NAM vs IRL: ಇಂದು ಅರ್ಹತಾ ಸುತ್ತಿನ ಕೊನೆಯ ಪಂದ್ಯ: ಐರ್ಲೆಂಡ್- ನಮೀಬಿಯಾಗೆ ಗೆಲುವೊಂದೇ ಮಾರ್ಗ
T20 World Cup: ಇಂದು ನಡೆಯಲಿರುವ ಮೊದಲ ಪಂದ್ಯ ರೋಚಕತೆ ಸೃಷ್ಟಿಸಿದೆ. ಐರ್ಲೆಂಡ್ ಮತ್ತು ನಮೀಬಿಯಾ ಉಭಯ ತಂಡಗಳು ಎರಡು ಪಂದ್ಯವನ್ನಾಡಿದ್ದು ಒಂದರಲ್ಲಿ ಗೆದ್ದಿದೆ. ಇಂದು ಜಯ ಸಾಧಿಸಿದ ತಂಡ ಸೂಪರ್ 12ಗೆ ಪ್ರವೇಶ ಪಡೆಯಲಿದೆ.
ಏಳನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ (2021 ICC Mens T20 World Cup) ಕಾವೇರುತ್ತಿದೆ. ಇಂದು ಸೂಪರ್ 12ಗೆ (Super 12) ಲಗ್ಗೆಯಿಡಲು ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಎರಡು ಮ್ಯಾಚ್ ನಡೆಯಲಿದೆ. ಕೂಟದ ಪ್ರಮುಖ ರೌಂಡ್ ಆಗಿರುವ ಸೂಪರ್-12 ಹಂತವನ್ನು ಪ್ರವೇಶಿಸಲಿರುವ 4 ತಂಡಗಳನ್ನು ನಿರ್ಧರಿಸುವ ಗ್ರೂಪ್ ಪಂದ್ಯಗಳ ಪೈಕಿ ಈಗಾಗಲೇ ಮೂರು ತಂಡ ಪ್ರವೇಶ ಪಡೆದಿದೆ.
ಶ್ರೀಲಂಕಾ, ಬಾಂಗ್ಲಾದೇಶ, ಸ್ಕಾಟ್ಲೆಂಡ್ ಸೂಪರ್ 12ಗೆ ಲಗ್ಗೆಯಿಟ್ಟಿದೆ. ಇನ್ನೊಂದು ಸ್ಥಾನಕ್ಕಾಗಿ ಇಂದು ಐರ್ಲೆಂಡ್ ಮತ್ತು ನಮೀಬಿಯಾ ತಂಡ ಕಾದಾಟ ನಡೆಸಲಿದೆ. ಮತ್ತೊಂದು ಪಂದ್ಯದಲ್ಲಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ನೆದರ್ಲೆಂಡ್ ತಂಡ ಶ್ರೀಲಂಕಾವನ್ನು ಎದುರಿಸಲಿದೆ.
ಇಂದು ನಡೆಯಲಿರುವ ಮೊದಲ ಪಂದ್ಯ ರೋಚಕತೆ ಸೃಷ್ಟಿಸಿದೆ. ಐರ್ಲೆಂಡ್ ಮತ್ತು ನಮೀಬಿಯಾ ಉಭಯ ತಂಡಗಳು ಎರಡು ಪಂದ್ಯವನ್ನಾಡಿದ್ದು ಒಂದರಲ್ಲಿ ಗೆದ್ದಿದೆ. ಇಂದು ಜಯ ಸಾಧಿಸಿದ ತಂಡ ಸೂಪರ್ 12ಗೆ ಪ್ರವೇಶ ಪಡೆಯಲಿದೆ.
ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿ ವಿಶ್ವಾಸದಲ್ಲಿರುವ ನಮಿಬಿಯಾ ತಂಡ ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದೆ. ಡೇವಿಡ್ ವೈಸ್ ಆಲ್ರೌಂಡರ್ ಪ್ರದರ್ಶನ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಕಳೆದ ಪಂದ್ಯದಲ್ಲಿ ಇವರು 40 ಎಸೆತಗಳಲ್ಲಿ 66 ರನ್ ಚಚ್ಚಿದ್ದರು. ನಾಯಕ ಗೆರ್ಹಾರ್ಡ್ ಎರಾಸ್ಮುಸ್ ಕೂಡ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇತ್ತ ಐರ್ಲೆಂಡ್ ಪರ ನಾಯಕ ಆಂಡ್ರೆ ಬಲ್ಬಿರ್ರಿನ್ಗೆ ಇತರೆ ಬ್ಯಾಟರ್ಗಳು ಸಾತ್ ನೀಡುತ್ತಿಲ್ಲ. ಪೌಲ್ ಸ್ಟಿರಿಲಿಂಗ್, ಕೆವಿನ್ ಬ್ರೈನ್ ಗ್ಯಾರೆಥ್ ಡೆಲಾನಿ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ.
ಇನ್ನು ಇಂದಿನ ಮತ್ತೊಂದು ಪಂದ್ಯ ಔಪಚಾರಿಕವಾಗಿದೆ. ಶ್ರೀಲಂಕಾ ಈಗಾಗಲೇ ಸೂಪರ್ 12ಗೆ ಲಗ್ಗೆಯಿಟ್ಟಿದ್ದರೆ, ನೆದರ್ಲೆಂಡ್ ಕೂಟದಿಂದ ಹೊರಬಿದ್ದಿದೆ.
T20 World cup: ಕೊಹ್ಲಿ, ರೋಹಿತ್ ಅಲ್ಲ: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಗೇಮ್ ಚೇಂಜರ್ಸ್ ಇವರೇ ನೋಡಿ
India vs Pakistan: ಭಾರತ-ಪಾಕಿಸ್ತಾನ ನಡುವಣ ಫೈಟ್ನಲ್ಲಿ ಅಬ್ಬರಿಸಿದ ಬ್ಯಾಟರ್ಗಳು ಯಾರು ಗೊತ್ತಾ?: ಇಲ್ಲಿದೆ ನೋಡಿ
(T20 World Cup With eye on Super 12s stage Ireland and Namibia clash in must-win game)