AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಇತಿಹಾಸ ರಚಿಸಲು ಸಿದ್ದರಾದ ರೋಹಿತ್ ಶರ್ಮಾ: ದಿಗ್ಗಜರ ದಾಖಲೆ ಉಡೀಸ್ ಮಾಡ್ತಾರ ಹಿಟ್​ಮ್ಯಾನ್

IND vs WI 3rd ODI: ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಮೂರನೇ ಪಂದ್ಯ ನಡೆಯಲಿದೆ. ಇದರಲ್ಲೂ ಟೀಮ್ ಇಂಡಿಯಾ ಗೆದ್ದರೆ ಸರಣಿ ಕ್ಲೀನ್​ಸ್ವೀಪ್ ಗೈದ ಸಾಧನೆ ಮಾಡಲಿದೆ. ಜೊತೆಗೆ ರೋಹಿತ್ ಶರ್ಮಾ ಅವರು ಕಪಿಲ್ ದೇವ್, ಎಂಎಸ್ ಧೋನಿ, ವಿರಾಟ್ ಕೊಹ್ಲಿಯ ದಿಗ್ಗಜರ ಸಾಲಿಗೆ ಸೇರಲಿದ್ದಾರೆ.

Rohit Sharma: ಇತಿಹಾಸ ರಚಿಸಲು ಸಿದ್ದರಾದ ರೋಹಿತ್ ಶರ್ಮಾ: ದಿಗ್ಗಜರ ದಾಖಲೆ ಉಡೀಸ್ ಮಾಡ್ತಾರ ಹಿಟ್​ಮ್ಯಾನ್
Rohit Sharma Record IND vs SL
TV9 Web
| Edited By: |

Updated on: Feb 11, 2022 | 12:34 PM

Share

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ ಎರಡು ಪಂದ್ಯಗಳ ಪೈಕಿ ಎರಡನ್ನೂ ಭಾರತ (IND vs WI 3rd ODI) ಗೆದ್ದು ಬೀಗಿದೆ. ಈ ಮೂಲಕ ರೋಹಿತ್ ಶರ್ಮಾ (Rohi Sharma) ತಮ್ಮ ಚೊಚ್ಚಲ ನಾಯಕತ್ವದಲ್ಲಿ ನೂತನ ದಾಖಲೆ ಬರೆದರು. ಇದೀಗ ಇತಿಹಾಸ ರಚಿಸಲು ಹಿಟ್​ಮ್ಯಾನ್ ಸಜ್ಜಾಗಿದ್ದಾರೆ. ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಮೂರನೇ ಪಂದ್ಯ ನಡೆಯಲಿದೆ. ಇದರಲ್ಲೂ ಟೀಮ್ ಇಂಡಿಯಾ (Team India) ಗೆದ್ದರೆ ಸರಣಿ ಕ್ಲೀನ್​ಸ್ವೀಪ್ ಗೈದ ಸಾಧನೆ ಮಾಡಲಿದೆ. ಜೊತೆಗೆ ರೋಹಿತ್ ಶರ್ಮಾ ಅವರು ಕಪಿಲ್ ದೇವ್, ಎಂಎಸ್ ಧೋನಿ, ವಿರಾಟ್ ಕೊಹ್ಲಿಯ ದಿಗ್ಗಜರ ಸಾಲಿಗೆ ಸೇರಲಿದ್ದಾರೆ. ಹಾಗಾದ್ರೆ ರೋಹಿತ್ ಸೃಷ್ಟಿಸಲಿರುವ ಆ ದಾಖಲೆ ಏನು ಎಂಬುದನ್ನು ನೋಡೋಣ.

ಭಾರತ ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ 2017 ರಲ್ಲಿ ಕೊನೆಯದಾಗಿ ಏಕದಿನ ಸರಣಿಯನ್ನು ವೈಟ್​ವಾಷ್ ಮಾಡಿ ಗೆದ್ದಿತ್ತು. ಇದೀಗ ರೋಹಿತ್ ಕ್ಲೀನ್​ಸ್ವೀಪ್ ಮಾಡಿದರೆ 50 ಓವರ್​ಗಳ ಪಂದ್ಯದಲ್ಲಿ​​ ಈ ಸಾಧನೆ ಗೈದ ಭಾರತದ ಎಂಟನೇ ನಾಯಕ ಆಗಲಿದ್ದಾರೆ. ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ ವೈಟ್​ವಾಷ್ ಮಾಡಿದ ಮೊದಲ ನಾಯಕನಾಗಲಿದ್ದಾರೆ.

ಈ ಸಾಧನೆ ಮಾಡಿದ ಮೊದಲ ನಾಯಕ ಕಪಿಲ್ ದೇವ್ ಆಗಿದ್ದಾರೆ. ಇವರ ನಾಯಕತ್ವದಡಿಯಲ್ಲಿ ಭಾರತ 1982/83 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನ 3-0 ಅಂತರದಿಂದ ವೈಟ್​ವಾಷ್ ಮಾಡಿತ್ತು. ಟೀಮ್ ಇಂಡಿಯಾ ಈವರೆಗೆ ಏಕದಿನ ಕ್ರಿಕೆಟ್​ನಲ್ಲಿ 11 ವೈಟ್​ವಾಷ್ ಮಾಡಿದೆ. ಕೊಹ್ಲಿ ಮತ್ತು ಧೋನಿ ತಮ್ಮ ನಾಯಕತ್ವದಡಿಯಲ್ಲಿ ಮೂರು ಬಾರಿ ಎದುರಾಳಿಯನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದ್ದಾರೆ. ಇದೇ ಸಾಲಿನಲ್ಲಿ ದಿಲೀಪ್ ವೆಂಗಾಸ್ಕರ್, ಮೊಹಮ್ಮದ್ ಸಜರುದ್ದೀನ್ ಮತ್ತು ಗೌತಮ್ ಗಂಭೀರ್ ಹೆಸರು ಕೂಡ ಇದೆ.

ಇನ್ನು ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್​​ನಿಂದಲೂ ನೂತನ ದಾಖಲೆ ಮಾಡಲು ಸಜ್ಜಾಗಿದ್ದಾರೆ. ಇವರ ಖಾತೆಯಿಂದ ಕೇವಲ 1 ಸಿಕ್ಸ್​ ಸಿಡಿದರೆ ಭಾರತದಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಧೋನಿ ದಾಖಲೆ ಹಿಂದಿಕ್ಕಲಿದ್ದಾರೆ. ಎಂಎಸ್​ಡಿ 113 ಇನ್ನಿಂಗ್ಸ್​ಗಳಲ್ಲಿ 116 ಸಿಕ್ಸ್ ಬಾರಿಸಿದ್ದರೆ ರೋಹಿತ್ 68 ಇನ್ನಿಂಗ್ಸ್​ಗಳಲ್ಲಿ ಇಷ್ಟೇ ಸಿಕ್ಸ್ ಸಿಡಿಸಿದ್ದಾರೆ. ಅಂತೆಯೆ ರೋಹಿತ್ ಇನ್ನು 5 ಸಿಕ್ಸ್ ಸಿಡಿಸಿದರೆ ಭಾರತ ಪರ ಏಕದಿನ ಕ್ರಿಕೆಟ್​ನಲ್ಲಿ 250 ಸಿಕ್ಸ್ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆಯಲಿದ್ದಾರೆ.

ಟೀಮ್ ಇಂಡಿಯಾ ಸರಣಿ ಕ್ಲೀನ್​ಸ್ವೀಪ್ ಮಾಡುವತ್ತ ಚಿತ್ತ ನೆಟ್ಟಿದೆ. ಇತ್ತ ಪ್ರವಾಸಿ ಕೆರಿಬಿಯನ್ನರು ಕನಿಷ್ಠ ಒಂದು ಪಂದ್ಯವನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳುವ ಪ್ಲಾನ್​ನಲ್ಲಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 6 ವಿಕೆಟ್​ಗಳಿಂದ ಗೆದ್ದರೆ, ಬುಧವಾರ ಮುಕ್ತಾಯಗೊಂಡ ಎರಡನೇ ಕದನಲ್ಲಿ 44 ರನ್​ಗಳಿಂದ ಜಯಿಸಿತು. ಹೀಗೆ ಎರಡೂ ಪಂದ್ಯದಲ್ಲಿ ರೋಹಿತ್ (Rohit Sharma) ಪಡೆ ಗೆದ್ದು ಬೀಗಿದ್ದು ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಬೌಲರ್​ಗಳ ಅದ್ಭುತ ಪ್ರದರ್ಶನದಿಂದ ಜಯ ಸಾಧಿಸಿತ್ತು. ಬ್ಯಾಟಿಂಗ್​ನಲ್ಲಿ ನಿರೀಕ್ಷೆಗೆ ತಕ್ಕಂತೆ ಆಟವಾಡಿಲ್ಲ. ಹೀಗಾಗಿ ಈ ಕದನದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

Ajinkya Rahane: ಟೀಮ್ ಇಂಡಿಯಾ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಅಜಿಂಕ್ಯಾ ರಹಾನೆ: ಏನು ಹೇಳಿದ್ರು?

PKL 8: ಪ್ಲೇ ಆಫ್​​ಗೆ ಲಗ್ಗೆಯಿಟ್ಟ ಪಾಟ್ನಾ ಪೈರೇಟ್ಸ್: ಬೆಂಗಾಲ್‌ ವಾರಿಯರ್ -ದಬಾಂಗ್‌ ದಿಲ್ಲಿ ಪಂದ್ಯ ರೋಚಕ ಟೈ

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!