Oman vs Scotland: ಸ್ಕಾಟ್ಲೆಂಡ್ ಮಿಂಚಿನ ಪ್ರದರ್ಶನ: ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್ 12ಗೆ ಲಗ್ಗೆ

T20 World Cup 2021: ಅಕ್ಟೋಬರ್‌ 23ರಂದು ಶುರುವಾಗಲಿರುವ ಸೂಪರ್‌ 12 ಹಂತದಲ್ಲಿ ಸ್ಕಾಟ್ಲೆಂಡ್‌ ತಂಡ ಬಲಿಷ್ಠ ಟೀಮ್ ಇಂಡಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ಎದುರು ಪೈಪೋಟಿ ನಡೆಸಲಿದೆ.

Oman vs Scotland: ಸ್ಕಾಟ್ಲೆಂಡ್ ಮಿಂಚಿನ ಪ್ರದರ್ಶನ: ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್ 12ಗೆ ಲಗ್ಗೆ
Scotland Cricket Team
Follow us
TV9 Web
| Updated By: Vinay Bhat

Updated on:Oct 22, 2021 | 7:25 AM

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup) ಗುರುವಾರ ‘ಬಿ’ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಒಮನ್ ವಿರುದ್ಧ ಸ್ಕಾಟ್ಲೆಂಡ್ (Oman vs Scotland) ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿ ಸೂಪರ್ 12 (Super 12) ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ನಾಯಕ ಕೈಲ್‌ ಕೊಟ್ಜರ್‌ (41) ಅವರ ಬಿರುಸಿನ ಬ್ಯಾಟಿಂಗ್ ಮತ್ತು ಸಂಘಟಿತ ಬೌಲಿಂಗ್‌ ದಾಳಿಯ ಬಲದಿಂದ ಮಿಂಚಿದ ಸ್ಕಾಟ್ಲೆಂಡ್‌ ತಂಡ, ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಒಮಾನ್‌ ತಂಡವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದು ಸೂಪರ್-12 ಹಂತದಲ್ಲಿ ಭಾರತ (Team India) ಇರುವ ‘ಗ್ರೂಪ್ 2’ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಅಕ್ಟೋಬರ್‌ 23ರಂದು ಶುರುವಾಗಲಿರುವ ಸೂಪರ್‌ 12 ಹಂತದಲ್ಲಿ ಸ್ಕಾಟ್ಲೆಂಡ್‌ ತಂಡ ಬಲಿಷ್ಠ ಟೀಮ್ ಇಂಡಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ಎದುರು ಪೈಪೋಟಿ ನಡೆಸಲಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಒಮನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಒಮನ್ 20 ಓವರ್‌ಗಳಲ್ಲಿ 122 ರನ್‌ಗಳಿಗೆ ಆಲ್ ಔಟ್ ಆಯಿತು. ಒಮನ್ ಪರ ಆಕೀಬ್ ಇಲಿಯಾಸ್, ಮೊಹಮ್ಮದ್ ನದೀಮ್ ಮತ್ತು ನಾಯಕ ಜೀಶನ್ ಮಕ್ಸೂದ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಕೂಡ ಎರಡಂಕಿ ಮುಟ್ಟುವ ಪ್ರಯತ್ನವನ್ನು ಮಾಡಲಿಲ್ಲ. ಪರಿಣಾಮ ಒಮನ್ ಬ್ಯಾಟಿಂಗ್‌ನಲ್ಲಿ ದೊಡ್ಡ ಮಟ್ಟದಲ್ಲಿ ವಿಫಲತೆಯನ್ನು ಹೊಂದಿತು. ಸ್ಕಾಟ್ಲೆಂಡ್ ಪರ ಡೇವಿ 3, ಶಫ್ಯಾನ್ ಶರೀಫ್ 2, ಲೀಸ್ಕ್ 2 ಮತ್ತು ಮಾರ್ಕ್ ವ್ಯಾಟ್ 1 ವಿಕೆಟ್ ಪಡೆದು ಮಿಂಚಿದರು.

ಒಮನ್ ನೀಡಿದ 123 ರನ್‌ಗಳ ಗುರಿಯನ್ನು ಬೆನ್ನತ್ತಿದ ಸ್ಕಾಟ್ಲೆಂಡ್ ಜಾಗರೂಕತೆಯಿಂದ ಆಟವನ್ನಾಡಿ 17 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಸ್ಕಾಟ್ಲೆಂಡ್ ಪರ ನಾಯಕ ಕೈಲ್ ಕೋಜರ್ (41), ಜಾರ್ಜ್ ಮುನ್ಸೆ (20), ಮ್ಯಾಥ್ಯೂ ಕ್ರಾಸ್ (26*) ಹಾಗೂ ರಿಚರ್ಡ್ ಬ್ಯಾರಿಂಗ್ಟನ್ (31*) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅತ್ತ ಸತತ ಎರಡನೇ ಸೋಲಿನ ಆಘಾತಕ್ಕೆ ಒಳಗಾಗಿರುವ ಒಮನ್ ಟೂರ್ನಿಯಿಂದಲೇ ನಿರ್ಗಮಿಸಿದೆ.

ಸೂಪರ್ 12 ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿರುವ ಸ್ಕಾಟ್ಲೆಂಡ್ ಆ ಸುತ್ತಿನ ತನ್ನ ಮೊದಲನೇ ಪಂದ್ಯವನ್ನು ಅಕ್ಟೋಬರ್ 25ರ ಸೋಮವಾರದಂದು ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ.

ಸೂಪರ್‌ 12 ಹಂತಕ್ಕೆ ಬಾಂಗ್ಲಾದೇಶ

ಇನ್ನು ಸ್ಟಾರ್‌ ಆಲ್ರೌಂಡರ್ ಶಕಿಬ್ ಅಲ್‌ ಹಸನ್‌ ಅವರ ಮಿಂಚಿನ ಪ್ರದರ್ಶನದ ಬಲದಿಂದ ಅಬ್ಬರಿಸಿದ ಬಾಂಗ್ಲಾದೇಶ ತಂಡ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸೂಪರ್‌ 12 ಹಂತಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ಎದುರು ಅಚ್ಚರಿಯ ಸೋಲುಂಡು ಆಘಾತಕ್ಕೊಳಗಾಗಿದ್ದ ಬಾಂಗ್ಲಾದೇಶ ಬಳಿಕ ಬ್ಯಾಕ್‌ ಟು ಬ್ಯಾಕ್‌ ಭರ್ಜರಿ ಪ್ರದರ್ಶನಗಳ ಬಲದಿಂದ ಒಮಾನ್‌ ಮತ್ತು ಪಪುವಾ ನ್ಯೂ ಗಿನಿ ತಂಡಗಳನ್ನು ಮಣಿಸಿ ಸೂಪರ್‌ 12 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.

T20 World Cup 2021: ಲೀಗ್ ಹಂತದಲ್ಲಿ ಟೀಮ್ ಇಂಡಿಯಾಗೆ 5 ಪಂದ್ಯ: ಹೀಗಿದೆ ವೇಳಾಪಟ್ಟಿ

IPL 2022: ಹೊಸ ಐಪಿಎಲ್ ತಂಡ ಖರೀದಿಗೆ ಮುಂದಾದ ಜನಪ್ರಿಯ ಫುಟ್​ಬಾಲ್ ಕ್ಲಬ್

(Scotland crushed Oman by 8 wickets and qualify for the T20 World Cup Super 12 stage)

Published On - 7:23 am, Fri, 22 October 21

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು