ICC Test Ranking: ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ: ಅಗ್ರ ಹತ್ತರಲ್ಲಿ 6 ಭಾರತೀಯರು

ICC Test Rankings: ಐಸಿಸಿ ಪ್ರಕಟಿಸಿರುವ ಹೊಸ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡದ ಆರು ಆಟಗಾರರು ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಮೂವರು ಸ್ಥಾನ ಪಡೆದರೆ, ಬೌಲಿಂಗ್ ಶ್ರೇಯಾಂಕದಲ್ಲಿ ಮೂವರು ಆಟಗಾರರು ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಟೆಸ್ಟ್​ನ ನಂಬರ್ 1 ಬೌಲರ್​ ಆಗಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೊರಹೊಮ್ಮಿದ್ದಾರೆ.

ICC Test Ranking: ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ: ಅಗ್ರ ಹತ್ತರಲ್ಲಿ 6 ಭಾರತೀಯರು
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on:Sep 12, 2024 | 8:50 AM

ಐಸಿಸಿ ಟೆಸ್ಟ್ ಬ್ಯಾಟರ್​ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ದ್ವಿತೀಯ ಸ್ಥಾನದಲ್ಲಿ ನ್ಯೂಝಿಲೆಂಡ್​ನ ಕೇನ್ ವಿಲಿಯಮ್ಸನ್ ಇದ್ದು, ತೃತೀಯ ಸ್ಥಾನದಲ್ಲಿ ಡೇರಿಲ್ ಮಿಚೆಲ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ದಾಂಡಿಗ ಸ್ಟೀವ್ ಸ್ಮಿತ್ ಈ ಬಾರಿ 4ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

ಅಗ್ರ ಹತ್ತರಲ್ಲಿ ಆರು ಭಾರತೀಯರು:

 ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡದ ಆರು ಆಟಗಾರರು ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಮೂವರು ಸ್ಥಾನ ಪಡೆದರೆ, ಬೌಲಿಂಗ್ ಶ್ರೇಯಾಂಕದಲ್ಲಿ ಮೂವರು ಆಟಗಾರರು ಕಾಣಿಸಿಕೊಂಡಿದ್ದಾರೆ. ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿ ಕಾಣಿಸಿಕೊಂಡರೆ, ಯಶಸ್ವಿ ಜೈಸ್ವಾಲ್ 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಈ ಬಾರಿ 7ನೇ ಸ್ಥಾನಕ್ಕೇರಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ ಕಳೆದ ಫೆಬ್ರವರಿ ಬಳಿಕ ಟೀಮ್ ಇಂಡಿಯಾ ಯಾವುದೇ ಟೆಸ್ಟ್ ಪಂದ್ಯವನ್ನಾಡಿಲ್ಲ. ಇದಾಗ್ಯೂ ಐಸಿಸಿ ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಹತ್ತರದಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿ:

  • 1- ಜೋ ರೂಟ್ (ಇಂಗ್ಲೆಂಡ್)- 899 ರೇಟಿಂಗ್
  • 2- ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)- 859 ರೇಟಿಂಗ್
  • 3- ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)- 768 ರೇಟಿಂಗ್
  • 4- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 757 ರೇಟಿಂಗ್
  • 5- ರೋಹಿತ್ ಶರ್ಮಾ (ಭಾರತ)- 751 ರೇಟಿಂಗ್
  • 6- ಯಶಸ್ವಿ ಜೈಸ್ವಾಲ್ (ಭಾರತ)- 740 ರೇಟಿಂಗ್
  • 7- ವಿರಾಟ್ ಕೊಹ್ಲಿ (ಭಾರತ)- 737 ರೇಟಿಂಗ್
  • 8- ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)- 728 ರೇಟಿಂಗ್
  • 9- ಮೊಹಮ್ಮದ್ ರಿಝ್ವಾನ್ (ಪಾಕಿಸ್ತಾನ್)- 720 ರೇಟಿಂಗ್
  • 10- ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ)- 720 ರೇಟಿಂಗ್

ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!

ಟೆಸ್ಟ್ ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೂವರು ಭಾರತೀಯರು ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಬೌಲರ್​ಗಳ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಹಾಗೆಯೇ ಅಗ್ರ ಹತ್ತರಲ್ಲಿ ಕಾಣಿಸಿಕೊಳ್ಳುವಲ್ಲಿ ಜಸ್​ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಯಶಸ್ವಿಯಾಗಿದ್ದಾರೆ.

ಟೆಸ್ಟ್ ಬೌಲರ್​ಗಳ ಟಾಪ್-10​ ರ‍್ಯಾಂಕಿಂಗ್:

  1. ಆರ್​. ಅಶ್ವಿನ್ (ಭಾರತ)- 870 ರೇಟಿಂಗ್
  2. ಜೋಶ್ ಹ್ಯಾಝಲ್​ವುಡ್ (ಆಸ್ಟ್ರೇಲಿಯಾ)- 847 ರೇಟಿಂಗ್
  3. ಜಸ್​ಪ್ರೀತ್ ಬುಮ್ರಾ (ಭಾರತ)- 847 ರೇಟಿಂಗ್
  4. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)- 820 ರೇಟಿಂಗ್
  5. ಕಗಿಸೊ ರಬಾಡ (ಸೌತ್ ಆಫ್ರಿಕಾ)- 834 ರೇಟಿಂಗ್
  6. ನಾಥನ್ ಲಿಯಾನ್ (ಆಸ್ಟ್ರೇಲಿಯಾ)- 801 ರೇಟಿಂಗ್
  7. ರವೀಂದ್ರ ಜಡೇಜಾ (ಭಾರತ)- 788 ರೇಟಿಂಗ್
  8. ಕೈಲ್ ಜೇಮಿಸನ್ (ನ್ಯೂಝಿಲೆಂಡ್)- 729 ರೇಟಿಂಗ್
  9. ಮ್ಯಾಟ್ ಹೆನ್ರಿ (ನ್ಯೂಝಿಲೆಂಡ್)- 711 ರೇಟಿಂಗ್
  10. ಶಾಹಿನ್ ಅಫ್ರಿದಿ (ಪಾಕಿಸ್ತಾನ್)- 709 ರೇಟಿಂಗ್

Published On - 8:50 am, Thu, 12 September 24