನಲ್​ನ ದ್ವಿತೀಯ ದಿನದಾಟ ಕೂಡ ಕೆಲ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದರ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಡಿದ ರೀತಿ ಅಂಪೈರ್​ಗೆ ಸಿಟ್ಟು ತರಿಸಿತು.

Rohit Sharma: ಅಂಪೈರ್​ಗೆ ಸಿಟ್ಟು ತರಿಸಿದ ರೋಹಿತ್ ಶರ್ಮಾ ನಡೆ: ಡಿಆರ್​ಎಸ್​ ವಿಚಾರದಲ್ಲಿ ತಮಾಷೆ ಮಾಡಿದ್ರಾ ಹಿಟ್​ಮ್ಯಾನ್?
Rohit Sharna DRS and Umpire
Follow us
Vinay Bhat
|

Updated on: Jun 09, 2023 | 9:08 AM

ಎರಡನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final 2023) ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿದ್ದು ಟೀಮ್ ಇಂಡಿಯಾ ಸಂಕಷ್ಟದಲ್ಲಿದೆ. ಆಸ್ಟ್ರೇಲಿಯಾವನ್ನು 469 ರನ್​ಗಳಿಗೆ ಆಲೌಟ್ ಮಾಡಿ ಪ್ರಥಮ ಇನ್ನಿಂಗ್ಸ್ ಶುರುಮಾಡಿರುವ ಭಾರತ (India vs Australia) ದ್ವಿತೀಯ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿದ್ದು, 318 ರನ್​ಗಳ ಹಿನ್ನಡೆಯಲ್ಲಿದೆ. ಡಬ್ಲ್ಯೂಟಿಸಿ 2023 ಫೈನಲ್​ನ ದ್ವಿತೀಯ ದಿನದಾಟ ಕೂಡ ಕೆಲ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದರ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಆಡಿದ ರೀತಿ ಅಂಪೈರ್​ಗೆ ಸಿಟ್ಟು ತರಿಸಿತು.

ಡಿಆರ್​ಎಸ್ ವಿಚಾರದಲ್ಲಿ ರೋಹಿತ್ ಶರ್ಮಾ ನಡೆದುಕೊಂಡ ರೀತಿ ಅಂಪೈರ್​ನ ಕೆಂಗಣ್ಣಿಗೆ ಗುರಿಯಾಯಿತು. ಈ ಘಟನೆ ಆಸೀಸ್ ಬ್ಯಾಟಿಂಗ್ ಇನ್ನಿಂಗ್ಸ್​ನ 97ನೇ ಓವರ್​ನಲ್ಲಿ ನಡೆದಿದೆ. ಮೊಹಮ್ಮದ್ ಶಮಿ ಅವರು ಅಲೆಕ್ಸ್ ಕ್ಯಾರಿಗೆ ಚೆಂಡನ್ನು ನೇರವಾಗಿ ಎಸೆದರು. ಬಾಲ್ ಬ್ಯಾಟ್​ಗೆ ತಾಗದೆ ಪ್ಯಾಡ್​ಗೆ ಬಡಿಯಿತು. ಎಲ್​ಬಿಗೆ ಮನವಿ ಮಾಡಿದರು. ಅಂಪೈರ್ ಔಟ್ ನೀಡದ ಪರಿಣಾಮ ವಿಕೆಟ್ ಕೀಪರ್ ಕೆಎಸ್ ಭರತ್ ಬಳಿ ರೋಹಿತ್ ಶರ್ಮಾ ತೆರಳಿ ರಿವ್ಯೂ ತೆಗೆದುಕೊಳ್ಳಬೇಕಾ ಎಂಬ ಚರ್ಚೆ ನಡೆಸಿದರು.

ಇದನ್ನೂ ಓದಿ
Image
WTC Final, IND vs AUS: ಭಾರತಕ್ಕೆ ಕೈಕೊಟ್ಟ ಟಾಪ್ 4 ಬ್ಯಾಟರ್​ಗಳು: ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿರುವ ಭಾರತಕ್ಕೆ ಅಜಿಂಕ್ಯ ರಹಾನೆ ಆಸರೆ
Image
WTC Final 2023: ಭಾರತ ಗೆಲ್ಲಲು ಸಾಧ್ಯವೇ ಇಲ್ಲ: ರಿಕಿ ಪಾಂಟಿಂಗ್
Image
Rohit Sharma: ಮತ್ತೊಮ್ಮೆ ಕೈ ಕೊಟ್ಟ ರೋಹಿತ್ ಶರ್ಮಾ..!
Image
Steve Smith: ಭರ್ಜರಿ ಸೆಂಚುರಿಯೊಂದಿಗೆ 7 ದಾಖಲೆ ಬರೆದ ಸ್ಟೀವ್ ಸ್ಮಿತ್

WTC Final 2023: 71/4..! ಆಸೀಸ್ ಬೌಲಿಂಗ್ ದಾಳಿಗೆ ಪತರುಗುಟ್ಟಿದ ವಿಶ್ವ ಕ್ರಿಕೆಟ್​ನ ಸೂಪರ್ ಸ್ಟಾರ್ಸ್..!​

ಕೊನೆಯದಾಗಿ ರೋಹಿತ್ ನಗುತ್ತಾ ಡಿಆರ್​ಎಸ್ ತೆಗೆದುಕೊಳ್ಳಲು ಮುಂದಾದರು. ಆದರೆ, ರಿವ್ಯೂ ತೆಗೆದುಕೊಳ್ಳಲು ನಾಯಕ ಎರಡೂ ಕೈಗಳನ್ನು ಜೋಡಿಸಬೇಕು. ರೋಹಿತ್ ಹೀಗೆ ಮಾಡಲಿಲ್ಲ. ತಮಾಷೆಗೆಂದು ಅರ್ಧದ ವರೆಗೆ ಎರಡು ಕೈಗಳನ್ನು ತಂದು ಹಿಂತೆಗೆದರು. ಇದರಿಂದ ಅಂಪೈರ್ ಸಿಟ್ಟಾದಂತೆ ಕಂಡುಬಂದಿತು. ಐಸಿಸಿ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

View this post on Instagram

A post shared by ICC (@icc)

ಆಸೀಸ್ 469ಕ್ಕೆ ಆಲೌಟ್-ಭಾರತ ಕಳಪೆ ಬ್ಯಾಟಿಂಗ್:

ಬೃಹತ್ ಮೊತ್ತ ಗಳಿಸುವ ಗುರಿಯೊಂದಿಗೆ 2ನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ಮೊದಲ ದಿನದ ಮೊತ್ತಕ್ಕೆ 142 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು. 146 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಹೆಡ್ 163 ರನ್ ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಆಟ 121 ರನ್​ಗೆ ಅಂತ್ಯವಾಯಿತು. ಅಲೆಕ್ಸ್ ಕ್ಯಾರಿ 48 ರನ್ ಗಳಿಸಿದರು. ಅಂತಿಮವಾಗಿ ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ 469 ರನ್ಸ್​ಗೆ ಆಲೌಟ್ ಆಯಿತು. ಭಾರತದ ಪರ ಸಿರಾಜ್ 4 ವಿಕೆಟ್ ಕಿತ್ತರು.

ಭಾರತ ಪರ ನಾಯಕ ರೋಹಿತ್​ ಶರ್ಮಾ (15) ಹಾಗೂ ಶುಭ್​ಮನ್​ ಗಿಲ್(13) ಮೊದಲ ಇನ್ನಿಂಗ್ಸ್​ ಆರಂಭಿಸಿದರು. ಆದರೆ, ಇಬ್ಬರೂ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು. ಬಳಿಕ ಕ್ರೀಸ್​ಗೆ ಬಂದ ಚೇತೇಶ್ವರ ಪೂಜಾರ (14) ಹಾಗೂ ವಿರಾಟ್​ ಕೊಹ್ಲಿ (14) ಕೂಡ ನಿರಾಸೆ ಮೂಡಿಸಿದರು. ಇದರ ನಡುವೆ ಐದನೇ ವಿಕೆಟ್​ಗೆ ಅಜಿಂಕ್ಯ ರಹಾನೆ (ಅಜೇಯ 29) ಹಾಗೂ ರವೀಂದ್ರ ಜಡೇಜಾ (48) ಉತ್ತಮ ಇನ್ನಿಂಗ್​ ಕಟ್ಟಿ ತಂಡಕ್ಕೆ ನೆರವಾದರು. ರಹಾನೆ ಹಾಗೂ ಶ್ರೀಕರ್ ಭರತ್ (5) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಧರಣಿನಿರತ ಮಹಿಳೆಯರನ್ನು ಜೊತೆಗೂಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
ಜನಪರ ಯೋಜನೆಗಳನ್ನು ಆಗಾಗ ಬದಲಾಯಿಸುತ್ತಿರಬೇಕಾಗುತ್ತದೆ: ಎನ್ ಎಸ್ ಬೋಸರಾಜು
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಒಂದೇ ಬೈಕ್​ನಲ್ಲಿ 8 ಜನ, ಜೊತೆಗೊಂದು ಹಾಸಿಗೆ; ಪೊಲೀಸರೇ ಕಂಗಾಲು!
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಕಾಡುಹಂದಿಗಳ ಕಾಟದಿಂದ ಪಾರಾಗಲು ಬೀಸಿದ್ದ ಬಲೆಗೆ ಸಿಕ್ಕಿಬಿದ್ದ ಹೆಬ್ಬಾವು
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ