RR vs SRH Highlights IPL 2023: ಕೊನೆಯ ಎಸೆತದಲ್ಲಿ ನೋ ಬಾಲ್; ರೋಚಕ ಪಂದ್ಯ ಗೆದ್ದ ಹೈದರಾಬಾದ್

|

Updated on:May 07, 2023 | 11:37 PM

Rajasthan Royals vs Sunrisers Hyderabad Live Score In Kannada:

RR vs SRH Highlights IPL 2023: ಕೊನೆಯ ಎಸೆತದಲ್ಲಿ ನೋ ಬಾಲ್; ರೋಚಕ ಪಂದ್ಯ ಗೆದ್ದ ಹೈದರಾಬಾದ್
ರಾಜಸ್ಥಾನ್- ಹೈದರಾಬಾದ್ ಮುಖಾಮುಖಿ

ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ನಾಟಕೀಯ ರೀತಿಯಲ್ಲಿ ನಾಲ್ಕು ವಿಕೆಟ್‌ಗಳಿಂದ ಸೋಲಿಸಿದಲ್ಲದೆ ಟೂರ್ನಿಯಲ್ಲಿ 4ನೇ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಜೋಸ್ ಬಟ್ಲರ್ (95), ಸಂಜು ಸ್ಯಾಮ್ಸನ್ (ಅಜೇಯ 66) ಅವರ ಅದ್ಭುತ ಇನ್ನಿಂಗ್ಸ್‌ನ ಆಧಾರದ ಮೇಲೆ 214 ರನ್ ಕಲೆಹಾಕಿತು. ಹೈದರಾಬಾದ್ ಕೊನೆಯ ಎಸೆತದಲ್ಲಿ ಈ ಗುರಿಯನ್ನು ಸಾಧಿಸಿತು.ಹೈದರಾಬಾದ್‌ಗೆ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಐದು ರನ್‌ಗಳ ಅಗತ್ಯವಿತ್ತು. ಕೊನೆಯ ಎಸೆತದಲ್ಲಿ ಸಂದೀಪ್ ಶರ್ಮಾ ಅವರು ಅಬ್ದುಲ್ ಸಮದ್ ಅವರನ್ನು ಔಟ್ ಮಾಡಿದ್ದರು. ಆದರೆ ಅದು ನೋ ಬಾಲ್ ಆಯಿತು. ನಂತರ ಸಮದ್ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಹೊಡೆದು ಹೈದರಾಬಾದ್‌ಗೆ ಜಯ ತಂದುಕೊಟ್ಟರು.

LIVE NEWS & UPDATES

The liveblog has ended.
 • 07 May 2023 11:11 PM (IST)

  ರೋಚಕ ಪಂದ್ಯ ಗೆದ್ದ ಹೈದರಾಬಾದ್

  20ನೇ ಓವರ್​​ನಲ್ಲಿ ಗೆಲುವಿಗೆ 9 ರನ್ ಟಾರ್ಗೆಟ್ ಪಡೆದ ಹೈದರಾಬಾದ್​ಗೆ ಲಕ್​​ ಕೈಹಿಡಿಯಿತು. 20ನೇ ಓವರ್​​ನ ಕೊನೆಯ ಎಸೆತವನ್ನು ನೋ ಬಾಲ್ ಮಾಡಿದ ಸಂದೀಪ್ ಶರ್ಮಾ ರಾಜಸ್ಥಾನ್ ಸೋಲಿಗೆ ಕಾರಣರಾದರು. ಫ್ರೀ ಹಿಟ್ ಎಸೆತದ ಲಾಭ ಪಡೆದ ಹೈದರಾಬಾದ್ ಬ್ಯಾಟರ್ ಸಮದ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು.

 • 07 May 2023 11:00 PM (IST)

  ಫಿಲಿಫ್ಸ್ ಔಟ್

  19ನೇ ಓವರ್​ನ 5ನೇ ಎಸೆತದಲ್ಲಿ ಕ್ಯಾಚಿತ್ತು ಫಿಲಿಫ್ಸ್ ಔಟಾದರು. ಹೈದರಾಬಾದ್ ಗೆಲುವಿಗೆ 6 ಎಸೆತಗಳಲ್ಲಿ 17 ರನ್ ಬೇಕು.

 • 07 May 2023 10:58 PM (IST)

  ಹ್ಯಾಟ್ರಿಕ್ ಸಿಕ್ಸ್

  19ನೇ ಓವರ್​ನ ಮೊದಲ 3 ಎಸೆತಗಳಲ್ಲಿ ಫಿಲಿಫ್ಸ್ ಭರ್ಜರಿ ಸಿಕ್ಸರ್ ಬಾರಿಸಿದರು. ಆ ಬಳಿಕ 4ನೇ ಎಸೆತದಲ್ಲೂ ಬೌಂಡರಿ ಬಂತು.

 • 07 May 2023 10:55 PM (IST)

  ಮಾರ್ಕ್ರಾಮ್ ಔಟ್

  ಏಡನ್ ಮಾರ್ಕ್ರಾಮ್ ಔಟ್ ಆಗಿದ್ದಾರೆ. 18ನೇ ಓವರ್‌ನ ಐದನೇ ಎಸೆತದಲ್ಲಿ ಚಾಹಲ್ ಅವರನ್ನು ಎಲ್ಬಿಡಬ್ಲು ಮಾಡಿದರು. ಅಂಪೈರ್ ಔಟ್ ನೀಡಿದರು ಆದರೆ ಹೈದರಾಬಾದ್ ನಾಯಕ ರಿವ್ಯೂ ತೆಗೆದುಕೊಂಡರು ಅದು ವಿಫಲವಾಯಿತು.

 • 07 May 2023 10:49 PM (IST)

  ತ್ರಿಪಾಠಿ ಔಟ್

  29 ಎಸೆತಗಳಲ್ಲಿ 47 ರನ್ ಬಾರಿಸಿದ್ದ ತ್ರಿಪಾಠಿ ಚಹಲ್ ಬೌಲಿಂಗ್​​ನಲ್ಲಿ ಕ್ಯಾಚಿತ್ತು ಔಟಾದರು.

 • 07 May 2023 10:48 PM (IST)

  ತ್ರಿಪಾಠಿ ಸಿಕ್ಸ್

  ಮೆಕಾಯ್ ಬೌಲ್ ಮಾಡಿದ 17ನೇ ಓವರ್​​ನಲ್ಲಿ 13 ರನ್ ಬಂದವು. ಈ ಓವರ್​​ನಲ್ಲಿ ತ್ರಿಪಾಠಿ ಸಿಕ್ಸರ್ ಬಾರಿಸಿದರೆ, ಮಾಕ್ರಾಮ್ ಬೌಂಡರಿ ಬಾರಿಸಿದರು.

 • 07 May 2023 10:43 PM (IST)

  ಕ್ಲಾಸೆನ್ ಕ್ಯಾಮಿಯೋ ಮುಗಿದಿದೆ

  ಹೆನ್ರಿಕ್ ಕ್ಲಾಸೆನ್ ಸ್ಪಿನ್ನರ್‌ಗಳ ವಿರುದ್ಧ ಉತ್ತಮವಾಗಿ ಆಡಿದ ಕ್ಲಾಸೆನ್ ಕೇವಲ 12 ಎಸೆತಗಳಲ್ಲಿ 26 ರನ್ ಗಳಿಸಿ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ.

 • 07 May 2023 10:30 PM (IST)

  ತ್ರಿಪಾಠಿ ಅಬ್ಬರ

  14ನೇ ಓವರ್ ಬೌಲ್ ಮಾಡಿದ ಮುರುಗನ್ ಬರೋಬ್ಬರಿ 19 ರನ್ ಬಿಟ್ಟುಕೊಟ್ಟರು. ಇಬ್ಬರೂ ಬ್ಯಾಟರ್​ಗಳು ತಲಾ ಒಂದೊಂದು ಸಿಕ್ಸರ್ ಬಾರಿಸಿದರು.

 • 07 May 2023 10:21 PM (IST)

  ಅರ್ಧಶತಕ ಸಿಡಿಸಿ ಅಭಿಷೇಕ್ ಔಟ್

  ಅಶ್ವಿನ್ ಬೌಲ್ ಮಾಡಿದ 13ನೇ ಓವರ್​ನ ಮೂರನೇ ಎಸೆತವನ್ನು ಸಿಕ್ಸರ್​ಗಟ್ಟಿದ ಅಭಿಷೇಕ್ 33 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ. ಆದರೆ ಆ ನಂತರದ ಎಸೆತದಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದ್ದಾರೆ.

 • 07 May 2023 10:16 PM (IST)

  ತ್ರಿಪಾಠಿ ಫೋರ್

  ಅಶ್ವಿನ್ ಬೌಲ್ ಮಾಡಿದ 11ನೇ ಓವರ್​ನ 3ನೇ ಎಸೆತವನ್ನು ತ್ರಿಪಾಠಿ ಬ್ಯಾಕ್​​ವರ್ಡ್​ ಪಾಯಿಂಟ್​​ನಲ್ಲಿ ಬೌಂಡರಿಗಟ್ಟಿದರು.

 • 07 May 2023 10:11 PM (IST)

  10 ಓವರ್ ಅಂತ್ಯ

  ಅಶ್ವಿನ್ ಬೌಲ್ ಮಾಡಿದ 10ನೇ ಓವರ್​​ನಲ್ಲಿ ರಾಹುಲ್ ಸಿಕ್ಸರ್ ಬಾರಿಸಿದರೆ, ಅಭಿಷೇಕ್ ಫೈನ್​ ಲೆಗ್​ ಮೇಲೆ ಬೌಂಡರಿ ಬಾರಿಸಿದರು. 10 ಓವರ್ ಅಂತ್ಯಕ್ಕೆ ಹೈದರಾಬಾದ್ 87 ರನ್​ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.

 • 07 May 2023 10:09 PM (IST)

  ಅಭಿಷೇಕ್ ಬೌಂಡರಿ

  ಚಹಲ್ ಬೌಲ್ ಮಾಡಿದ 8ನೇ ಓವರ್​ನ ಕೊನೆಯ ಎಸೆತದಲ್ಲಿ ಅಭಿಷೇಕ್ ಸ್ಕ್ವೇರ್​​ ಲೆಗ್​​ನಲ್ಲಿ ಬೌಂಡರಿ ಬಾರಿಸಿದರು.

 • 07 May 2023 10:08 PM (IST)

  ಅನ್ಮೋಲ್ಪ್ರೀತ್ ಸಿಂಗ್ ಔಟ್

  ಅನ್ಮೋಲ್‌ಪ್ರೀತ್ ಸಿಂಗ್ ಔಟಾಗಿದ್ದಾರೆ. ಆರನೇ ಓವರ್‌ನ ಐದನೇ ಎಸೆತದಲ್ಲಿ ಯುಜ್ವೇಂದ್ರ ಚಾಹಲ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.ಅನ್ಮೋಲ್‌ಪ್ರೀತ್ ಸಿಂಗ್ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು ಆದರೆ ಚೆಂಡು ಶಿಮ್ರಾನ್ ಹೆಟ್ಮೆಯರ್ ಕೈಗೆ ಹೋಯಿತು. ಆರು ಓವರ್‌ಗಳ ನಂತರ ರಾಜಸ್ಥಾನದ ಸ್ಕೋರ್ ಒಂದು ವಿಕೆಟ್ ಕಳೆದುಕೊಂಡು 52 ರನ್ ಆಗಿದೆ.

 • 07 May 2023 10:07 PM (IST)

  5 ಓವರ್‌ಗಳಲ್ಲಿ 45/0

  ಹೈದರಾಬಾದ್ ಇನ್ನಿಂಗ್ಸ್‌ನ 5 ಓವರ್‌ಗಳು ಮುಗಿದಿವೆ. ಹೈದರಾಬಾದ್ ಮೊದಲ 5 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿತು.

 • 07 May 2023 09:40 PM (IST)

  ಸಂದೀಪ್​ಗೆ ಬೌಂಡರಿ

  3ನೇ ಓವರ್​ ಬೌಲ್ ಮಾಡಿದ ಸಂದೀಪ್ 10 ರನ್ ಬಿಟ್ಟುಕೊಟ್ಟರು. ಈ ಓವರ್​​ನಲ್ಲಿ 2 ಬೌಂಡರಿ ಬಂದವು.

 • 07 May 2023 09:39 PM (IST)

  ಅನ್ಮೋಲ್ಪ್ರೀತ್ ಸಿಕ್ಸರ್

  ಕುಲ್ದೀಪ್ ಬೌಲ್ ಮಾಡಿದ 2ನೇ ಓವರ್​ನ 4ನೇ ಎಸೆತವನ್ನು ಅನ್ಮೋಲ್ಪ್ರೀತ್ ಡೀಪ್ ಸ್ಕ್ವೈರ್​​ ಲೆಗ್​​ನಲ್ಲಿ ಸಿಕ್ಸರ್​ಗಟ್ಟಿದರು.

 • 07 May 2023 09:37 PM (IST)

  ಹೈದರಾಬಾದ್ ಇನ್ನಿಂಗ್ಸ್ ಆರಂಭ

  ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್ ಆರಂಭವಾಗಿದೆ. ಅಭಿಷೇಕ್ ಶರ್ಮಾ ಅವರೊಂದಿಗೆ ಅನ್ಮೋಲ್ಪ್ರೀತ್ ಸಿಂಗ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

 • 07 May 2023 09:07 PM (IST)

  214 ರನ್ ಟಾರ್ಗೆಟ್

  ನಟರಾಜನ್ ಬೌಲ್ ಮಾಡಿದ 20ನೇ ಓವರ್​ನಲ್ಲಿ ಒಟ್ಟು 17 ರನ್ ಹರಿದುಬಂದವು. ಅಂತಿಮವಾಗಿ ರಾಜಸ್ಥಾನ್ 2 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿದೆ.

 • 07 May 2023 08:58 PM (IST)

  ಶತಕ ವಂಚಿತ ಬಟ್ಲರ್

  ಭುವಿ ಬೌಲ್ ಮಾಡಿದ 19ನೇ ಓವರ್​ನ 3ನೇ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದ ಬಟ್ಲರ್ ಕೇವಲ 5 ರನ್​ಗಳಿಂದ ಶತಕ ವಂಚಿತರಾದರು.

 • 07 May 2023 08:55 PM (IST)

  ಭುವಿ ದುಬಾರಿ

  ಭುವಿ ಬೌಲ್ ಮಾಡಿದ 17ನೇ ಓವರ್​​ನಲ್ಲಿ ಬಟ್ಲರ್ 3 ಬೌಂಡರಿ ಬಾರಿಸಿದರು.

 • 07 May 2023 08:40 PM (IST)

  16ನೇ ಓವರ್​​ನಲ್ಲಿ 2 ಸಿಕ್ಸರ್

  ಮಾರ್ಕಂಡೆ ಬೌಲ್ ಮಾಡಿದ 16ನೇ ಓವರ್​​ನಲ್ಲಿ 2 ಸಿಕ್ಸರ್ ಬಂದವು.ಇದರಲ್ಲಿ ಸಂಜು 1 ಸಿಕ್ಸರ್ ಹೊಡೆದರೆ, ಬಟ್ಲರ್ ಕೂಡ 1 ಸಿಕ್ಸರ್ ಹೊಡೆದರು.

 • 07 May 2023 08:35 PM (IST)

  150 ರನ್ ಪೂರ್ಣ

  ಯಾನ್ಸೆನ್ ಬೌಲ್ ಮಾಡಿದ 15ನೇ ಓವರ್​ನ ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಹೊಡೆದ ಬಟ್ಲರ್ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

 • 07 May 2023 08:32 PM (IST)

  ಸಂಜು ಸಿಕ್ಸರ್

  ಮಾರ್ಕಂಡೆ ಬೌಲ್ ಮಾಡಿದ 14ನೇ ಓವರ್​​ನ ಕೊನೆಯ ಎಸೆತದಲ್ಲಿ ಸಂಜು ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು.

 • 07 May 2023 08:29 PM (IST)

  ಬಟ್ಲರ್ ಸಿಕ್ಸರ್, ರಾಜಸ್ಥಾನ್ 135/1

  ವಿವ್ರಾಂತ್ ಬೌಲ್ ಮಾಡಿದ 13ನೇ ಓವರ್​​ನ 4ನೇ ಎಸೆತವನ್ನು ಬಟ್ಲರ್ ಸಿಕ್ಸರ್​ಗಟ್ಟಿದರು.

 • 07 May 2023 08:28 PM (IST)

  ಬಟ್ಲರ್ ಅರ್ಧಶತಕ

  12ನೇ ಓವರ್​ನಲ್ಲಿ ಸಿಂಗಲ್ ಬಾರಿಸುವ ಮೂಲಕ ಬಟ್ಲರ್ ತಮ್ಮ ಅರ್ಧಶತಕ ಪೂರೈಸಿದ್ದಾರೆ.

 • 07 May 2023 08:19 PM (IST)

  ರಾಜಸ್ಥಾನ್ ಶತಕ ಪೂರ್ಣ

  ಅಭಿಷೇಕ್ ಬೌಲ್ ಮಾಡಿದ 10ನೇ ಓವರ್​ನ 4ನೇ ಎಸೆತವನ್ನು ಸಿಕ್ಸರ್​ಗಟ್ಟಿದ ಬಟ್ಲರ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

 • 07 May 2023 08:18 PM (IST)

  3 ಸಿಕ್ಸರ್

  ಮಾರ್ಕಂಡೆ ಬೌಲ್ ಮಾಡಿದ 9ನೇ ಓವರ್​​ನಲ್ಲಿ ಬರೋಬ್ಬರಿ 3 ಸಿಕ್ಸರ್ ಬಂದವು. ಮೊದಲ ಸಿಕ್ಸರ್ ಸಂಜು ಬ್ಯಾಟ್​​ನಿಂದ ಬಂದರೆ, ಉಳಿದ 2 ಸಿಕ್ಸರ್ ಬಟ್ಲರ್ ಬ್ಯಾಟ್​ನಿಂದ ಬಂದವು.

 • 07 May 2023 08:05 PM (IST)

  ಸಂಜು ಬೌಂಡರಿ

  ಮಯಾಂಕ್ ಬೌಲ್ ಮಾಡಿದ 7ನೇ ಓವರ್​ನ ಕೊನೆಯ ಎಸೆತದಲ್ಲಿ ಸಂಜು ಕಟ್ ಶಾಟ್ ಆಡಿ ಬೌಂಡರಿ ಪಡೆದರು.

 • 07 May 2023 08:01 PM (IST)

  ಪವರ್ ಪ್ಲೇ ಅಂತ್ಯ

  ನಟರಾಜನ್ ಬೌಲ್ ಮಾಡಿದ 6ನೇ ಓವರ್​ನ 5ನೇ ಎಸೆತದಲ್ಲಿ ಸಂಜು ಬೌಂಡರಿ ಬಾರಿಸಿದರು. ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ 61 ರನ್​ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.

 • 07 May 2023 07:57 PM (IST)

  ಜೈಸ್ವಾಲ್ ಔಟ್

  5ನೇ ಓವರ್​ನ ಕೊನೆಯ ಎಸೆತದಲ್ಲಿ ಜೈಸ್ವಾಲ್ ಕ್ಯಾಚಿತ್ತು ಔಟಾದರು. ಯಶಸ್ವಿ 18 ಎಸೆತಗಳಲ್ಲಿ 35 ರನ್ ಬಾರಿಸಿ ನಿರ್ಗಮಿಸಿದರು.

 • 07 May 2023 07:55 PM (IST)

  ರಾಜಸ್ಥಾನ್ ಅರ್ಧಶತಕ ಪೂರ್ಣ

  ಯಾನ್ಸೆನ್ ಬೌಲ್ ಮಾಡಿದ 5ನೇ ಓವರ್​ನ 2ನೇ ಎಸೆತದಲ್ಲಿ ಬೌಂಡರಿ ಹೊಡೆದ ಜೈಸ್ವಾಲ್ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು.

 • 07 May 2023 07:49 PM (IST)

  90 ಮೀ. ಸಿಕ್ಸರ್

  ಭುವಿ ಬೌಲ್ ಮಾಡಿದ 4ನೇ ಓವರ್​​ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಜೈಸ್ವಾಲ್, 3ನೇ ಎಸೆತದಲ್ಲಿ 90 ಮೀ. ಉದ್ದದ ಸಿಕ್ಸರ್ ಹೊಡೆದರು.

 • 07 May 2023 07:40 PM (IST)

  ಜೈಸ್ವಾಲ್ ಸಿಕ್ಸರ್

  ಯಾನ್ಸೆನ್ ಬೌಲ್ ಮಾಡಿದ 2ನೇ ಓವರ್​ನಲ್ಲಿ ಬಟ್ಲರ್ 2 ಬೌಂಡರಿ ಹೊಡೆದರೆ, ಕೊನೆಯ ಎಸೆತದಲ್ಲಿ ಜೈಸ್ವಾಲ್ ಸಿಕ್ಸರ್ ಹೊಡೆದರು.

 • 07 May 2023 07:35 PM (IST)

  ಪಂದ್ಯ ಆರಂಭ

  ರಾಜಸ್ಥಾನ ಮತ್ತು ಹೈದರಾಬಾದ್ ನಡುವಿನ ಪಂದ್ಯ ಆರಂಭವಾಗಿದೆ. ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್ನಲ್ಲಿ ಜೈಸ್ವಾಲ್ 2 ಬೌಂಡರಿ ಹೊಡೆದರು.

 • 07 May 2023 07:29 PM (IST)

  56 ರನ್​​ಗಳಿಂದ ಗೆದ್ದ ಗುಜರಾತ್

  ಐಪಿಎಲ್‌ನ 51ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 56 ರನ್​ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ತಂಡ ಪ್ಲೇ ಆಫ್ ಸಮೀಪಕ್ಕೆ ಬಂದಿದೆ

 • 07 May 2023 07:20 PM (IST)

  ಬಧೋನಿ ಔಟ್

  ಆಯುಷ್ ಬಧೋನಿ 11 ಎಸೆತಗಳಲ್ಲಿ 21 ರನ್ ಗಳಿಸಿ ಶಮಿ ಓವರ್​ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

 • 07 May 2023 07:17 PM (IST)

  ರಾಜಸ್ಥಾನದ ಪ್ಲೇಯಿಂಗ್-11

  ಯಶಸ್ವಿ ಜೈಸ್ವಾಲ್ (ನಾಯಕ), ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜೋ ರೂಟ್, ಧ್ರುವ್ ಜುರೈಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಸಂದೀಪ್ ಶರ್ಮಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್.

 • 07 May 2023 07:17 PM (IST)

  ಹೈದರಾಬಾದ್‌ನ ಪ್ಲೇಯಿಂಗ್-11

  ಏಡೆನ್ ಮಾರ್ಕ್‌ರಾಮ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಮಾರ್ಕೊ ಯಾನ್ಸೆನ್, ವಿವ್ರಾಂತ್ ಶರ್ಮಾ, ಮಯಾಂಕ್ ಮಾರ್ಕೆಡೆ.

 • 07 May 2023 07:09 PM (IST)

  ಟಾಸ್ ಅಪ್ಡೇಟ್

  ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

Published On - May 07,2023 7:08 PM

Follow us
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ
Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ
ಸ್ತ್ರೀಯರಿಗೆ ತವರು ಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ
ಸ್ತ್ರೀಯರಿಗೆ ತವರು ಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ
ದರ್ಶನ್​ ಕೇಸ್: ಮಾಧ್ಯಮದ ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ ಚಿಕ್ಕಣ್ಣ
ದರ್ಶನ್​ ಕೇಸ್: ಮಾಧ್ಯಮದ ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ ಚಿಕ್ಕಣ್ಣ
ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹೆಚ್​ಡಿ ಕುಮಾರಸ್ವಾಮಿ
ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹೆಚ್​ಡಿ ಕುಮಾರಸ್ವಾಮಿ
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ