ಭಾರತ ಕ್ರಿಕೆಟ್ ತಂಡದ ನ್ಯೂಜಿಲೆಂಡ್ (India vs New Zealand) ಪ್ರವಾಸ ಮುಕ್ತಾಯಗೊಂಡಿದೆ. ಮಳೆಯ ನಡುವೆ ಸೋಲು-ಗೆಲುವನ್ನು ಕಂಡ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟಿ20 ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿತು. ಇತ್ತ ಶಿಖರ್ ಧವನ್ ನೇತೃತ್ವದಲ್ಲಿ ಏಕದಿನ ಸರಣಿಯನ್ನು 0-1 ಅಂತರದಿಂದ ಸೋತಿತು. ಇದರ ಬೆನ್ನಲ್ಲೇ ಭಾರತ ಮುಂದಿನ ಸವಾಲಿಗೆ ಸಜ್ಜಾಗಬೇಕಿದೆ. ಕಿವೀಸ್ ಪ್ರವಾಸದ ಬೆನ್ನಲ್ಲೇ ಟೀಮ್ ಇಂಡಿಯಾ ಬಾಂಗ್ಲಾದೇಶಕ್ಕೆ ತೆರಳುತ್ತಿದೆ. ಇಲ್ಲಿ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಹಿಂದಿನ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ಪ್ರಮುಖ ಹಿರಿಯ ಆಟಗಾರರಾದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರು ತಂಡ ಸೇರಿಕೊಳ್ಳಲಿದ್ದಾರೆ. ಹಾಗಾದರೆ ಭಾರತ-ಬಾಂಗ್ಲಾದೇಶ (India vs Bangladesh) ಸರಣಿ ಯಾವಾಗ ಆರಂಭ?, ತಂಡದಲ್ಲಿ ಯಾರೆಲ್ಲ ಇದ್ದಾರೆ? ಎಂಬುದನ್ನು ನೊಡೋಣ.
ಬಾಂಗ್ಲಾದೇಶ ವಿರುದ್ಧ ಭಾರತ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಡಿಸೆಂಬರ್ 4 ರಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಡಿ. 7 ರಂದು ದ್ವಿತೀಯ ಏಕದಿನ ಮತ್ತು ತೃತೀಯ ಪಂದ್ಯ ಡಿಸೆಂಬರ್ 10ಕ್ಕೆ ಆಯೋಜಿಸಲಾಗಿದೆ. ಈ ಮೂರೂ ಪಂದ್ಯ ಢಾಕಾದ ಬಾಂಗ್ಲಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಬಳಿಕ ಚಿತ್ತಗಾಂಗ್ನಲ್ಲಿ ಜರುಗಲಿರುವ ಮೊದಲ ಟೆಸ್ಟ್ ಡಿಸೆಂಬರ್ 14-18ರ ವರೆಗೆ ಇರಲಿದೆ. ನಂತರ ಡಿಸೆಂಬರ್ 22-26 ಎರಡನೇ ಟೆಸ್ಟ್ ಇದ್ದು ಢಾಕಾದಲ್ಲಿ ಆಯೋಜಿಸಲಾಗಿದೆ.
Cristiano Ronaldo: ವರ್ಷಕ್ಕೆ 1,687 ಕೋಟಿ ರೂ: ಹೊಸ ಕ್ಲಬ್ ಜೊತೆ ರೊನಾಲ್ಡೊ ಬಿಗ್ ಡೀಲ್?
ಏಕದಿನ ಸರಣಿಗೆ ಈಗಾಗಲೇ ಉಭಯ ತಂಡಗಳು ಪ್ರಕಟವಾಗಿದೆ. ರೋಹಿತ್, ಕೆಎಲ್. ರಾಹುಲ್, ವಿರಾಟ್ ಕೊಹ್ಲಿ ಜೊತೆ ಶಿಖರ್ ಧವನ್ ಕೂಡ ಇದ್ದಾರೆ. ಆಲ್‌ರೌಂಡರ್ ಜಡೇಜ ಅವರಿಗೆ ಕೆಲವು ತಿಂಗಳುಗಳ ಹಿಂದೆ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಬಿಸಿಸಿಐ ಹೇಳಿದ್ದು ಈ ಕಾರಣಕ್ಕಾಗಿ ಜಡೇಜಾರನ್ನು ಆಯ್ಕೆಗೆ ಪರಿಗಣಿಸಿಲ್ಲ. ಉಳಿದಂತೆ ರಜತ್ ಪಟಿದಾರ್, ರಾಹುಲ್ ತ್ರಿಪಾಠಿ, ಕುಲ್ದೀಪ್ ಸೇನ್ ಹೊಸ ಮುಖಗಳಾಗಿದೆ. ಇತ್ತ ಬಾಂಗ್ಲಾ ಪರ ಮೊಹಮ್ಮದುಲ್ಲ ರಿಯಾದ್ ಮತ್ತು ಮುಷ್ಫೀಕುರ್ ರಹೀಮ್ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ. ಅನಾಮುಲ್ ಹಖ್ ಬಿಜೋಯ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ತಮಿಮ್ ಇಖ್ಬಾಲ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಕೊಹ್ಲಿ-ರೋಹಿತ್ ಅಭ್ಯಾಸ:
ನ್ಯೂಜಿಲೆಂಡ್ ಪ್ರವಾಸದಿಂದ ವಿಶ್ರಾಂತಿಯಲ್ಲಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧದ ಕದನಕ್ಕೆ ಭರ್ಜರಿ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಕೊಹ್ಲಿ ಜಿಮ್ನಲ್ಲಿ ಬೆವರು ಹರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಕೂಡ ಪ್ಯಾಡ್ ಕಟ್ಟಿ ಬ್ಯಾಟಿಂಗ್ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಸದ್ಯ ಫಾರ್ಮ್ನಲ್ಲಿ ಇಲ್ಲದ ರೋಹಿತ್ಗೆ ಮುಂಬರುವ ಬಾಂಗ್ಲಾ ವಿರುದ್ಧ ಸರಣಿ ಮುಖ್ಯವಾಗಿದೆ. ಟಿ20 ವಿಶ್ವಕಪ್ನಲ್ಲಿ ರನ್ ಮಳೆ ಸುರಿಸಿ ಭರ್ಜರಿ ಫಾರ್ಮ್ನಲ್ಲಿರುವ ಕೊಹ್ಲಿ ಸಮರಾಭ್ಯಾಸ ಆರಂಭಿಸಿರುವುದು ಭಾರತಕ್ಕೂ ಶುಭ ಸೂಚಕ ಎಂದೇ ಹೇಳಬಹುದು.
Rishabh Pant: ಟಿ20 ತಂಡದಲ್ಲಿ ಆರಂಭಿಕನಾಗಿ ಚಾನ್ಸ್ ನೀಡಿ ಎಂದ ರಿಷಭ್ ಪಂತ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪ ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶಹ್ಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್.
ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್ (ನಾಯಕ), ಲಿಟನ್ ದಾಸ್, ಅನಾಮುಲ್ ಹಕ್ ಬಿಜೋಯ್, ಶಕಿಬ್ ಅಲ್ ಹಸನ್, ಮುಷ್ಫೀಕುರ್ ರಹೀಮ್, ಅಫೀಫ್ ಹುಸೇನ್, ಯಾಸಿರ್ ಅಲಿ, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಎಬಾಡೋತ್ ಹುಸೇನ್, ನಸ್ಮದ್, ನಸ್ಮದ್, ನಸ್ಮದ್ ಶಾಂತೋ, ನೂರುಲ್ ಹಸನ್ ಸೋಹನ್.
ಹೆಚ್ಚಿನ ಕ್ರೀಡಾ ಸುದದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:14 am, Thu, 1 December 22