ಐಪಿಎಲ್ 2024 ರ ತಮ್ಮ ಮೊದಲ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತವರು ಮೈದಾನ ಈಡನ್ ಗಾರ್ಡನ್ಸ್‌ನಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತು. ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್ (Andre Russell) ಅವರು ಮನಬಂದಂತೆ ಬ್ಯಾಟ್ ಬೀಸಿದರು. ಕೇವಲ 25 ಎಸೆತಗಳಲ್ಲಿ 3 ಫೋರ್, 7 ಸಿಕ್ಸರ್ ಸಿಡಿಸಿ ಅಜೇಯ 64 ರನ್ ಚಚ್ಚಿದರು. ರಸೆಲ್ ಸಿಕ್ಸರ್‌ಗಳ ಸುರಿಮಳೆ ಕೋಲ್ಕತ್ತಾ ಅಭಿಮಾನಿಗಳನ್ನು ಸಂತೋಷಪಡಿಸಿದ್ದಲ್ಲದೆ, ತಂಡದ ಮಾಲೀಕ ಮತ್ತು ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರ ಹೃದಯವನ್ನೂ ಗೆದ್ದಿತು. ಆದರೆ ಇದೆಲ್ಲದರ ನಡುವೆ, ಶಾರುಖ್ ವಿವಾದದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಐಪಿಎಲ್ 2024 ಋತುವಿನಲ್ಲಿ ಕೋಲ್ಕತ್ತಾದ ಮೊದಲ ಪಂದ್ಯದಲ್ಲಿ ತಂಡವನ್ನು ಬೆಂಬಲಿಸಲು ಶಾರುಖ್ ಖಾನ್ ಕೂಡ ಮೈದಾನದಲ್ಲಿ ಹಾಜರಿದ್ದರು. ಶಾರುಖ್ ಅವರನ್ನು ನೋಡಿ ಅಭಿಮಾನಿಗಳು ಅವರ ಹೆಸರಿನಲ್ಲಿ ಘೋಷಣೆಗಳನ್ನು ಕೂಗಲು ಆರಂಭಿಸಿದರೆ, ಶಾರುಖ್ ಕೂಡ ಫ್ಯಾನ್ಸ್ ಮೇಲೆ ಪ್ರೀತಿಯ ಸುರಿಮಳೆಗೈದು ಕೈಕುಲುಕುತ್ತಲೇ ಫ್ಲೈಯಿಂಗ್ ಕಿಸ್ ನೀಡಿದರು. ಆದರೆ ಈ ಮಧ್ಯೆ ಅವರು ಸಿಗರೇಟ್ ಸೇದುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಿಷಭ್ ಪಂತ್ ಮಿಂಚಿನ ಸ್ಟಂಪಿಂಗ್ಗೆ ಬೆರಗಾದ ಕ್ರಿಕೆಟ್ ಜಗತ್ತು: ರೋಚಕ ವಿಡಿಯೋ ನೋಡಿ
Haters are so obsessed nd jealous with my SRK’s swag , aura nd ciggy 😎😴#ShahRukhKhan𓃵 pic.twitter.com/UlNSepqF4B
— Amreen (@Amreen_Srkian2) March 24, 2024
Wow what a scene king khan smoking cigarette 🚬
He is the ideal of many people. 🙌#ShahRukhKhan #IPL2024 #KKRvsSRH pic.twitter.com/UlUr40fg9a
— Shivam Tripathi¹ ✗ 💥 (@iamshivam222) March 23, 2024
#SRK full form = Smoke Rukh Khan 🚬
Youth Cough Idol LoL 😷#ShahRukhKhan #KKRvsSRH https://t.co/fp5h58YNN5
— M A 𝕏 A L U 🗡️ (@YourMasalu) March 23, 2024
ಧೂಮಪಾನ ಚಟದಿಂದ ಸದಾ ಸುದ್ದಿಯಲ್ಲಿರುವ ಶಾರುಖ್ ಖಾನ್ ಕ್ರಿಕೆಟ್ ಪಂದ್ಯದ ಮಧ್ಯೆ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲೂ ಹೀಗೆ ಮಾಡಿರುವುದು ಕೆಲ ನೆಟ್ಟಿಗರನ್ನು ಕೆರಳಿಸಿದೆ. ಕೋಲ್ಕತ್ತಾ ಇನ್ನಿಂಗ್ಸ್ ಸಮಯದಲ್ಲಿ, ಶಾರುಖ್ ಕ್ರೀಡಾಂಗಣದ ಕಾರ್ಪೊರೇಟ್ ಬಾಕ್ಸ್‌ನಲ್ಲಿ ಕುಳಿತು ಪಂದ್ಯವನ್ನು ಆನಂದಿಸುತ್ತಿದ್ದರು. ಈ ಸಮಯದಲ್ಲಿ ಅವರು ಸಿಗರೇಟ್ ಸೇದುವಾಗ ಕ್ಯಾಮೆರಾದ ಕಣ್ಣಿಗೆ ಬಿದ್ದರು.
ಮೂರು ಪಂದ್ಯಗಳು ಮುಕ್ತಾಯ: ಇಲ್ಲಿದೆ ನೋಡಿ ಐಪಿಎಲ್ 2024 ಪಾಯಿಂಟ್ಸ್ ಟೇಬಲ್
ಟಿವಿ ಪರದೆಯಲ್ಲಿ ಶಾರುಖ್ ಧೂಮಪಾನದ ವಿಡಿಯೋ ಕಾಣಿಸಿಕೊಂಡ ತಕ್ಷಣ, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇದಕ್ಕಾಗಿ ಅನೇಕ ಬಳಕೆದಾರರು ಶಾರುಖ್ ಅವರನ್ನು ದೂಷಿಸಿದ್ದು, ಇದು ಯುವಕರಿಗೆ ತಪ್ಪು ಸಂದೇಶ ಎಂದು ಹೇಳಿದ್ದಾರೆ.
ಶಾರುಖ್‌ಗೆ ಐಪಿಎಲ್‌ನಲ್ಲಿನ ವಿವಾದಗಳ ಜೊತೆಗೆ ಸುದೀರ್ಘ ಒಡನಾಟವಿದೆ. ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ. ಈ ಹಿಂದೆ 2012ರ ಸೀಸನ್‌ನಲ್ಲಿಯೂ ಅವರು ಸ್ಟೇಡಿಯಂನಲ್ಲಿ ಸಿಗರೇಟ್ ಸೇದುತ್ತಿದ್ದ ದೃಶ್ಯ ಕಂಡು ಬಂದಿತ್ತು. ಆಗ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಶಾರುಖ್ ಸಿಗರೇಟ್ ಸೇದಿದ್ದರು. ಈ ಸಂಬಂಧ ಜೈಪುರದ ಸ್ಥಳೀಯ ನ್ಯಾಯಾಲಯದಲ್ಲಿ ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಇದಲ್ಲದೇ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೈದಾನದ ಸಿಬ್ಬಂದಿಯ ಜತೆಗಿನ ಗಲಾಟೆಯಿಂದ ಹಲವು ವರ್ಷಗಳ ಕಾಲ ಕ್ರೀಡಾಂಗಣಕ್ಕೆ ಬರದಂತೆ ನಿರ್ಬಂಧ ಹೇರಲಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:46 am, Sun, 24 March 24