VIDEO: ನೋ ಲುಕ್ ರನೌಟ್: ಧೋನಿಯನ್ನು ನೆನಪಿಸಿದ ಬಿಲ್ಲಿಂಗ್ಸ್

Sam Billings: ಈ ಪಂದ್ಯದಲ್ಲಿ 149 ರನ್​ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಶಾರ್ಜಾ ವಾರಿಯರ್ಸ್ ತಂಡವು 8 ವಿಕೆಟ್ ನಷ್ಟಕ್ಕೆ 126 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಡೆಸರ್ಟ್ ವೈಪರ್ಸ್ ತಂಡವು 22 ರನ್​ಗಳ ಜಯ ಸಾಧಿಸಿತು.

VIDEO: ನೋ ಲುಕ್ ರನೌಟ್: ಧೋನಿಯನ್ನು ನೆನಪಿಸಿದ ಬಿಲ್ಲಿಂಗ್ಸ್
Sam Billings
Edited By:

Updated on: Feb 02, 2023 | 6:29 PM

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ನೋ ಲುಕ್ ರನೌಟ್ ಮೂಲಕ ವಿಕೆಟ್ ಕೀಪಿಂಗ್​ನಲ್ಲಿ ಹೊಸ ಭಾಷ್ಯ ಬರೆದಿದ್ದರು. ಈ ಕೈಚಳಕವೇ ಇದೀಗ ಹಲವು ವಿಕೆಟ್ ಕೀಪರ್​ಗಳ ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿದೆ. ಇದಕ್ಕೆ ಸಾಕ್ಷಿಯೇ ಇಂಟರ್​ನ್ಯಾಷನಲ್ ಟಿ20 ಲೀಗ್​ನಲ್ಲಿ (ILT20) ಇಂಗ್ಲೆಂಡ್ ಆಟಗಾರ ಸ್ಯಾಮ್ ಬಿಲ್ಲಿಂಗ್ಸ್ (Sam Billings) ಮಾಡಿರುವ ರನೌಟ್. ಯುಎಇನಲ್ಲಿ ನಡೆಯುತ್ತಿರುವ ಈ ಟಿ20 ಲೀಗ್​ನಲ್ಲಿ ಶಾರ್ಜಾ ವಾರಿಯರ್ಸ್​ ಹಾಗೂ ಡೆಸರ್ಟ್ ವೈಪರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ವೈಪರ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಇತ್ತ ಸುಲಭ ಗುರಿ ಪಡೆದ ಶಾರ್ಜಾ ವಾರಿಯರ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ ಹಾಗೂ ಆ್ಯಡಂ ಹೋಸ್ ಉತ್ತಮ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಆದರೆ ಇವರಿಬ್ಬರ ನಿರ್ಗಮನದೊಂದಿಗೆ ಡೆಸರ್ಟ್ ವೈಪರ್ಸ್ ಬೌಲರ್​ಗಳು ಮೇಲುಗೈ ಸಾಧಿಸಿದರು.

ಇದನ್ನೂ ಓದಿ
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

ಆದರೆ ಈ ಹಂತದಲ್ಲಿ ಕಣಕ್ಕಿಳಿದ ವೈಪರ್ಸ್ ತಂಡದ ನಾಯಕ ಜೋಯ್ ಡೆನ್ಲಿ ಪಂದ್ಯದ ಗತಿಯನ್ನೇ ಬದಲಿಸುವ ನಿರೀಕ್ಷೆಯಲ್ಲಿದ್ದರು. ಆದರೆ ವಿಕೆಟ್ ಕೀಪರ್ ಸ್ಯಾಮ್ಸ್ ಬಿಲ್ಲಿಂಗ್ಸ್ ಅಂತಹ ಅವಕಾಶವನ್ನೇ ನೀಡಿರಲಿಲ್ಲ. 50 ರನ್​ಗೆ 3 ವಿಕೆಟ್ ಕಳೆದುಕೊಂಡಿದ್ದಾಗಿ ಜೋಯ್ ಡೆನ್ಲಿ ಕ್ರೀಸ್​ಗೆ ಆಗಮಿಸಿದ್ದರು. ಅದರಂತೆ 10ನೇ ಓವರ್​ನ 3ನೇ ಎಸೆವನ್ನು ಫ್ರಂಟ್ ಫೂಟ್​ನಲ್ಲಿ ಮುಂದೆ ಬಂದು ಇಂಗ್ಲೆಂಡ್ ಆಟಗಾರ ರಕ್ಷಣಾತ್ಮಕ ಆಡಿದರು. ಅತ್ತ ಸ್ಕ್ವೇರ್​ನತ್ತ ಚೆಂಡು ಸಾಗುತ್ತಿರುವುದನ್ನು ಗಮನಿಸಿದ ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಜಕ್ಕನೆ ಜಿಗಿದು ಹಿಡಿದರು. ಅಷ್ಟೇ ಅಲ್ಲದೆ ಕ್ಷಣಾರ್ಧದಲ್ಲೇ ಹಿಮ್ಮುಖವಾಗಿ ನೇರವಾಗಿ ವಿಕೆಟ್​ಗೆ ಎಸೆದರು.

ಇತ್ತ ಬೇಲ್ಸ್ ಎಗರುತ್ತಿದ್ದಂತೆ ಲೆಗ್ ಅಂಪೈರ್ ಮೂರನೇ ಅಂಪೈರ್​ಗೆ ಮನವಿ ಸಲ್ಲಿಸಿದರು. ವಿಡಿಯೋ ಪರಿಶೀಲನೆ ವೇಳೆ ಜೋಯ್ ಡೆನ್ಲಿ ಅವರ ಬ್ಯಾಟ್ ಹೊರಗಿತ್ತು. ವಿಕೆಟ್ ಕೀಪರ್​ ನೋಡದಿರುವುದನ್ನು ನಿರ್ಲಕ್ಷಿಸಿದ್ದ ಡೆನ್ಲಿ ಸ್ಯಾಮ್ಸ್​ ಬಿಲ್ಲಿಂಗ್ಸ್ ಅವರ ನೋ ಲುಕ್​ ಥ್ರೋಗೆ ರನೌಟ್ ಆಗಿದ್ದರು.

ಇದೀಗ ಸ್ಯಾಮ್ಸ್ ಬಿಲ್ಲಿಂಗ್ಸ್ ಅವರ ಈ ಕೈಚಳಕದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ಬಿಲ್ಲಿಂಗ್ ಧೋನಿಯನ್ನು ನೆನಪಿಸಿದರು ಎಂದು ಕಮೆಂಟಿಸಿದ್ದಾರೆ. ಏಕೆಂದರೆ ಮಹೇಂದ್ರ ಸಿಂಗ್ ಧೋನಿ ಹಲವು ಬಾರಿ ನೋ ಲುಕ್ ರನೌಟ್ ಮಾಡಿ ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಇದೀಗ ಇದೇ ಮಾದರಿಯಲ್ಲಿ ರನೌಟ್ ಮಾಡುವ ಮೂಲಕ ಬಿಲ್ಲಿಂಗ್ ಮಿಂಚಿದ್ದಾರೆ.

 

ಇನ್ನು ಈ ಪಂದ್ಯದಲ್ಲಿ 149 ರನ್​ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಶಾರ್ಜಾ ವಾರಿಯರ್ಸ್ ತಂಡವು 8 ವಿಕೆಟ್ ನಷ್ಟಕ್ಕೆ 126 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಡೆಸರ್ಟ್ ವೈಪರ್ಸ್ ತಂಡವು 22 ರನ್​ಗಳ ಜಯ ಸಾಧಿಸಿತು.