ಟಿ20 ವಿಶ್ವಕಪ್‌ಗೆ (T20 World Cup) ಈಗಾಗಲೇ ಟೀಂ ಇಂಡಿಯಾ (Indian cricket team) ಪ್ರಕಟಗೊಂಡಿದೆ. ಆದರೆ ಆಯ್ಕೆಯಾದ ತಂಡದಲ್ಲಿ ಈ ಒಬ್ಬ ಆಟಗಾರನಿರಬೇಕಿತ್ತು ಎಂಬುದು ಎಲ್ಲಾ ಕ್ರಿಕೆಟ್ ಪಂಡಿತರ ವಾದವಾಗಿದೆ. ತಂಡದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಮತ್ತೆ ನಿರ್ಲಕ್ಷಿಸಿರುವುದಕ್ಕೆ ಟೀಂ ಇಂಡಿಯಾ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಆದರೆ ಸ್ಯಾಮ್ಸನ್‌ಗೆ ಟೀಂ ಇಂಡಿಯಾದ ಟಿ20 ವಿಶ್ವಕಪ್ ತಂಡದಲ್ಲಿ ಮತ್ತೆ ಅವಕಾಶ ಸಿಗದೇ ಇರಬಹುದು. ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸಂಜುಗೆ ಹೊಸ ಜವಬ್ದಾರಿವಹಿಸಿದ್ದು, ಅವರನ್ನು ಭಾರತ ಎ ತಂಡದ ನಾಯಕನನ್ನಾಗಿ ನೇಮಿಸಿದೆ. ಹೀಗಾಗಿ ಸ್ಯಾಮ್ಸನ್ ಶೀಘ್ರದಲ್ಲೇ ನ್ಯೂಜಿಲೆಂಡ್ ಎ ವಿರುದ್ಧದ ಏಕದಿನ ಸರಣಿಗೆ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಕೆಲವು ದಿನಗಳ ಹಿಂದೆ ನ್ಯೂಜಿಲೆಂಡ್ ಎ ತಂಡವು ಭಾರತಕ್ಕೆ ಬಂದಿದ್ದು, ಇತ್ತೀಚೆಗೆ ಭಾರತ ಎ ಜೊತೆಗಿನ ಮೂರು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯು ಕೊನೆಗೊಂಡಿದೆ. ಸರಣಿಯ ಮೂರೂ ಪಂದ್ಯಗಳು ಡ್ರಾ ಆಗಿದ್ದವು. ಇದೀಗ ಏಕದಿನ ಸರಣಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿದ್ದು, ಇದಕ್ಕಾಗಿ ಸ್ಯಾಮ್ಸನ್‌ಗೆ ಭಾರತ ತಂಡದ ನಾಯಕತ್ವ ನೀಡಲಾಗಿದೆ. ಈ ಮೂಲಕ ಸ್ಯಾಮ್ಸನ್‌ಗೆ ದೊಡ್ಡ ಜವಾಬ್ದಾರಿ ನೀಡಿರುವ ಆಯ್ಕೆದಾರರು ಮುಂದಿನ ದಿನಗಳಲ್ಲಿ ಸಂಜುಗೆ ಟೀಂ ಇಂಡಿಯಾ ಕದ ತೆರೆಯುವ ಸೂಚನೆ ನೀಡಿದ್ದಾರೆ.
NEWS – India “A” squad for one-day series against New Zealand “A” announced.
Sanju Samson to lead the team for the same.
More details here ??https://t.co/x2q04UrFlY
— BCCI (@BCCI) September 16, 2022
ಪೃಥ್ವಿ ಶಾಗೂ ಅವಕಾಶ
ಸಂಜು ಸ್ಯಾಮ್ಸನ್ ಮಾತ್ರವಲ್ಲದೆ, ಕಳೆದ ಒಂದು ವರ್ಷದಿಂದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ಪೃಥ್ವಿ ಶಾಗೆ ಆಯ್ಕೆಗಾರರು ಅವಕಾಶ ನೀಡಿದ್ದಾರೆ. ಶಾ ಅವರನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಆಯ್ಕೆದಾರರು ಮತ್ತು ಮಂಡಳಿಯ ಮೇಲೂ ಪ್ರಶ್ನೆಗಳು ಉದ್ಭವಿಸಿದವು. ಟೆಸ್ಟ್ ಸರಣಿಯಲ್ಲೂ ಶಾ ಆಯ್ಕೆಯಾಗಿರಲಿಲ್ಲ. ಆದಾಗ್ಯೂ, ಪೃಥ್ವಿ ಪ್ರಸ್ತುತ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯ ಪರ ಆಡುತ್ತಿದ್ದು, ಅಮೋಘ ಶತಕವನ್ನು ಬಾರಿಸಿದ್ದಾರೆ. ಈ ಮೂರು ಪಂದ್ಯಗಳ ಸರಣಿಯು ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗಲಿದ್ದು, ಎಲ್ಲಾ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ.
ಇವರಲ್ಲದೆ, ಹಿರಿಯ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಈ ತಂಡಕ್ಕೆ ಸೇರ್ಪಡೆಗೊಂಡರೆ, ಈ ವರ್ಷ ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ ಮತ್ತು ಪ್ರತಿ ಫಾರ್ಮಾಟ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಹೈದರಾಬಾದ್‌ನ ಯುವ ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರಿಗೂ ಅವಕಾಶ ನೀಡಲಾಗಿದೆ. ಈ ವರ್ಷದ ಆರಂಭದಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ನ ಫೈನಲ್‌ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್‌ನಿಂದ ಪ್ರದರ್ಶನ ನೀಡಿದ ರಾಜ್ ಅಂಗದ್ ಬಾವಾ ಮೊದಲ ಬಾರಿಗೆ ಭಾರತ ಎ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ.
ಭಾರತ ಎ ತಂಡ
ಸಂಜು ಸ್ಯಾಮ್ಸನ್ (ನಾಯಕ), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಕೆಎಸ್ ಭರತ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಶಹಬಾಜ್ ಅಹ್ಮದ್, ರಾಹುಲ್ ಚಾಹರ್, ತಿಲಕ್ ವರ್ಮಾ, ಕುಲದೀಪ್ ಸೇನ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ನವದೀಪ್ ಸೈನಿ ಮತ್ತು ರಾಜ್ ಬಾವಾ.
Published On - 3:53 pm, Fri, 16 September 22