ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ನಲ್ಲಿ ಸೋತ ಬಳಿಕ ಭಾರತ ಕ್ರಿಕೆಟ್ ತಂಡ ಇದೀಗ ನ್ಯೂಜಿಲೆಂಡ್ (India vs New Zealand) ಪ್ರವಾಸದಲ್ಲಿದೆ. ಮೂರು ಪಂದ್ಯಗಳ ಟಿ20 ಸರಣಿ ಆಡುತ್ತಿದ್ದು, ಇಂದು ಅಂತಿಮ ಕದನ ನಡೆಯುತ್ತಿದೆ. ಮೊದಲ ಪಂದ್ಯ ಮಳೆಗೆ ಆಹುತಿಯಾದರೆ, ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 65 ರನ್ಗಳ ಭರ್ಜರಿ ಗೆಲುವು ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿತ್ತು. ಇದೀಗ ಮೂರನೇ ಟಿ20 ಪಂದ್ಯದ ಮೇಲೆ ಎಲ್ಲರ ಕಣ್ಣಿದೆ. ಉಭಯ ತಂಡಗಳು ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ. ಇದಕ್ಕೂ ಮುನ್ನ ಟಿವಿ9 ಕನ್ನಡ ಡಿಜಿಟಲ್ ಸಾಮಾಜಿಕ ಜಾಲತಾಣಗಳಲ್ಲಿ ಇಂದಿನ ತೃತೀಯ ಟಿ20 ಪಂದ್ಯಕ್ಕೆ ಸಂಜು ಸ್ಯಾಮ್ಸನ್ (Sanju Samson) ಅಥವಾ ಶುಭ್ಮನ್ ಗಿಲ್ (Shubhman Gill) ಪೈಕಿ ಯಾರಿಗೆ ಅವಕಾಶ ನೀಡಬೇಕು ಎಂಬ ಪ್ರಶ್ನೆಯನ್ನಿಟ್ಟಿತ್ತು. ಇದಕ್ಕೆ ಸಾವಿರಾರೂ ಜನ ಕಮೆಂಟ್ ಮಾಡಿದ್ದಾರೆ.
ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಸಮೀಕ್ಷೆಯಲ್ಲಿ ಅನೇಕ ಜನರು ಸೋಶಿಯಲ್ ಮೀಡಿಯಾದ ಮೂಲಕ ಭಾಗವಹಿಸಿದರು. ಹೆಚ್ಚಿನ ಜನರು ಸಂಜು ಸ್ಯಾಮ್ಸನ್ ಅವರನ್ನು ಆಡಿಸಬೇಕು ಎಂದಿದ್ದಾರೆ ಹಾಗೂ ಒಂದಿಷ್ಟು ಜನ ಶುಭ್ಮನ್ ಗಿಲ್ ಬೇಡ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾಗವಹಿಸಿದ ಮಹಿಳೆಯರು ಮತ್ತು ಪುರುಷರು
ಸಾಮಾಜಿಕ ಜಾಲತಾಣಗಳು | ಸಂಜು ಸ್ಯಾಮ್ಸನ್ | ಶುಭ್ಮನ್ ಗಿಲ್ |
ಫೇಸ್ಬುಕ್ : | ಪುರುಷರು – 95 ಶೇಕಡಾ
ಮಹಿಳೆಯರು -2ಶೇಕಡಾ |
ಪುರುಷರು– 2ಶೇಕಡಾ
ಮಹಿಳೆಯರು -1ಶೇಕಡಾ |
ಇನ್ಸ್ಟಾಗ್ರಾಮ್ | ಪುರುಷರು – 80 ಶೇಕಡಾ
ಮಹಿಳೆಯರು -10 ಶೇಕಡಾ |
ಪುರುಷರು– 7 ಶೇಕಡಾ
ಮಹಿಳೆಯರು -3 ಶೇಕಡಾ |
ಟ್ವಿಟರ್ : | ಪುರುಷರು– 70 ಶೇಕಡಾ
ಮಹಿಳೆಯರು -30 ಶೇಕಡಾ |
ಪುರುಷರು–
ಮಹಿಳೆಯರು – |
ಯೂಟ್ಯಬ್ | ಪುರುಷರು– 73 ಶೇಕಡಾ
ಮಹಿಳೆಯರು -10 ಶೇಕಡಾ |
ಪುರುಷರು– 10 ಶೇಕಡಾ
ಮಹಿಳೆಯರು -7 ಶೇಕಡಾ |
ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ: