T20 World Cup 2022: 10 ರನ್​ಗೆ 5 ವಿಕೆಟ್: ಅಫ್ಘಾನ್ ವಿರುದ್ಧ ಇಂಗ್ಲೆಂಡ್​ಗೆ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Oct 22, 2022 | 10:12 PM

Sam Curran: ಸ್ಯಾಮ್ ಕರನ್ ಅವರ ಈ ಮಾರಕ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ್ ತಂಡವು ಅಂತಿಮವಾಗಿ 19.4 ಓವರ್​ 112 ರನ್​ಗಳಿಗೆ ಆಲೌಟ್ ಆಯಿತು.

T20 World Cup 2022: 10 ರನ್​ಗೆ 5 ವಿಕೆಟ್: ಅಫ್ಘಾನ್ ವಿರುದ್ಧ ಇಂಗ್ಲೆಂಡ್​ಗೆ ಭರ್ಜರಿ ಜಯ
England
Follow us on

T20 World Cup 2022:  ಟಿ20 ವಿಶ್ವಕಪ್​ನ ಸೂಪರ್-12 ಹಂತದ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ತಂಡವು ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ. ಪರ್ತ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು. ಬಟ್ಲರ್ ಅವರ ಈ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಯುವ ಆಲ್​ರೌಂಡರ್ ಸ್ಯಾಮ್ ಕರನ್ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದರು.

ಆರಂಭಿಕ ಆಟಗಾರ ಗುರ್ಬಾಜ್ (10) ವಿಕೆಟ್ ಪಡೆಯುವ ಮೂಲಕ ಮಾರ್ಕ್​ವುಡ್ ಇಂಗ್ಲೆಂಡ್​ಗೆ ಮೊದಲ ಯಶಸ್ಸು ತಂದುಕೊಟ್ಟರೆ, ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ ಎಡಗೈ ಬ್ಯಾಟರ್ ಝಝೈ (7) ವಿಕೆಟ್ ಪಡೆದರು. ಈ ಎರಡು ವಿಕೆಟ್​ಗಳ ಬಳಿಕ ಸ್ಯಾಮ್ ಕರನ್ ಬೌಲಿಂಗ್ ಮೋಡಿ ಶುರುವಾಗಿತ್ತು.

32 ರನ್​ಗಳಿಸಿದ್ದ ಇಬ್ರಾಹಿಂ ಝರ್ದಾನ್ ವಿಕೆಟ್ ಉರುಳಿಸುವ ಮೂಲಕ ಖಾತೆ ತೆರೆದ ಕರನ್, ಆ ಬಳಿಕ ಉಸ್ಮಾನ್ ಘನಿ (30), ಅಝಮುಲ್ಲಾ (8), ರಶೀದ್ ಖಾನ್ (0) ಹಾಗೂ ಫಾರೂಕಿ (0) ವಿಕೆಟ್​ ಉರುಳಿಸಿ ಚೊಚ್ಚಲ ಟಿ20 ವಿಶ್ವಕಪ್​ ಪಂದ್ಯದಲ್ಲೇ ಐದು ವಿಕೆಟ್​ಗಳನ್ನು ಕಬಳಿಸಿದ ಸಾಧನೆ ಮಾಡಿದರು.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಸ್ಯಾಮ್ ಕರನ್ ಅವರ ಈ ಮಾರಕ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ್ ತಂಡವು ಅಂತಿಮವಾಗಿ 19.4 ಓವರ್​ 112 ರನ್​ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಸ್ಯಾಮ್ ಕರನ್ 5 ವಿಕೆಟ್ ಕಬಳಿಸಿ ಮಿಂಚಿದರೆ, ಮಾರ್ಕ್​ವುಡ್ ಮತ್ತು ಬೆನ್​ ಸ್ಟೋಕ್ಸ್ ತಲಾ 2 ವಿಕೆಟ್ ಪಡೆದರು.

ಇನ್ನು 113 ರನ್​ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ಬೌಲರ್​ಗಳು ಉತ್ತಮ ಪ್ರದರ್ಶನವನ್ನೇ ನೀಡಿದರು. 13.5 ಓವರ್​ಗಳಲ್ಲಿ 81 ರನ್ ನೀಡಿ 4 ವಿಕೆಟ್ ಉರುಳಿಸಿ ಅಫ್ಘಾನಿಸ್ತಾನ್ ಪಂದ್ಯದಲ್ಲಿ ರೋಚಕತೆ ತರುವಲ್ಲಿ ಯಶಸ್ವಿಯಾಗಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ 21 ಎಸೆತಗಳಲ್ಲಿ 29 ರನ್ ಬಾರಿಸುವ ಮೂಲಕ ಲಿಯಾಮ್ ಲಿವಿಂಗ್​ಸ್ಟೋನ್ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಅದರಂತೆ ಅಂತಿಮವಾಗಿ ಇಂಗ್ಲೆಂಡ್ ತಂಡವು 18.1 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 113 ರನ್​ಗಳಿಸುವ ಮೂಲಕ ಗೆಲುವಿನೊಂದಿಗೆ ಶುಭಾರಂಭ ಮಾಡಿತು. 3.4 ಓವರ್​ಗಳಲ್ಲಿ ಕೇವಲ 10 ರನ್ ನೀಡಿ 5 ವಿಕೆಟ್ ಕಬಳಿಸಿ ಸ್ಯಾಮ್ ಕರನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.