IPL: ಐಪಿಎಲ್​ನಲ್ಲಿ 41 ಸಾವಿರ ಕೋಟಿ ಹೂಡಿಕೆ ಮಾಡಲು ಮುಂದಾದ ಸೌದಿ ದೊರೆ..!

IPL: ವಿಶ್ವದ ಅತ್ಯಂತ ಶ್ರೀಮಂತ ಟಿ20 ಲೀಗ್​ ಐಪಿಎಲ್​ನಲ್ಲಿ 5 ಬಿಲಿಯನ್ ಡಾಲರ್ ಅಂದರೆ ಸುಮಾರು 41 ಸಾವಿರ ಕೋಟಿ ರೂಗಳನ್ನು ಹೂಡಿಕೆ ಮಾಡಲು ಸೌದಿ ಅರೇಬಿಯಾ ಮುಂದಾಗಿದೆ ಎಂದು ವರದಿಯಾಗಿದೆ. ಗಾಲ್ಫ್ ಮತ್ತು ಫುಟ್‌ಬಾಲ್ ಲೋಕದಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿರುವ ಸೌದಿ ಇದೀಗ ಐಪಿಎಲ್‌ನಲ್ಲೂ ತನ್ನ ಪಾರುಪತ್ಯ ಸಾಧಿಸಲು ಮುಂದಾಗಿದೆ.

IPL: ಐಪಿಎಲ್​ನಲ್ಲಿ 41 ಸಾವಿರ ಕೋಟಿ ಹೂಡಿಕೆ ಮಾಡಲು ಮುಂದಾದ ಸೌದಿ ದೊರೆ..!
ಐಪಿಎಲ್​ನಲ್ಲಿ ಹೂಡಿಕೆ ಮಾಡಲು ಮುಂದಾದ ಸೌದಿ ದೊರೆ
Follow us
ಪೃಥ್ವಿಶಂಕರ
|

Updated on:Nov 04, 2023 | 9:08 AM

ವಿಶ್ವದ ಅತ್ಯಂತ ಶ್ರೀಮಂತ ಟಿ20 ಲೀಗ್​ ಐಪಿಎಲ್​ನಲ್ಲಿ (IPL) 5 ಬಿಲಿಯನ್ ಡಾಲರ್ ಅಂದರೆ ಸುಮಾರು 41 ಸಾವಿರ ಕೋಟಿ ರೂಗಳನ್ನು ಹೂಡಿಕೆ ಮಾಡಲು ಸೌದಿ ಅರೇಬಿಯಾ (Saudi Arabia) ಮುಂದಾಗಿದೆ ಎಂದು ವರದಿಯಾಗಿದೆ. ಗಾಲ್ಫ್ ಮತ್ತು ಫುಟ್‌ಬಾಲ್ ಲೋಕದಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿರುವ ಸೌದಿ ಇದೀಗ ಐಪಿಎಲ್‌ನಲ್ಲೂ ತನ್ನ ಪಾರುಪತ್ಯ ಸಾಧಿಸಲು ಮುಂದಾಗಿದೆ. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (Crown Prince Mohammed Bin Salman) ಐಪಿಎಲ್ ಅನ್ನು 30 ಬಿಲಿಯನ್ ಡಾಲರ್ ಅಂದರೆ ಸುಮಾರು 2.5 ಲಕ್ಷ ಕೋಟಿ ಮೌಲ್ಯದ ಹಿಡುವಳಿ ಕಂಪನಿಯಾಗಿ ಪರಿವರ್ತಿಸಲು ಬಯಸಿದ್ದು, ಈ ಬಗ್ಗೆ ಬಿನ್ ಸಲ್ಮಾನ್ ಅವರ ಸಲಹೆಗಾರರು ಭಾರತ ಸರ್ಕಾರದ ಕೆಲವು ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

41 ಸಾವಿರ ಕೋಟಿ ರೂ. ಹೂಡಿಕೆ

ಕ್ರೌನ್ ಪ್ರಿನ್ಸ್ ಸಲ್ಮಾನ್ ಐಪಿಎಲ್‌ನಲ್ಲಿ 5 ಬಿಲಿಯನ್ ಡಾಲರ್ (ಸುಮಾರು 41 ಸಾವಿರ ಕೋಟಿ ರೂಪಾಯಿ) ಹೂಡಿಕೆ ಮಾಡಲು ಬಯಸಿದ್ದು, ಲೀಗ್ ಅನ್ನು ದೇಶೀಯ ಕ್ರಿಕೆಟ್‌ಗೆ ಬದಲಾಗಿ ಜಾಗತಿಕ ಕ್ರಿಕೆಟ್ ಲೀಗ್ ಆಗಿ ಪರಿವರ್ತಿಸಲು ಬಯಸಿದ್ದಾರೆ. ವಾಸ್ತವವಾಗಿ ಐಪಿಎಲ್, ವಿಶ್ವದ ಅತಿದೊಡ್ಡ ಕ್ರೀಡಾ ಲೀಗ್‌ಗಳಲ್ಲಿ ಒಂದಾಗಿದ್ದು, ಏಕೈಕ ಐಪಿಎಲ್ ಪಂದ್ಯದಿಂದ ಬಿಸಿಸಿಐ ಖಜಾನೆಗೆ ಸುಮಾರು 118 ಕೋಟಿ ರೂ. ಆದಾಯ ಹರಿದುಬರುತ್ತಿದೆ. ಈ ಆದಾಯದ ಹರಿವೆ ಸೌದಿ ದೊರೆಯನ್ನು ಐಪಿಎಲ್​ನತ್ತ ಬರುವಂತೆ ಮಾಡಿದೆ ಎಂದು ವರದಿಯಾಗಿದೆ.

IPL 2024: ದುಬೈನಲ್ಲಿ ನಡೆಯಲ್ಲಿದೆ 2024 ರ ಐಪಿಎಲ್​ ಹರಾಜು; ಯಾವ ದಿನದಂದು ಗೊತ್ತಾ?

ಇತರೆ ಕ್ರೀಡೆಗಳಲ್ಲಿ ಸೌದಿ ಅಧಿಪತ್ಯ

ಸೌದಿ ಅರೇಬಿಯಾ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಫುಟ್‌ಬಾಲ್‌ನಲ್ಲಿಯೂ ಹೂಡಿಕೆ ಮಾಡುತ್ತಿದೆ. ಇದಲ್ಲದೆ ಸೌದಿ ಅರೇಬಿಯಾ ವಿಶ್ವದ ಪ್ರಮುಖ ಲೀಗ್‌ಗಳಲ್ಲಿಯೂ ಹೂಡಿಕೆ ಮಾಡುತ್ತಿದೆ. ಇದರಲ್ಲಿ ಸೌದಿ ಫುಟ್ಬಾಲ್ ಪ್ರೊ ಲೀಗ್ ಸಹ ಒಳಗೊಂಡಿದೆ. ಈ ಲೀಗ್​ನಲ್ಲಿ ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೋ ರೊನಾಲ್ಡೊ ಕೂಡ ಆಡುತ್ತಾರೆ. ಜೊತೆಗೆ, ಕಳೆದ ಎರಡು ವರ್ಷಗಳಲ್ಲಿ ಸೌದಿ, ಈ ಲೀಗ್​ನಲ್ಲಿ ಭಾರಿ ಹೂಡಿಕೆಗಳನ್ನು ಮಾಡಿದ್ದು, ಇದರ ಫಲವಾಗಿ ಪ್ರಪಂಚದ ಖ್ಯಾತ ಯುರೋಪಿಯನ್ ಫುಟ್‌ಬಾಲ್ ಆಟಗಾರರು ಈ ಲೀಗ್​ನಲ್ಲಿ ಆಡುತ್ತಿದ್ದಾರೆ. ಅಲ್ಲದೆ ಈ ಲೀಗ್​ನಲ್ಲಿ ಆಡುವ ಸಲುವಾಗಿ ಹಲವು ಆಟಗಾರರು ರಾಷ್ಟ್ರೀಯ ತಂಡದಿಂದಲೂ ನಿವೃತ್ತಿಯನ್ನೂ ಪಡೆದಿದ್ದಾರೆ. ಹಾಗೆಯೇ ಈ ವರ್ಷ ಸೌದಿ ಅರೇಬಿಯಾ 2036 ರ ಫಿಫಾ ವಿಶ್ವಕಪ್‌ಗೆ ಬಿಡ್ ಸಹ ಸಲ್ಲಿಸುತ್ತಿದೆ.

ಡಿ. 19 ರಂದು ಐಪಿಎಲ್ ಮಿನಿ ಹರಾಜು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಈಗಾಗಲೇ 16 ಸೀಸನ್​ಗಳನ್ನು ಕಂಡಿದೆ. 17ನೇ ಸೀಸನ್ ಮುಂದಿನ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದೆ. ಇದಕ್ಕಾಗಿ ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಎಲ್ಲಾ 10 ತಂಡಗಳಿಗೂ ಹರಾಜಿಗೂ ಮೊದಲು ಆಟಗಾರರ ಧಾರಣೆಗಾಗಿ ನವೆಂಬರ್ 26ರವರೆಗೆ ಗಡುವು ನೀಡಲಾಗಿದೆ. ಅಲ್ಲದೆ ಈ ಭಾರಿ ಪರ್ಸ್​ ಗಾತ್ರವನ್ನು ಹೆಚ್ಚಿಸಲಾಗಿದ್ದು, ಪ್ರತಿ ತಂಡಗಳಿಗೆ 95 ಕೋಟಿ ರೂ. ಬದಲಾಗಿ 100 ಕೋಟಿ ರೂಗಳನ್ನು ನೀಡಲಾಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:03 am, Sat, 4 November 23

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್