ಹ್ಯಾಮಿಲ್ಟನ್ನ ಸೀಡನ್ ಪಾರ್ಕ್ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ (India vs New Zealandd) ನಡುವಣ ದ್ವಿತೀಯ ಏಕದಿನ ಪಂದ್ಯ ಶುರುವಾಗಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದಿರುವ ಟೀಮ್ ಇಂಡಿಯಾ ಪರ ಓಪನರ್ಗಳಾದ ನಾಯಕ ಶಿಖರ್ ಧವನ್ (Shikhar Dhawan) ಹಾಗೂ ಶುಭ್ಮನ್ ಗಿಲ್ ಉತ್ತಮ ಉತ್ತಮ ಆರಂಭ ಒದಗಿಸಿದ್ದಾರೆ. ಇಂದಿನ ಪಂದ್ಯಕ್ಕೆ ಉಭಯ ತಂಡಗಳಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ನ್ಯೂಜಿಲೆಂಡ್ ಪರ ಆ್ಯಡಂ ಮಿಲ್ನೆ ಬದಲು ಮಿಚೆಲ್ ಬ್ರೇಸ್ವೆಲ್ ಕಾಣಿಸಿಕೊಂಡಿದ್ದಾರೆ. ಇತ್ತ ಟೀಮ್ ಇಂಡಿಯಾದಲ್ಲಿ ಎರಡು ಮಹತ್ವದ ಬದಲಾವಣೆ ಆಗಿದೆ. ಶಾರ್ದೂಲ್ ಠಾಕೂರ್ ಜಾಗಕ್ಕೆ ದೀಪಕ್ ಚಹರ್ ಬಂದಿದ್ದರೆ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಪುನಃ ಕಡೆಗಣಿಸಲಾಗಿದ್ದು ದೀಪಕ್ ಹೂಡ ಆಯ್ಕೆ ಆಗಿದ್ದಾರೆ.
ಇದೀಗ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟ ಬಗ್ಗೆ ಅಭಿಮಾನಿಗಳು ಟ್ವಿಟರ್ನಲ್ಲಿ ಬಿಸಿಸಿಐ ವಿರುದ್ಧ ಸಿಡಿದೆದ್ದಿದ್ದಾರೆ. ”ಸಂಜು ಸ್ಯಾಮ್ಸನ್ ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಆಗಿದ್ದರೂ ತಂಡದಲ್ಲಿ ರಿಷಭ್ ಪಂತ್ ಇರುವ ಕಾರಣ ಅವಕಾಶ ವಂಚಿತರಾಗುತ್ತಿದ್ದಾರೆ. ತಂಡದಲ್ಲಿದ್ದರೂ ಕೇವಲ ಬೆಂಚ್ ಬಿಸಿಮಾಡಲಷ್ಟೇ ಸೀಮಿತವಾಗಿದ್ದಾರೆ. ಕಳಪೆ ಫಾರ್ಮ್ನಲ್ಲಿರುವ ಪಂತ್ ಮೇಲೆ ಬಿಸಿಸಿಐಗೆ ಅದು ಯಾಕಿಷ್ಟು ಪ್ರೀತಿ,” ಎಂದು ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.
#SanjuSamson please retire from this shitty team and play for some other country where the talent gets respect not the money or power or politics like corrupted BCCI
— Praveen John (@Praveen99659069) November 27, 2022
@IamSanjuSamson got dropped after just one match. Still @RishabhPant17 is getting chances again and again. #SanjuSamson #RishabhPant
— DJ (@djpradhan97) November 27, 2022
ಭಾರತ ಕಿವೀಸ್ ನಾಡಿಗೆ ಪ್ರವಾಸ ಬೆಳೆಸುವಮುನ್ನ ಹಿರಿಯ ಆಟಗಾರರಿಗೆ ರೆಸ್ಟ್ ನೀಡಿದ ಪರಿಣಾಮ ತಂಡಕ್ಕೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್‍ಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಸ್ಯಾಮ್ಸನ್‍ಗೆ ಅವಕಾಶ ನೀಡಲಿಲ್ಲ. ಇತ್ತ ರಿಷಭ್ ಪಂತ್ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಆಗಿ ಮೂರು ಪಂದ್ಯದಲ್ಲೂ ಅವಕಾಶ ಪಡೆದರೂ ಬ್ಯಾಟಿಂಗ್‍ನಲ್ಲಿ ಸಂಪೂರ್ಣ ವಿಫಲರಾಗಿದ್ದರು. ಕೊನೆಗೂ ಸ್ಯಾಮ್ಸನ್ ಅವರನ್ನು ಮೊದಲ ಏಕದಿನದಲ್ಲಿ ಕಣಕ್ಕಿಳಿಸಿದರು. ತಂಡ ಸಂಕಷ್ಟದಲ್ಲಿದ್ದ ಸಂದರ್ಭ ಕ್ರೀಸ್ಗೆ ಬಂದ ಸಂಜು ಅವರು ಶ್ರೇಯಸ್ ಅಯ್ಯರ್ ಜೊತೆಗೂಡಿ 94 ರನ್ಗಳ ಜೊತೆಯಾಟ ಆಡಿದರು. 38 ಎಸೆತಗಳಲ್ಲಿ 36 ರನ್ಗಳ ಕೊಡುಗೆ ನೀಡಿದರು. ಇಲ್ಲಿ ಪಂತ್ ಕಲೆಹಾಕಿದ್ದು 23 ಎಸೆತಗಳಲ್ಲಿ ಕೇವಲ 15 ರನ್ ಮಾತ್ರ.
ಮೊದಲ ಏಕದಿನದಲ್ಲಿ ತಂಡವನ್ನು ಮೇಲೆತ್ತಲು ಸಹಾಯ ಮಾಡಿದ ಸಂಜು ಅವವರನ್ನು ಈಗ ಪುನಃ ಕೈಬಿಟ್ಟಿರುವುದು ಅಭಿಮಾನಿಗಳ ಆಕ್ರೊಶಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೆ ರವಿಶಾಸ್ತ್ರಿ ಕೂಡ ಸಂಜು ಕಡೆಗಣನೆ ಬಗ್ಗೆ ಮಾತನಾಡಿದ್ದರು. ”ಸ್ಯಾಮ್ಸನ್ ಅವರನ್ನು ಒಂದು ಪಂದ್ಯದಲ್ಲಿ ಆಡಿಸುವುದು ಮತ್ತೊಂದು ಪಂದ್ಯದಿಂದ ಹೊರಗಿಡುವುದು ಸರಿಯಲ್ಲ. ಅವರಿಗೆ ಸತತವಾಗಿ 10 ಪಂದ್ಯಗಳಲ್ಲಿ ಆಡುವ ಅವಕಾಶ ನೀಡಿ. ಈ ಸಂದರ್ಭ ಉತ್ತಮ ಪ್ರದರ್ಶನ ನೀಡಿಲ್ಲ ಎಂದಾದರೆ ತಂಡದಿಂದ ಕೈಬಿಡಿ. ಆದರೆ, ಈರೀತಿ ಮಾಡಬೇಡಿ,” ಎಂದು ಹೇಳಿದ್ದರು.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI:
ಶಿಖರ್ ಧವನ್ (ನಾಯಕ), ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.
Published On - 8:20 am, Sun, 27 November 22