ಡ್ರಗ್ಸ್ ಚಟಕ್ಕೆ ಹಳಿತಪ್ಪಿದ ವೃತ್ತಿ ಬದುಕು; ಬಡತನದಲ್ಲೇ ಕೊನೆಯುಸಿರೆಳೆದ ವಿಂಡೀಸ್ ವಿಕೆಟ್​ ಕೀಪರ್

David Murray: ಮಾದಕ ವ್ಯಸನಕ್ಕೆ ಬಲಿಯಾಗಿ ಬರಿ ಬಡತನದಲ್ಲೇ ಜೀವನ ಸಾಗಿಸಿದ ಮುರ್ರೆ, ತಮ್ಮ ಜೀವನ ನಿರ್ವಾಹಣೆಗಾಗಿ ಮಾದಕವಸ್ತುಗಳ ಮಾರಾಟಕ್ಕೂ ಇಳಿದಿದ್ದರು.

ಡ್ರಗ್ಸ್ ಚಟಕ್ಕೆ ಹಳಿತಪ್ಪಿದ ವೃತ್ತಿ ಬದುಕು; ಬಡತನದಲ್ಲೇ ಕೊನೆಯುಸಿರೆಳೆದ ವಿಂಡೀಸ್ ವಿಕೆಟ್​ ಕೀಪರ್
David Murray
Follow us
TV9 Web
| Updated By: ಪೃಥ್ವಿಶಂಕರ

Updated on:Nov 27, 2022 | 9:00 AM

ಆಸ್ಟ್ರೇಲಿಯ ಮತ್ತು ವೆಸ್ಟ್ ಇಂಡೀಸ್ (Australia and West Indies) ನಡುವಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ವಿಂಡೀಸ್ ತಂಡಕ್ಕೆ ದುಃಖದ ಸುದ್ದಿಯೊಂದು ಎದುರಾಗಿದೆ. ವೆಸ್ಟ್ ಇಂಡೀಸ್‌ ತಂಡದ ದಿಗ್ಗಜ ಬ್ಯಾಟ್ಸ್‌ಮನ್ ಸರ್ ಎವರ್ಟನ್ ವೀಕ್ಸ್ (Sir Everton Weekes) ಅವರ ಪುತ್ರ, ಮಾಜಿ ಟೆಸ್ಟ್ ಕ್ರಿಕೆಟಿಗ ಡೇವಿಡ್ ಮುರ್ರೆ (David Murray) ತಮ್ಮ 72ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮುರ್ರೆ ಬಾರ್ಬಡೋಸ್‌ನಲ್ಲಿರುವ ಅವರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 1970ರ ದಶಕದಲ್ಲಿ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದ ಮುರ್ರೆ ಅವರ ಅಗಲಿಕೆಗೆ ಕ್ರಿಕೆಟ್ ವೆಸ್ಟ್ ಇಂಡೀಸ್ ಸಂತಾಪ ಸೂಚಿಸಿದೆ.

1973 ರ ಇಂಗ್ಲೆಂಡ್ ಪ್ರವಾಸದಲ್ಲಿ ಏಕದಿನ ಮಾದರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಮುರ್ರೆ ಅವರಿಗೆ 1978ರಲ್ಲಿ, ಅಂದರೆ ಏಕದಿನ ಕ್ರಿಕೆಟ್​ಗೆ ಕಾಲಿಟ್ಟ 5 ವರ್ಷಗಳ ನಂತರ ಟೆಸ್ಟ್‌ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಅತ್ಯುತ್ತಮ ವಿಕೆಟ್ ಕೀಪರ್ ಎನಿಸಿಕೊಂಡಿದ್ದ ಡೇವಿಡ್ ಮುರ್ರೆ ಬ್ಯಾಟಿಂಗ್​ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ. ಹೀಗಾಗಿ ಅವರಿಗೆ ವಿಂಡೀಸ್ ತಂಡದಲ್ಲಿ ಖಾಯಂ ಸ್ಥಾನ ಸಿಗಲಿಲ್ಲ. ಈ ಕಾರಣದಿಂದಾಗಿ ತಂಡದ ಮತ್ತಿಬ್ಬರು ವಿಕೆಟ್ ಕೀಪರ್​ಗಳಾಗಿದ್ದ ಡೆರಿಕ್ ಮುರ್ರೆ ಮತ್ತು ನಂತರ ಜೆಫ್ ಡುಜಾನ್ ಬ್ಯಾಟಿಂಗ್‌ನಲ್ಲಿಯೂ ಕೊಡುಗೆ ನೀಡುತ್ತಾ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಮಾದಕ ವ್ಯಸನದಿಂದ ಹಳಿತಪ್ಪಿದ ವೃತ್ತಿ ಬದುಕು

ಈ ಇಬ್ಬರು ಅತ್ಯುತ್ತಮ ವಿಕೆಟ್‌ಕೀಪರ್‌ಗಳಿಂದಾಗಿ ಡೇವಿಡ್ ಮುರ್ರೆ ವಿಂಡೀಸ್ ತಂಡದಲ್ಲಿ ಹೆಚ್ಚು ಕಾಲ ಆಡದೆ ಇರುವುದು ಒಂದು ಕಾರಣವಾಗಿತ್ತು. ಇದರೊಂದಿಗೆ ದುಶ್ಚಟಗಳಿಗೆ ಬಲಿಯಾಗಿದ್ದರಿಂದ ಮುರ್ರೆ ವೃತ್ತಿಜೀವನವು ಎಂದಿಗೂ ವಿಜೃಂಭಿಸಲಿಲ್ಲ. ಕೇವಲ 13 ನೇ ವಯಸ್ಸಿನಲ್ಲಿಯೇ ಮುರ್ರೆ ಗಾಂಜಾಕ್ಕೆ ದಾಸರಾಗಿಬಿಟ್ಟಿದ್ದರು. ಇದು ಅವರ ಕ್ರಿಕೆಟ್ ವೃತ್ತಿಜೀವನದಲ್ಲಿಯೂ ಮುಂದುವರೆಯಿತು. ಟೆಸ್ಟ್ ಪಾದಾರ್ಪಣೆಯ ನಂತರ, ಭಾರತ ಪ್ರವಾಸ ಮಾಡಿದ್ದ ಮುರ್ರೆ ಅವರು ಮುಂಬೈನ ಹೋಟೆಲ್ ವೇಟರ್‌ಗಳ ಮೂಲಕ ಅನೇಕ ಬಾರಿ ಗಾಂಜಾವನ್ನು ಆರ್ಡರ್ ಮಾಡಿ ತರಿಸಿಕೊಳ್ಳುತ್ತಿದ್ದರು ಎಂದು ವರದಿಯಾಗಿದೆ.

ಜೀವನ ನಿರ್ವಾಹಣೆಗಾಗಿ ಮಾದಕ ವಸ್ತುಗಳ ಮಾರಾಟ

ಗಾಂಜಾ ವ್ಯಸನಿಯಾಗಿದ್ದ ಮುರ್ರೆ ವೃತ್ತಿ ಜೀವನ ದೀರ್ಘಕಾಲ ಉಳಿಯದೆ 1983 ರಲ್ಲೇ ಅಂತ್ಯಗೊಂಡಿತು. ಮಾದಕ ವ್ಯಸನಕ್ಕೆ ಬಲಿಯಾಗಿ ಬರಿ ಬಡತನದಲ್ಲೇ ಜೀವನ ಸಾಗಿಸಿದ ಮುರ್ರೆ, ತಮ್ಮ ಜೀವನ ನಿರ್ವಾಹಣೆಗಾಗಿ ಮಾದಕವಸ್ತುಗಳ ಮಾರಾಟಕ್ಕೂ ಇಳಿದಿದ್ದರು. ವೆಸ್ಟ್ ಇಂಡೀಸ್ ಪರ ಒಟ್ಟು 19 ಟೆಸ್ಟ್ ಪಂದ್ಯಗಳನ್ನಾಡಿರುವ ಮುರ್ರೆ 601 ರನ್ ಬಾರಿಸಿದ್ದಾರೆ. ಅದೇ ವೇಳೆ ವಿಕೆಟ್​ ಕೀಪಿಂಗ್​ನಲ್ಲಿ 57 ಕ್ಯಾಚ್‌ ಮತ್ತು ಸ್ಟಂಪಿಂಗ್ ಮೂಲಕ 5 ವಿಕೆಟ್ ಕೂಡ ಉರುಳಿಸಿದ್ದಾರೆ. ಇದಲ್ಲದೇ 10 ಏಕದಿನ ಪಂದ್ಯಗಳಲ್ಲಿ ಕೇವಲ 45 ರನ್ ಗಳಿಸಿ 16 ಕ್ಯಾಚ್ ಪಡೆದಿದ್ದಾರೆ.

Published On - 8:57 am, Sun, 27 November 22

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್