AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Abu Dhabi T10 League: 30 ಎಸೆತಗಳಲ್ಲಿ 83 ರನ್​: ಟಿ10 ಲೀಗ್​ನಲ್ಲಿ ಪಾಕ್ ಆಟಗಾರನ ಸಿಡಿಲಬ್ಬರ

Abu Dhabi T10 League: ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ಇಡೀ ಪಂದ್ಯದ ಚಿತ್ರಣ ಬದಲಿಸುವ ಸೂಚನೆ ನೀಡಿದರು. ಸ್ಪೋಟಕ ಇನಿಂಗ್ಸ್ ಆಡಿದ ಡೇವಿಡ್ 6 ಭರ್ಜರಿ ಸಿಕ್ಸ್​ನೊಂದಿಗೆ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

Abu Dhabi T10 League: 30 ಎಸೆತಗಳಲ್ಲಿ 83 ರನ್​: ಟಿ10 ಲೀಗ್​ನಲ್ಲಿ ಪಾಕ್ ಆಟಗಾರನ ಸಿಡಿಲಬ್ಬರ
iftikhar ahmed
TV9 Web
| Edited By: |

Updated on: Nov 30, 2022 | 11:03 PM

Share

Abu Dhabi T10 League: ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ10 ಲೀಗ್​ನಲ್ಲಿ ಪಾಕ್ ಆಟಗಾರ ಇಫ್ತಿಕಾರ್ ಅಹ್ಮದ್ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಡೆಲ್ಲಿ ಬುಲ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಟೈಗರ್ಸ್ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಬಾಂಗ್ಲಾ ಪರ ಹಝ್ರತುಲ್ಲಾ ಝಝೈ ಹಾಗೂ ಜೋ ಕ್ಲಾರ್ಕ್​ ಇನಿಂಗ್ಸ್ ಆರಂಭಿಸಿದ್ದರು. ಆದರೆ ಈ ಆರಂಭಿಕರಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ತಂಡದ ಮೊತ್ತ 38 ಆಗುವಷ್ಟರಲ್ಲಿ ಇಬ್ಬರು ಪೆವಿಲಿಯನ್​ ಕಡೆ ಮುಖ ಮಾಡಿದ್ದರು. ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಫ್ತಿಕಾರ್ ಅಹ್ಮದ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಡೆಲ್ಲಿ ಬುಲ್ಸ್ ಬೌಲರ್​ಗಳ ಬೆಂಡೆತ್ತಿದ ಇಫ್ತಿಕಾರ್ 8 ಭರ್ಜರಿ ಸಿಕ್ಸ್​ ಹಾಗೂ 5 ಫೋರ್​ಗಳನ್ನು ಬಾರಿಸಿದರು.

ಪರಿಣಾಮ ಕೇವಲ 30 ಎಸೆತಗಳಲ್ಲಿ ಇಫ್ತಿಕಾರ್ ಅಹ್ಮದ್ ಬ್ಯಾಟ್​ನಿಂದ 83 ರನ್​ಗಳು ಮೂಡಿಬಂತು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾ ಟೈಗರ್ಸ್ ತಂಡವು ನಿಗದಿತ 10 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 133 ರನ್​ ಕಲೆಹಾಕಿತು.

60 ಎಸೆತಗಳಲ್ಲಿ 134 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಡೆಲ್ಲಿ ಬುಲ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಟಾಮ್ ಬ್ಯಾಂಟನ್ (4) ಹಾಗೂ ರಿಲೀ ರೊಸ್ಸೊ (15) ಬೇಗನೆ ನಿರ್ಗಮಿಸಿದರು. ಇನ್ನು ಜೋರ್ಡನ್ ಕೋಕ್ಸ್ 34 ರನ್​ಗಳ ಕಾಣಿಕೆ ನೀಡಿದರು.

ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ಇಡೀ ಪಂದ್ಯದ ಚಿತ್ರಣ ಬದಲಿಸುವ ಸೂಚನೆ ನೀಡಿದರು. ಸ್ಪೋಟಕ ಇನಿಂಗ್ಸ್ ಆಡಿದ ಡೇವಿಡ್ 6 ಭರ್ಜರಿ ಸಿಕ್ಸ್​ನೊಂದಿಗೆ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಅಂತಿಮ ಹಂತದಲ್ಲಿ ಉತ್ತಮ ದಾಳಿ ಸಂಘಟಿಸಿದ ಬಾಂಗ್ಲಾ ಟೈಗರ್ಸ್ ತಂಡವು 12 ರನ್​ಗಳಿಂದ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾದರು.

ಬಾಂಗ್ಲಾ ಟೈಗರ್ಸ್​ ಪ್ಲೇಯಿಂಗ್ 11: ಹಝ್ರತುಲ್ಲಾ ಝಝೈ , ಜೋ ಕ್ಲಾರ್ಕ್ (ವಿಕೆಟ್ ಕೀಪರ್) , ಇಫ್ತಿಕಾರ್ ಅಹ್ಮದ್ , ಎವಿನ್ ಲೆವಿಸ್ , ಕಾಲಿನ್ ಮುನ್ರೋ , ಶಕೀಬ್ ಅಲ್ ಹಸನ್ (ನಾಯಕ) , ಉಮೈರ್ ಅಲಿ , ಬೆನ್ನಿ ಹೋವೆಲ್ , ರೋಹನ್ ಮುಸ್ತಫಾ , ಮೊಹಮ್ಮದ್ ಅಮೀರ್ , ಲ್ಯೂಕ್ ಫ್ಲೆಚರ್

ಡೆಲ್ಲಿ ಬುಲ್ಸ್ ಪ್ಲೇಯಿಂಗ್ 11: ಟಾಮ್ ಬ್ಯಾಂಟನ್ (ವಿಕೆಟ್ ಕೀಪರ್) , ರಿಲಿ ರೊಸ್ಸೊ , ಟಿಮ್ ಡೇವಿಡ್ , ಡ್ವೇನ್ ಬ್ರಾವೋ (ನಾಯಕ) , ಕೀಮೋ ಪಾಲ್ , ರಿಚರ್ಡ್ ಗ್ಲೀಸನ್ , ಇಮಾದ್ ವಾಸಿಮ್ , ಜೋರ್ಡಾನ್ ಕೊಕ್ಸ್ , ಹರ್ಭಜನ್ ಸಿಂಗ್ , ಶಿರಾಜ್ ಅಹ್ಮದ್ , ಆಸಿಫ್ ಖಾನ್

Follow Us
TV9 Web
TV9 Web

TV9 Kannada

Read More
ಪತ್ನಿ ಸೋನಲ್ ಕಡೆಯಿಂದ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ ತರುಣ್ ಸುಧೀರ್ 
ಪತ್ನಿ ಸೋನಲ್ ಕಡೆಯಿಂದ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ ತರುಣ್ ಸುಧೀರ್ 
ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನದ ಮಹತ್ವ
ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ಈ ದಿನದ ಮಹತ್ವ
ಏಳು ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಈ ವಾರ ಹೊರ ಹೋಗೋದು ಯಾರು?
ಏಳು ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಈ ವಾರ ಹೊರ ಹೋಗೋದು ಯಾರು?
ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ
ಬೆಂಗಳೂರು: ಬ್ರಿಗೇಡ್ ರಸ್ತೆ ಲೇಡಿಸ್​​ ಪಬ್​​ಗಳ ಮೇಲೆ ಪೊಲೀಸರ ದಿಢೀರ್ ದಾಳಿ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಸಿಜೆಪಿ ಪ್ರತಿಭಟನೆ ನಿಷೇಧಿಸಿ: ಎಲ್ಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚನೆ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಇಂದು ಮಹಾಲಯ ಅಮವಾಸ್ಯೆ; ನಿಮ್ಮ ಪೂರ್ವಜರನ್ನು ಸ್ಮರಿಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ