RCB vs GG, WPL 2023: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಕಲೆಹಾಕಿತು. 189 ರನ್ಗಳ ಕಠಿಣ ಗುರಿ ಪಡೆದ ಆರ್ಸಿಬಿ ತಂಡಕ್ಕೆ ಸೋಫಿ ಡಿವೈನ್ ಸಿಡಿಲಬ್ಬರದ ಆರಂಭ ಒದಗಿಸಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡಿವೈನ್ ಸ್ಮೃತಿ ಮಂಧಾನ ಜೊತೆಗೂಡಿ ಮೊದಲ ವಿಕೆಟ್ಗೆ 125 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 37 ರನ್ ಬಾರಿಸಿ ಸ್ಮೃತಿ ಮಂಧಾನ ಔಟಾದರು. ಆದರೆ ಮತ್ತೊಂದೆಡೆ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ಸೋಫಿ ಡಿವೈನ್ ಸಿಕ್ಸರ್ಗಳ ಸುರಿಮಳೆಗೈದರು. ಆರ್ಸಿಬಿ ಗೆಲುವಿನತ್ತ ಮುಖ ಮಾಡಿತು. ಈ ಹಂತದಲ್ಲಿ ಕೇವಲ 1 ರನ್ನಿಂದ ಸೋಫಿ ಡಿವೈನ್ ಶತಕ ವಂಚಿತರಾದರು. 36 ಎಸೆತಗಳನ್ನು ಎದುರಿಸಿದ ಡಿವೈನ್ ಕೇವಲ 36 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ 9 ಫೋರ್ನೊಂದಿಗೆ 99 ರನ್ಗಳಿಸಿ ಗೆಲುವಿನ ರುವಾರಿ ಎನಿಸಿಕೊಂಡರು.
ಸೋಫಿ ಡಿವೈನ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ ತಂಡವು 15.3 ಓವರ್ಗಳಲ್ಲಿ 189 ರನ್ಗಳಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಸೋಫಿ ಡಿವೈನ್, ಸ್ಮೃತಿ ಮಂಧಾನ(ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ಸ್ನೇಹ್ ರಾಣಾ(ನಾಯಕಿ), ತನುಜಾ ಕನ್ವರ್, ಅಶ್ವನಿ ಕುಮಾರಿ
ಕ್ರೀಸ್ನಲ್ಲಿ ಹೀದರ್ನೈಟ್ – ಎಲ್ಲಿಸ್ ಪೆರ್ರಿ ಬ್ಯಾಟಿಂಗ್
ಕೇವಲ 36 ಎಸೆತಗಳಲ್ಲಿ 99 ರನ್ ಬಾರಿಸಿ ಔಟಾದ ಸೋಫಿ ಡಿವೈನ್
ಕಿಮ್ ಗಾರ್ತ್ ಎಸೆತದಲ್ಲಿ ಕ್ಯಾಚ್ ನೀಡಿ 1 ರನ್ನಿಂದ ಶತಕ ವಂಚಿತರಾದ ನ್ಯೂಜಿಲೆಂಡ್ ಆಟಗಾರ್ತಿ
ಕಿಮ್ ಗಾರ್ತ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಸೋಫಿ ಡಿವೈನ್
ಕ್ರೀಸ್ನಲ್ಲಿ ಸೋಫಿ ಡಿವೈನ್-ಎಲ್ಲಿಸ್ ಪೆರ್ರಿ ಬ್ಯಾಟಿಂಗ್
ಸ್ನೇಹ್ ರಾಣಾ ಎಸೆತದಲ್ಲಿ ನೇರವಾಗಿ ಬೌಲರ್ಗೆ ಕ್ಯಾಚ್ ನೀಡಿ ಹೊರನಡೆದ ಸ್ಮೃತಿ ಮಂಧಾನ (37)
ತನುಜಾ ಓವರ್ನಲ್ಲಿ ಮೂರು ಸಿಕ್ಸ್ ಬಾರಿಸಿದ ಸೋಫಿ ಡಿವೈನ್
ಇದುವರೆಗೆ ಒಟ್ಟು 7 ಸಿಕ್ಸ್ ಬಾರಿಸಿರುವ ನ್ಯೂಜಿಲೆಂಡ್ ಆಟಗಾರ್ತಿ ಸೋಫಿ ಡಿವೈನ್
ತನುಜಾ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಬಾರಿಸಿದ ಸೋಫಿ ಡಿವೈನ್
ತನುಜಾ ಕನ್ವರ್ ಎಸೆತದಲ್ಲಿ 94 ಮೀಟರ್ ದೂರದ ಸಿಕ್ಸ್ ಸಿಡಿಸಿದ ಸೋಫಿ ಡಿವೈನ್
ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸೋಫಿ ಡಿವೈನ್
ಮೊದಲ 6 ಓವರ್ಗಳಲ್ಲಿ 77 ರನ್ ಕಲೆಹಾಕಿದ ಸೋಫಿ ಡಿವೈನ್-ಸ್ಮೃತಿ ಮಂಧಾನ
ಸ್ಪೋಟಕ ಆರಂಭ ಪಡೆದ ಆರ್ಸಿಬಿ
ಕ್ರೀಸ್ನಲ್ಲಿ ಸೋಫಿ ಡಿವೈನ್-ಸ್ಮೃತಿ ಮಂಧಾನ ಬ್ಯಾಟಿಂಗ್
ತನುಜಾ ಎಸೆದ ನೋಬಾಲ್ಗೆ ಬೌಂಡರಿ ಉತ್ತರ ನೀಡಿದ ಸ್ಮೃತಿ ಮಂಧಾನ
ತನುಜಾ ಕನ್ವರ್ ಎಸೆತದಲ್ಲಿ ಆಕರ್ಷಕ ಸಿಕ್ಸ್ ಬಾರಿಸಿದ ಸ್ಮೃತಿ ಮಂಧಾನ
ಗಾರ್ಡ್ನರ್ ಎಸೆದ ಓವರ್ನಲ್ಲಿ 24 ರನ್ ಚಚ್ಚಿದ ಸೋಫಿ ಡಿವೈನ್
ಗಾರ್ಡ್ನರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೋಫಿ ಡಿವೈನ್
ಗಾರ್ಡ್ನರ್ ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಹಾಗೂ 2 ಫೋರ್ ಬಾರಿಸಿದ ಸೋಫಿ ಡಿವೈನ್
ಆರ್ಸಿಬಿಗೆ 189 ರನ್ಗಳ ಬೃಹತ್ ಗುರಿ ನೀಡಿದ ಗುಜರಾತ್ ಜೈಂಟ್ಸ್
ಮೇಗನ್ ಶುಟ್ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಹೇಮಲತಾ
ಮೇಗನ್ ಶುಟ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಹಾಗೂ ಫೋರ್ ಬಾರಿಸಿದ ಹರ್ಲೀನ್ ಡಿಯೋಲ್
19 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಹರ್ಲೀನ್ ಡಿಯೋಲ್ – ಹೇಮಲತಾ ಬ್ಯಾಟಿಂಗ್
42 ಎಸೆತಗಳಲ್ಲಿ 68 ರನ್ ಬಾರಿಸಿ ಶ್ರೇಯಾಂಕ ಪಾಟೀಲ್ಗೆ ವಿಕೆಟ್ ಒಪ್ಪಿಸಿದ ಲೌರಾ (68)
ಮೇಗನ್ ಶುಟ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಹಾಗೂ ಫೋರ್ ಬಾರಿಸಿದ ಲೌರಾ
ಪೆರ್ರಿ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರೈಸಿದ ಲೌರಾ
35 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಲೌರಾ
ಪೆರ್ರಿ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಲೌರಾ
ಆಶಾ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಗಾರ್ಡ್ನರ್
ಪ್ರೀತಿ ಬೋಸ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಹೊರ ನಡೆದ ಮೇಘನಾ (31)
ಮೊದಲ 10 ಓವರ್ಗಳಲ್ಲಿ 78 ರನ್ ಕಲೆಹಾಕಿದ ಗುಜರಾತ್ ಜೈಂಟ್ಸ್
ಕ್ರೀಸ್ನಲ್ಲಿ ಲೌರಾ – ಮೇಘನಾ ಬ್ಯಾಟಿಂಗ್
ಆಶಾ ಎಸೆತದಲ್ಲಿ ಹಿಂಬದಿತ್ತ ಸ್ವೀಪ್ ಶಾಟ್ ಫೋರ್ ಬಾರಿಸಿದ ಲೌರಾ
ಕ್ರೀಸ್ನಲ್ಲಿ ಲೌರಾ – ಮೇಘನಾ ಬ್ಯಾಟಿಂಗ್
ಎಲ್ಲಿಸ್ ಪೆರ್ರಿ ಎಸೆದ ಕೊನೆಯ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಲೌರಾ
ಮೊದಲ 6 ಓವರ್ಗಳಲ್ಲಿ 45 ರನ್ ಕಲೆಹಾಕಿದ ಗುಜರಾತ್ ಜೈಂಟ್ಸ್
5 ಓವರ್ಗಳಲ್ಲಿ 40 ರನ್ ಕಲೆಹಾಕಿದ ಗುಜರಾತ್ ಜೈಂಟ್ಸ್
ಕ್ರೀಸ್ನಲ್ಲಿ ಮೇಘನಾ – ಲೌರಾ ಬ್ಯಾಟಿಂಗ್
ಮೇಗನ್ ಶುಟ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಲೌರಾ
ಸೋಫಿ ಡಿವೈನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಸೋಫಿಯಾ ಡಂಕ್ಲಿ (16)
ಮೊದಲ ಓವರ್ನಲ್ಲಿ 11 ರನ್ ಕಲೆಹಾಕಿದ ಗುಜರಾತ್ ಜೈಂಟ್ಸ್
ಕ್ರೀಸ್ನಲ್ಲಿ ಲೌರಾ – ಡಂಕ್ಲಿ ಬ್ಯಾಟಿಂಗ್
ಸೋಫಿ ಡಿವೈನ್ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಫೋರ್ ಬಾರಿಸಿದ ಡಂಕ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಸೋಫಿ ಡಿವೈನ್, ಸ್ಮೃತಿ ಮಂಧಾನ(ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್
ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ಸ್ನೇಹ್ ರಾಣಾ(ನಾಯಕಿ), ತನುಜಾ ಕನ್ವರ್, ಅಶ್ವನಿ ಕುಮಾರಿ.
Hello from Brabourne Stadium, CCI ?️?
Gearing up for the second game of today’s doubleheader as @RCBTweets face @GujaratGiants in Match 1⃣6⃣ of the #TATAWPL!
Which side are you rooting for ❓ #RCBvGG pic.twitter.com/UfnlYJUJFY
— Women’s Premier League (WPL) (@wplt20) March 18, 2023
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - 7:03 pm, Sat, 18 March 23