SA20: ಸೌತ್ ಆಫ್ರಿಕಾ ಟಿ20 ಲೀಗ್ ಪ್ಲೇಆಫ್ ವೇಳಾಪಟ್ಟಿ ಇಲ್ಲಿದೆ
SA20 League: ಸೌತ್ ಆಫ್ರಿಕಾ ಟಿ20 ಲೀಗ್ನ ಪ್ಲೇಆಫ್ ಹಂತದ ವೇಳಾಪಟ್ಟಿ ಪ್ರಕಟವಾಗಿದೆ. 6 ತಂಡಗಳ ನಡುವಣ ಈ ಟೂರ್ನಿಯಲ್ಲಿ ಇದೀಗ ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ಅದರಂತೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ಹಾಗೂ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳು ಮುಖಾಮುಖಿಯಾಗಲಿದೆ.

ಸೌತ್ ಆಫ್ರಿಕಾ ಟಿ20 ಲೀಗ್ (SA20) ನಾಕೌಟ್ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಲೀಗ್ ಹಂತದ ಎಲ್ಲಾ ಪಂದ್ಯಗಳು ಮುಗಿದಿದೆ. ನಾಲ್ಕು ತಂಡಗಳು ಪ್ಲೇಆಫ್ಗೆ ಪ್ರವೇಶಿಸಿದರೆ, ಎರಡು ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. ಲೀಗ್ ಹಂತದಲ್ಲಿ ಆಡಲಾದ 10 ಪಂದ್ಯಗಳಲ್ಲಿ 7 ರಲ್ಲಿ ಸೋತು ಮುಂಬೈ ಇಂಡಿಯನ್ಸ್ ಮಾಲೀಕತ್ವದ ಎಂಐ ಕೇಪ್ಟೌನ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಒಡೆತನದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಗಳು ಟೂರ್ನಿಯಿಂದ ಎಲಿಮಿನೇಟ್ ಆಗಿದೆ.
ಇನ್ನು 10 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿ, 2 ರಲ್ಲಿ ಸೋತಿರುವ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು 33 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಹಾಗೆಯೇ 10 ರಲ್ಲಿ 7 ರಲ್ಲಿ ಗೆಲುವು ದಾಖಲಿಸಿರುವ ಡರ್ಬನ್ ಸೂಪರ್ ಜೈಂಟ್ಸ್ 32 ಪಾಯಿಂಟ್ಸ್ನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ಪಾರ್ಲ್ ರಾಯಲ್ಸ್ ತಂಡವು 10 ಪಂದ್ಯಗಳಲ್ಲಿ 5 ಜಯ ಸಾಧಿಸಿ 22 ಪಾಯಿಂಟ್ಸ್ನೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಜೋಬರ್ಗ್ ಸೂಪರ್ ಕಿಂಗ್ಸ್ 10 ರಲ್ಲಿ 3 ಗೆಲುವಿನೊಂದಿಗೆ 17 ಅಂಕ ಪಡೆದು ಪ್ಲೇಆಫ್ಗೆ ಪ್ರವೇಶಿಸಿದೆ.
ಅದರಂತೆ ಪ್ಲೇಆಫ್ನ ಕ್ವಾಲಿಫೈಯರ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಡರ್ಬನ್ ಸೂಪರ್ ಜೈಂಟ್ಸ್ ಹಾಗೂ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ.
ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಪಾರ್ಲ್ ರಾಯಲ್ಸ್ ಮತ್ತು ಜೋಬರ್ಗ್ ಸೂಪರ್ ಕಿಂಗ್ಸ್ ತಂಡಗಳು ಸೆಣಸಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ.
ಅಂದರೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುವ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡಗಳು 2ನೇ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಲಿದೆ. ಇದರಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ.
ಸೌತ್ ಆಫ್ರಿಕಾ ಟಿ20 ಲೀಗ್ನ ಪ್ಲೇಆಫ್ಸ್ ವೇಳಾಪಟ್ಟಿ:
- ಫೆಬ್ರವರಿ 6: ಸನ್‌ರೈಸರ್ಸ್ ಈಸ್ಟರ್ನ್ ಕೇಪ್ vs ಡರ್ಬನ್ ಸೂಪರ್ ಜೈಂಟ್ಸ್ (ಮೊದಲ ಕ್ವಾಲಿಫೈಯರ್ ಪಂದ್ಯ)
- ಫೆಬ್ರವರಿ 7: ಜೋಬರ್ಗ್ ಸೂಪರ್ ಕಿಂಗ್ಸ್ vs ಪಾರ್ಲ್ ರಾಯಲ್ಸ್ (ಎಲಿಮಿನೇಟರ್ ಪಂದ್ಯ)
- ಫೆಬ್ರವರಿ 8: ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡ vs ಎಲಿಮಿನೇಟರ್ನಲ್ಲಿ ಗೆದ್ದ ತಂಡ (ಎರಡನೇ ಕ್ವಾಲಿಫೈಯರ್ ಪಂದ್ಯ)
- ಫೆಬ್ರವರಿ 10: ಫೈನಲ್ ಪಂದ್ಯ
ಪ್ಲೇಆಫ್ ಆಡಲಿರುವ 4 ತಂಡಗಳು ಹೀಗಿವೆ:
ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡ: ಟಾಮ್ ಅಬೆಲ್, ಒಟ್ನಿಯೆಲ್ ಬಾರ್ಟ್‌ಮ್ಯಾನ್, ಟೆಂಬಾ ಬವುಮಾ, ಲಿಯಾಮ್ ಡಾಸನ್ (ENG), ಸರೆಲ್ ಎರ್ವೀ, ಅಯಾ ಗ್ಕಮಾನೆ, ಸೈಮನ್ ಹಾರ್ಮರ್, ಜೋರ್ಡಾನ್ ಹರ್ಮನ್, ಮಾರ್ಕೊ ಜಾನ್ಸೆನ್, ಸಿಸಾಂಡಾ ಮಗಾಲಾ, ಡೇವಿಡ್ ಮಲನ್ (ENG), ಐಡೆನ್ ಮಾರ್ಕ್ರಾಮ್ (ನಾಯಕ), ಕ್ರೇಗ್ ಓವರ್‌ಟನ್ (ENG) , ಆಡಮ್ ರೋಸಿಂಗ್ಟನ್, ಕ್ಯಾಲೆಬ್ ಸೆಲೆಕಾ, ಆಂಡಿಲ್ ಸಿಮೆಲೇನ್, ಟ್ರಿಸ್ಟಾನ್ ಸ್ಟಬ್ಸ್, ಬೇಯರ್ಸ್ ಸ್ವಾನೆಪೋಯೆಲ್, ಡೇನಿಯಲ್ ವೊರಾಲ್.
ಜೋಬರ್ಗ್ ಸೂಪರ್ ಕಿಂಗ್ಸ್ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ಮೊಯಿನ್ ಅಲಿ (ENG), ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ, ಸ್ಯಾಮ್ ಕುಕ್ (ENG), ಲ್ಯೂಸ್ ಡು ಪ್ಲೂಯ್ (ENG), ಡೊನೊವನ್ ಫೆರೇರಾ, ದಯಾನ್ ಗಲಿಯೆಮ್, ರೀಜಾ ಹೆಂಡ್ರಿಕ್ಸ್, ರೊನಾನ್ ಹೆರ್ಮನ್, ಜಹೀರ್ ಖಾನ್ (AFG), ವೇಯ್ನ್ ಮ್ಯಾಡ್ಸೆನ್ (ITA), ಸಿಬೊನೆಲೊ ಮಖನ್ಯಾ, ಆರನ್ ಫಂಗಿಸೊ, ರೊಮಾರಿಯೊ ಶೆಫರ್ಡ್ (WI), ಕೈಲ್ ಸಿಮಂಡ್ಸ್, ಇಮ್ರಾನ್ ತಾಹಿರ್, ಡೇವಿಡ್ ವೈಸ್ (NAM), ಲಿಜಾದ್ ವಿಲಿಯಮ್ಸ್.
ಪಾರ್ಲ್ ರಾಯಲ್ಸ್ ತಂಡ: ಡೇವಿಡ್ ಮಿಲ್ಲರ್ (ನಾಯಕ), ಫೆರಿಸ್ಕೊ ಆಡಮ್ಸ್, ಫ್ಯಾಬಿಯನ್ ಅಲೆನ್ (WI), ಜೋಸ್ ಬಟ್ಲರ್ (ENG), ಜಾರ್ನ್ ಫಾರ್ಟುಯಿನ್, ಇವಾನ್ ಜೋನ್ಸ್, ವಿಹಾನ್ ಲುಬ್ಬೆ, ಕ್ವೆನಾ ಮಫಕಾ, ಒಬೆಡ್ ಮೆಕಾಯ್ (WI), ಲುಂಗಿ ಎನ್ಗಿಡಿ, ಆಂಡಿಲ್ ಫೆಹ್ಲುಕ್ವಾಯೊ, ಲುವಾನ್-ಡ್ರೆ ಪ್ರಿಟೋರಿಯಸ್, ಜೇಸನ್ ರಾಯ್ (ENG), ತಬ್ರೈಜ್ ಶಮ್ಸಿ, ಲೋರ್ಕನ್ ಟಕರ್ (IRE), ಜಾನ್ ಟರ್ನರ್ (ENG), ಮಿಚೆಲ್ ವ್ಯಾನ್ ಬ್ಯೂರೆನ್, ಡೇನ್ ವಿಲಾಸ್, ಕೋಡಿ ಯೂಸುಫ್.
ಇದನ್ನೂ ಓದಿ: Rachin Ravindra: ಡಬಲ್ ಸೆಂಚರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಚಿನ್ ರವೀಂದ್ರ
ಡರ್ಬನ್ ಸೂಪರ್ ಜೈಂಟ್ಸ್ ತಂಡ: ಕೇಶವ್ ಮಹಾರಾಜ್ (ನಾಯಕ), ನೂರ್ ಅಹ್ಮದ್ (AFG), ಮ್ಯಾಥ್ಯೂ ಬ್ರೀಟ್ಜ್ಕೆ, ಜೂನಿಯರ್ ಡಾಲಾ, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜೊರ್ಜಿ, ಹೆನ್ರಿಚ್ ಕ್ಲಾಸೆನ್, ಕೈಲ್ ಮೇಯರ್ಸ್ (WI), ವಿಯಾನ್ ಮುಲ್ಡರ್, ನವೀನ್-ಉಲ್-ಹಕ್ ಮುರಿದ್ (AFG), ಬ್ರೈಸ್ ಪಾರ್ಸನ್ಸ್ , ಕೀಮೋ ಪೌಲ್ (WI), ನಿಕೋಲಸ್ ಪೂರನ್ (WI), ಡ್ವೈನ್ ಪ್ರಿಟೋರಿಯಸ್, ಭಾನುಕಾ ರಾಜಪಕ್ಸೆ (SL), ಜಾನ್-ಜಾನ್ ಸ್ಮಟ್ಸ್, ಜೇಸನ್ ಸ್ಮಿತ್, ಪ್ರೆನೆಲನ್ ಸುಬ್ರಾಯೆನ್, ರೀಸ್ ಟೋಪ್ಲಿ (ENG).
Published On - 10:48 am, Mon, 5 February 24
