
ಲಂಡನ್ನ ಓವಲ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ (India vs England) ವಿರುದ್ಧ ಟೀಮ್ ಇಂಡಿಯಾ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನ ರೂವಾರಿ ಜಸ್ಪ್ರೀತ್ ಬುಮ್ರಾ (Jasprit Bumrah). ಏಕೆಂದರೆ ಇಂಗ್ಲೆಂಡ್ ತಂಡವನ್ನು ಕೇವಲ 110 ರನ್ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 7.2 ಓವರ್ ಬೌಲಿಂಗ್ ಮಾಡಿದ್ದ ಬುಮ್ರಾ ಕೇವಲ 19 ರನ್ ನೀಡಿ 6 ವಿಕೆಟ್ ಉರುಳಿಸಿ ಮಿಂಚಿದ್ದರು. ವಿಶೇಷ ಎಂದರೆ ಈ ಪಂದ್ಯದಲ್ಲಿ ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಶೂನ್ಯಕ್ಕೆ ಔಟಾಗಿದ್ದರು. ಇತ್ತ ಇಂಗ್ಲೆಂಡ್ ತಂಡವು ಕೇವಲ 110 ರನ್ಗಳಿಗೆ ಆಲೌಟಾದ ಬಳಿಕ ಇನಿಂಗ್ಸ್ ಬ್ರೇಕ್ನಲ್ಲಿ ಬುಮ್ರಾ ಪತ್ನಿ ಸಂಜನಾ ಗಣೇಶನ್ (Sanjana Ganesan) ಕಾಣಿಸಿಕೊಂಡಿದ್ದರು.
ಸೋನಿ ನೆಟ್ವರ್ಕ್ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಸಂಜನಾ ಇಂಗ್ಲೆಂಡ್ ತಂಡದ ಪ್ರದರ್ಶನವನ್ನು ಲೈವ್ನಲ್ಲೇ ಟ್ರೋಲ್ ಮಾಡುವ ಮೂಲಕ ಗಮನ ಸೆಳೆದರು. ದಿ ಓವಲ್ ಮೈದಾನದ ಫುಡ್ ಸ್ಟಾಲ್ಗಳಲ್ಲಿ ಆಹಾರಗಳ ಬಗ್ಗೆ ಪರಿಚಯಿಸಿದ್ದ ಸಂಜನಾ ಗಣೇಶನ್ ಆತಿಥೇಯ ತಂಡದ ಬ್ಯಾಟರ್‌ಗಳನ್ನು ನಿರ್ದಯವಾಗಿ ಮತ್ತು ಉಲ್ಲಾಸದಿಂದ ಟ್ರೋಲ್ ಮಾಡಿದರು.
ಫುಡ್ ಸ್ಟಾಲ್ಗಳ ಬಗ್ಗೆ ಮಾತನಾಡುತ್ತಾ, ಇಂಗ್ಲಿಷ್ ಕ್ರಿಕೆಟ್ ಪ್ರೇಮಿಗಳು ಸದಾ ತುಂಬಿಕೊಂಡಿರುವ ಬ್ಲಾಕ್ ಇದಾಗಿದೆ. ಅವರು ಹೆಚ್ಚು ಹೊತ್ತು ಕ್ರಿಕೆಟ್ ನೋಡಲು ಬಯಸುತ್ತಿಲ್ಲ. ಏಕೆಂದರೆ ಇಲ್ಲಿ ಸಾಕಷ್ಟು ಫುಡ್ ಸ್ಟಾಲ್‌ಗಳಿವೆ. ಇಲ್ಲಿರುವ ದಿ ಕ್ರಿಸ್ಪಿ ಡಕ್ ಸ್ಟಾಲ್ಗೆ ಬನ್ನಿ. ನಿಮಗೆ ಇಲ್ಲಿ ಹಾಟ್ ಆಗಿರುವ ಕ್ರಿಸ್ಪಿ ಡಕ್, ಡಕ್ ಫ್ಯಾಟ್ ಚಿಪ್ಸ್ ಸೇರಿದಂತೆ ಹಲವು ಆಹಾರಗಳು ಸಿಗುತ್ತವೆ. ಅತ್ತ ಕಡೆ ಮೈದಾನದಲ್ಲೂ ಡಕ್ (ಶೂನ್ಯ), ಇತ್ತ ಕಡೆ ಮೈದಾನದ ಹೊರಗೂ ಡಕ್…ಎಷ್ಟು ಚೆನ್ನಾಗಿದೆ. ಆದರೆ ಇಂಗ್ಲೆಂಡ್ ತಂಡದ ಕೆಲ ಬ್ಯಾಟ್ಸ್ಮನ್ಗಳು ಇತ್ತ ತಲೆ ಹಾಕುವುದಿಲ್ಲ ಎಂದು ಸಂಜನಾ ಗಣೇಶನ್ ಲೈವ್ನಲ್ಲೇ ಟ್ರೋಲ್ ಮಾಡಿದ್ದರು.
ಈ ಪಂದ್ಯದಲ್ಲಿ ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಡಕ್ ಔಟ್ ಆಗಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಸಂಜನಾ, ಇಂಗ್ಲೆಂಡ್ನ ಕೆಲ ಆಟಗಾರರು ಈ ಕಡೆ ಬರಲು ಇಷ್ಟಪಡುವುದಿಲ್ಲ ಎಂದು ಕಿಚಾಯಿಸಿದ್ದರು. ಇದೀಗ ಈ ವಿಡಿಯೋವನ್ನು ಸೋನಿ ನೆಟ್ವರ್ಕ್ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
While our bowlers bagged some ?s on the field, @SanjanaGanesan ‘wrap’ped up some ?s off the field at #TheOval ?#ENGvIND #SonySportsNetwork pic.twitter.com/SzzQ9dVEaJ
— Sony Sports Network (@SonySportsNetwk) July 12, 2022
ಅತ್ತ ಕಡೆ ಪತಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದರೆ, ಇತ್ತ ಕಡೆಯಿಂದ ಪತ್ನಿ ಸಂಜನಾ ಗಣೇಶನ್ ಡಕ್ ಬೌನ್ಸರ್ ಎಸೆದಿದ್ದಾರೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 110 ರನ್ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ವಿಕೆಟ್ ನಷ್ಟವಿಲ್ಲದೆ ಚೇಸ್ ಮಾಡುವ ಮೂಲಕ 10 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. ಹಾಗೆಯೇ ಟೀಮ್ ಇಂಡಿಯಾ ಪರ 7.2 ಓವರ್ಗಳಲ್ಲಿ 19 ರನ್ ನೀಡಿ 6 ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ.