IND vs NZ: ಸ್ಯಾಮ್ಸನ್ಗೆ ಮತ್ತೆ ತಂಡದಿಂದ ಕೋಕ್, 2 ಬದಲಾವಣೆ..! ಹೀಗಿವೆ ಉಭಯ ತಂಡಗಳು
IND vs NZ: ಎರಡನೇ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳಿವೆ. ಅದೇ ಸಮಯದಲ್ಲಿ, ನ್ಯೂಜಿಲೆಂಡ್ ಕೂಡ ಒಂದು ಬದಲಾವಣೆಯನ್ನು ಮಾಡಿದೆ.
ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಎರಡನೇ ಏಕದಿನ ಪಂದ್ಯ ಇಂದು ಹ್ಯಾಮಿಲ್ಟನ್‌ನಲ್ಲಿ (Hamilton) ನಡೆಯುತ್ತಿದೆ. ಸರಣಿಯಲ್ಲಿ 0-1 ಅಂತರದಲ್ಲಿ ಹಿನ್ನಡೆಯಲ್ಲಿರುವ ಭಾರತ ತಂಡಕ್ಕೆ ಇಂದಿನ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಧವನ್ (Shikhar Dhawan) ಪಡೆ ಸೋತರೆ ಪಂದ್ಯದ ಜತೆಗೆ ಏಕದಿನ ಸರಣಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಎರಡನೇ ಏಕದಿನ ಪಂದ್ಯದ ಟಾಸ್ ನಡೆದಿದ್ದು, ಟಾಸ್ ಗೆದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ (Kane Williamson) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಇದರೊಂದಿಗೆ ಎರಡೂ ತಂಡಗಳು ತಮ್ಮ ಪ್ಲೇಯಿಂಗ್ ಇಲೆವೆನ್ ಅನ್ನು ಸೀಲ್ ಮಾಡಿಕೊಂಡಿವೆ.
ಎರಡನೇ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳಿವೆ. ಅದೇ ಸಮಯದಲ್ಲಿ, ನ್ಯೂಜಿಲೆಂಡ್ ಕೂಡ ಒಂದು ಬದಲಾವಣೆಯನ್ನು ಮಾಡಿದೆ. ಆಕ್ಲೆಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 306 ರನ್‌ಗಳ ಬೃಹತ್ ಸ್ಕೋರ್ ಸೆಟ್ ಮಾಡಿತ್ತು. ಈ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ ತಂಡ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಟಾಮ್ ಲೇಥಮ್ ಅವರ ದ್ವಿಶತಕದ ಜೊತೆಯಾಟದ ನೆರವಿನಿಂದಾಗಿ ಸುಲಭವಾಗಿ ಗುರಿ ಸಾಧಿಸಿತ್ತು. ಎರಡನೇ ಏಕದಿನ ಪಂದ್ಯದಲ್ಲೂ ಭಾರತ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧದ ಸ್ಕೋರ್ ಅನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ.
ಭಾರತದಲ್ಲಿ 2, ನ್ಯೂಜಿಲೆಂಡ್‌ನಲ್ಲಿ ಒಂದು ಬದಲಾವಣೆ
ಸಂಜು ಸ್ಯಾಮ್ಸನ್ ಅವರನ್ನು ಟೀಂ ಇಂಡಿಯಾದ ಆಡುವ ಇಲೆವೆನ್ನಿಂದ ಕೈಬಿಡಲಾಗಿದೆ. ಅವರ ಜಾಗದಲ್ಲಿ ದೀಪಕ್ ಹೂಡಾಗೆ ಅವಕಾಶ ಸಿಕ್ಕಿದೆ. ಹಾಗೆಯೇ ಕಳೆದ ಪಂದ್ಯದಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದ ಶಾರ್ದೂಲ್ ಠಾಕೂರ್ಗೆ ಈ ಪಂದ್ಯದಿಂದ ಕೋಕ್ ಸಿಕ್ಕಿದ್ದು ಅವರ ಸ್ಥಾನವನ್ನು ದೀಪಕ್ ಚಹಾರ್ ಅವರಿಗೆ ವಹಿಸಲಾಗಿದೆ. ಇನ್ನು ಕಿವೀಸ್ ತಂಡದಲ್ಲಿ ಒಂದು ಬದಲಾವಣೆಯಾಗಿದ್ದು, ಆಡಮ್ ಮಿಲ್ನೆ ಬದಲಿಗೆ ಮೈಕೆಲ್ ಬ್ರೇಸ್‌ವೆಲ್‌ಗೆ ಅವಕಾಶ ನೀಡಲಾಗಿದೆ.
ಎರಡೂ ತಂಡಗಳು ಹೀಗಿವೆ
ಭಾರತದ ಪ್ಲೇಯಿಂಗ್ ಇಲೆವೆನ್: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
? Team News ?
2⃣ changes for #TeamIndia as @HoodaOnFire & @deepak_chahar9 are named in the team. #NZvIND
Follow the match ? https://t.co/frOtF82cQ4
A look at our Playing XI ? pic.twitter.com/MnkwOy6Qde
— BCCI (@BCCI) November 27, 2022
Set to go at Seddon! Bowling first in Hamilton after another Kane Williamson toss win. Bracewell in for Milne the only change from ODI 1. Follow play LIVE in NZ with @sparknzsport & @TodayFM_nz and in India on @PrimeVideoIN ? #NZvIND pic.twitter.com/7VrQquA8nl
— BLACKCAPS (@BLACKCAPS) November 27, 2022
ನ್ಯೂಜಿಲೆಂಡ್ ಪ್ಲೇಯಿಂಗ್ ಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಮೈಕೆಲ್ ಬ್ರೇಸ್‌ವೆಲ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗುಸನ್
Published On - 6:58 am, Sun, 27 November 22