India vs Pakistan: ಭಾರತ-ಪಾಕಿಸ್ತಾನ ನಡುವಣ ಫೈಟ್ನಲ್ಲಿ ಅಬ್ಬರಿಸಿದ ಬ್ಯಾಟರ್ಗಳು ಯಾರು ಗೊತ್ತಾ?: ಇಲ್ಲಿದೆ ನೋಡಿ
T20 World Cup 2021: ಭಾರತ- ಪಾಕಿಸ್ತಾನ ಪಂದ್ಯ ಅಂದಮೇಲೆ ಅಲ್ಲೊಂದು ಬಿಗ್ ಫೈಟ್ ಇದ್ದೇ ಇರುತ್ತದೆ. ಉಭಯ ತಂಡಗಳ ಹಿಂದಿನ ಕದನದಲ್ಲೂ ಇದನ್ನು ನೋಡಿದ್ದೇವೆ. ಹಾಗಾದ್ರೆ ಇಂಡೋ-ಪಾಕ್ ಟಿ20 ಕದನದಲ್ಲಿ ಈವರೆಗೆ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಯಾರು ಎಂಬುದನ್ನು ನೋಡುವುದಾದರೆ
ಟಿ20 ವಿಶ್ವಕಪ್ ಮಹಾಸಮರದಲ್ಲಿ (T20 World Cup) ಅಭಿಯಾನವನ್ನು ಆರಂಭಿಸಲು ಭಾರತಕ್ಕೆ (Team India) ಇನ್ನೇನು ಎರಡು ದಿನವಷ್ಟೆ ಬಾಕಿಯಿದೆ. ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (India vs Pakistan) ವಿರುದ್ಧ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ (Virat Kohli) ಪಡೆ ಅಬ್ಬರಿಸಲು ತಯಾರಾಗಿದೆ. ಈಗಾಗಲೇ ಆಡಿದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಟೀಮ್ ಇಂಡಿಯಾವೇ ಗೆಲ್ಲುವ ಫೆವರಿಟ್ ಎನಿಸಿಕೊಂಡಿದೆ. ಭಾರತ- ಪಾಕಿಸ್ತಾನ (Ind vs Pak) ಪಂದ್ಯ ಅಂದಮೇಲೆ ಅಲ್ಲೊಂದು ಬಿಗ್ ಫೈಟ್ ಇದ್ದೇ ಇರುತ್ತದೆ. ಉಭಯ ತಂಡಗಳ ಹಿಂದಿನ ಕದನದಲ್ಲೂ ಇದನ್ನು ನೋಡಿದ್ದೇವೆ. ಹಾಗಾದ್ರೆ ಇಂಡೋ-ಪಾಕ್ ಟಿ20 ಕದನದಲ್ಲಿ ಈವರೆಗೆ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಯಾರು ಎಂಬುದನ್ನು ನೋಡುವುದಾದರೆ…
ವಿರಾಟ್ ಕೊಹ್ಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕ್ ವಿರುದ್ಧ ಒಟ್ಟು 6 ಟಿ20 ಪಂದ್ಯಗಳನ್ನು ಆಡಿದ್ದು 254 ರನ್ ಚಚ್ಚಿದ್ದಾರೆ. 84.66 ಸರಾಸರಿ ಹೊಂದಿದ್ದು ಎರಡು ಅರ್ಧಶತಕ ಕೂಡ ಸಿಡಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಇವರ ಸ್ಟ್ರೈಕ್ರೇಟ್ 118.69 ಆಗಿದೆ. ಅಲ್ಲದೆ ಪಾಕ್ ವಿರುದ್ಧ ಟಿ20 ಪಂದ್ಯದಲ್ಲಿ ಕೊಹ್ಲಿ ಅವರು ಇದೇ ಮೊದಲ ಬಾರಿಗೆ ನಾಯಕನಾಗಿ ಮುನ್ನಡೆಸುತ್ತಿದ್ದಾರೆ.
ಶೊಯೇಬ್ ಮಲಿಕ್: ಪಾಕ್ ತಂಡದ ಮಾಜಿ ನಾಯಕ ಶೊಯೇಬ್ ಮಲಿಕ್ ಎರಡನೇ ಸ್ಥಾನದಲ್ಲಿದ್ದು, ಇವರು ಎಂಟು ಪಂದ್ಯಗಳಿಂದ 164 ರನ್ ಗಳಿಸಿದ್ದಾರೆ. ಸ್ಟ್ರೈಕ್ರೇಟ್ ಕೇವಲ 103.79 ಹೊಂದಿದ್ದಾರಷ್ಟೆ. ಒಂದು ಅರ್ಧಶತಕ ಗಳಿಸಿದ್ದಾರೆ.
ಮೊಹಮ್ಮದ್ ಹಫೀಜ್: ಪಾಕಿಸ್ತಾನ ತಂಡದ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಭಾರತ ವಿರುದ್ಧ ಏಳು ಟಿ20 ಪಂದ್ಯಗಳನ್ನು ಆಡಿದ್ದು 156 ರನ್ ಬಾರಿಸಿದ್ದಾರೆ. 118.18 ಸ್ಕ್ರೈಕ್ರೇಟ್ನೊಂದಿಗೆ ಬ್ಯಾಟ್ ಬೀಸಿದ್ದು, ಎರಡು ಅರ್ಧಶತಕ ಸಿಡಿಸಿದ್ದಾರೆ. ಸದ್ಯ ಇವರು ಭರ್ಜರಿ ಫಾರ್ಮ್ನಲ್ಲಿದ್ದು, ಸಾಕಷ್ಟು ನಿರೀಕ್ಷೆಗಳಿವೆ.
ಯುವರಾಜ್ ಸಿಂಗ್: ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಪಾಕ್ ವಿರುದ್ಧ ಆಡಿದ 8 ಟಿ20 ಪಂದ್ಯಗಳಲ್ಲಿ 155 ರನ್ ಕಲೆಹಾಕಿದ್ದಾರೆ. 72 ರನ್ ಗರಿಷ್ಠ ಸ್ಕೋರ್ ಆಗಿದೆ.
ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಟಿ20 ಕ್ರಿಕೆಟ್‌ನಲ್ಲಿ ಈವರೆಗೆ ಒಟ್ಟು 8 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಭಾರತ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಒಂದು ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಈವರೆಗೆ 5 ಬಾರಿ ಮುಖಾಮುಖಿಯಾಗಿದ್ದು ಭಾರತ 4ರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ. ಹೀಗೆ ಬಾರತ ಟಿ20 ವಿಶ್ವಕಪ್‌ನಲ್ಲಿಯೂ ಅಜೇಯ ಸಾಧನೆ ಮಾಡಿದೆ.
ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳು ಈವರೆಗೆ ಒಟ್ಟಾರೆಯಾಗಿ 199 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಪಾಕಿಸ್ತಾನ 86 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಭಾರತ 70 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಟ್ಟಾರೆಯಾಗಿ ಪಾಕಿಸ್ತಾನದ ಕೈ ಮೇಲಿದೆ. ಆದರೆ ಇತ್ತೀಚಿನ ದಶಕದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಭಾರೀ ಮೇಲುಗೈ ಸಾಧಿಸಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 192/5 ರನ್‌ಗಳಿಸಿರುವುದು ಈವರೆಗಿನ ಅತ್ಯಂತ ಹೆಚ್ಚಿನ ಸ್ಕೋರ್ ಆಗಿದೆ. 2012ರಲ್ಲಿ ಪಾಕಿಸ್ತಾನದ ವಿರುದ್ಧ ಅಹ್ಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಈ ರನ್ ಗಳಿಸಿತ್ತು.
Kane Williamson: ಟಿ20 ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸುವ ಮುನ್ನವೇ ನ್ಯೂಜಿಲೆಂಡ್ಗೆ ಬಿಗ್ ಶಾಕ್
Oman vs Scotland: ಸ್ಕಾಟ್ಲೆಂಡ್ ಮಿಂಚಿನ ಪ್ರದರ್ಶನ: ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್ 12ಗೆ ಲಗ್ಗೆ
(Virat Kohli has the most runs by a batsman between India vs Pakistan in T20Is Here is the all list )