
Sam Curran ruled out: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ಆಲ್ರೌಂಡರ್ ಸ್ಯಾಮ್ ಕರನ್ (Sam Curran) ಐಪಿಎಲ್ನಿಂದ (IPL 2021) ಹೊರ ನಡೆದಿದ್ದಾರೆ. ಕಳೆದ ಕೆಲ ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿರುವ ಸ್ಯಾಮ್ ಇದೀಗ ಐಪಿಎಲ್ನಿಂದ ಹಿಂದೆ ಸರಿದಿದ್ದು, ಹಾಗೆಯೇ ಮುಂಬರುವ ಟಿ20 ವಿಶ್ವಕಪ್ಗೂ ಅಲಭ್ಯರಾಗಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪ್ರಕಟಿಸಿದೆ. ಇನ್ನು ಟಿ20 ವಿಶ್ವಕಪ್ನಿಂದ ಹೊರಗುಳಿದಿರುವ ಸ್ಯಾಮ್ ಅವರ ಸ್ಥಾನಕ್ಕೆ ಅವರ ಹಿರಿಯ ಸಹೋದರ ಟಾಮ್ ಕರನ್ (Tom Curran) ಅವರನ್ನು ಇಂಗ್ಲೆಂಡ್ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಕರನ್ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದರು. ಅಲ್ಲದೆ ಕೆಲ ಕಾಲ ಫೀಲ್ಡಿಂಗ್ನಿಂದ ಹೊರಗುಳಿದಿದ್ದರು. ಇದೀಗ ಸಮಸ್ಯೆ ಗಂಭೀರವಾಗಿರುವುದರಿಂದ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಇಂಗ್ಲೆಂಡ್ಗೆ ತೆರಳುವ ಕಾರಣ ಟಿ20 ವಿಶ್ವಕಪ್ಗೂ ಲಭ್ಯರಿರುವುದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸಿದೆ. ಇದಾಗ್ಯೂ ನಾಕೌಟ್ ಹಂತದ ಪಂದ್ಯದ ವೇಳೆ ಸ್ಯಾಮ್ ಕರನ್ ಅಲಭ್ಯತೆಯು ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ 23 ವರ್ಷದ ಸ್ಯಾಮ್ ಕರನ್ ಒಂಬತ್ತು ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದರು. ಇದೀಗ ಅಂತಿಮ ಹಂತದಲ್ಲಿ ಹೊರಗುಳಿಯುತ್ತಿರುವುದರಿಂದ ಪ್ರಸ್ತುತ ತಂಡದಲ್ಲಿರುವ ಆಟಗಾರರನ್ನೇ ಮುಂದುವರೆಸಬೇಕಾಗುತ್ತದೆ. ಹೀಗಾಗಿ ಕರನ್ ಅಲಭ್ಯತೆಯು ಸಿಎಸ್ಕೆ ತಂಡದ ಪ್ಲೇಆಫ್ ಪಂದ್ಯಗಳ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅತ್ತ ಟಿ20 ವಿಶ್ವಕಪ್ನಿಂದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಹೊರಗುಳಿದಿದ್ದು, ಇದೀಗ ತಂಡದಲ್ಲಿದ್ದ ಯುವ ಆಲ್ರೌಂಡರ್ ಗಾಯದ ಕಾರಣ ಅಲಭ್ಯರಾಗಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಇದನ್ನೂ ಓದಿ: IPL 2021: ಮುಂದಿನ 2 ಪಂದ್ಯಗಳನ್ನು RCB ಗೆಲ್ಲಲೇಬೇಕು, ಏಕೆಂದರೆ…
ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್
Published On - 6:17 pm, Tue, 5 October 21