Breaking News: ಜಿಂಬಾಬ್ವೆ ವಿರುದ್ಧದ ಸರಣಿಗೆ ಸುಂದರ್ ಬದಲು ಆರ್​​ಸಿಬಿಯ ಸ್ಟಾರ್ ಆಟಗಾರ ಆಯ್ಕೆ

Shahbaz Ahmed, IND vs ZIM: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾಗಿದ್ದ ವಾಷಿಂಗ್ಟನ್ ಸುಂದರ್ ಗಾಯಕ್ಕೆ ತುತ್ತಾದ ಪರಿಣಾಮ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಬಿಸಿಸಿಐ ಇವರ ಜಾಗಕ್ಕೆ ಶಹ್ಬಾಜ್ ಅಹ್ಮದ್​ರನ್ನು ಆಯ್ಕೆ ಮಾಡಿದೆ.

Breaking News: ಜಿಂಬಾಬ್ವೆ ವಿರುದ್ಧದ ಸರಣಿಗೆ ಸುಂದರ್ ಬದಲು ಆರ್​​ಸಿಬಿಯ ಸ್ಟಾರ್ ಆಟಗಾರ ಆಯ್ಕೆ
Washington Sunder IND vs ZIM
Edited By:

Updated on: Aug 16, 2022 | 2:06 PM

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಆಗಸ್ಟ್ 18 ರಂದು ಹರಾರೆಯಲ್ಲಿ ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ. ಈಗಾಗಲೇ ಕೆಎಲ್ ರಾಹುಲ್ ನೇತೃತ್ವದ ಹಾಗೂ ವಿವಿಎಸ್ ಲಕ್ಷ್ಮಣ್ ಮುಂದಾಳತ್ವದ ಭಾರತ ಕ್ರಿಕೆಟ್ ತಂಡ ಜಿಂಬಾಬ್ವೆಗೆ ತಲುಪಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. ಇದರ ನಡುವೆ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾಗಿದ್ದ ವಾಷಿಂಗ್ಟನ್ ಸುಂದರ್ ಗಾಯಕ್ಕೆ ತುತ್ತಾದ ಪರಿಣಾಮ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸುಂದರ್ ಜಾಗಕ್ಕೆ ಬದಲಿ ಆಟಗಾರನನ್ನು ಘೋಷಣೆ ಮಾಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಲ್ರೌಂಡರ್ ಪ್ರದರ್ಶನ ತೋರಿದ ಶಹ್ಬಾಜ್ ಅಹ್ಮದ್ ಸುಂದರ್ ಜಾಗಕ್ಕೆ ಆಯ್ಕೆಯಾಗಿದ್ದಾರೆ.

ಸುಂದರ್ ಇಂಗ್ಲೆಂಡ್​​ನಲ್ಲಿ ರಾಯಲ್ ಲಂಡನ್ ಒನ್ ಡೇ ಚಾಂಪಿಯನ್​ಷಿಪ್ ಮ್ಯಾಚ್​ನಲ್ಲಿ ಲ್ಯಾಂಚೆಶೈರ್ ತಂಡದ ಪರ ಕಳೆದ ವಾರ ಆಡುತ್ತಿದ್ದಾಗ ವೋರ್ಸೆಸ್ಟರ್‌ಶೈರ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಫೀಲ್ಡಿಂಗ್ ಮಾಡಲಾಗದೆ ಪಂದ್ಯದ ನಡುವೆಯೇ ಮೈದಾನ ತೊರೆದಿದ್ದರು. ಅನೇಕ ತಿಂಗಳುಗಳ ಬಳಿಕ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗುವ ಮೂಲಕ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ, ಇದೀಗ ಗಾಯದ ಪ್ರಮಾಣ ದೊಡ್ಡದಾಗಿದ್ದು ಜಿಂಬಾಬ್ವೆ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿದೆ. ಒಂದು ವಾರಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ
6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾ ಪರ ಪದಾರ್ಪಣೆ..?
FIFA Suspends AIFF: ಫಿಫಾ ಅಮಾನತು, ಭಾರತೀಯ ಫುಟ್​ಬಾಲ್​ ಮೇಲೆ ಹೇಗೆ ಪ್ರಭಾವ ಬೀರಲಿದೆ?
India vs Zimbabwe: ಭಾರತದ ವಿರುದ್ದ ಸರಣಿ ಗೆದ್ದಿದ್ದ ಜಿಂಬಾಬ್ವೆ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಅಖಿಲ ಭಾರತ ಫುಟ್​​ಬಾಲ್​​ ಫೆಡರೇಷನ್ ಬ್ಯಾನ್: ತೂಗುಯ್ಯಾಲೆಯಲ್ಲಿ ಮಹಿಳಾ ವಿಶ್ವಕಪ್ ಭವಿಷ್ಯ

 

ಸುಂದರ್ ಅನುಪಸ್ಥಿತಿಯಲ್ಲಿ ಶಹ್ಬಾಜ್ ಅಹ್ಮದ್​ಗೆ ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಶಹ್ಬಾಜ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 18 ಪಂದ್ಯಗಳನ್ನು ಆಡಿ 1041 ರನ್ ಮತ್ತು 57 ವಿಕೆಟ್ ಕಬಳಿಸಿದ್ದಾರೆ. ಅಂತೆಯೆ ಲಿಸ್ಟ್ ಎ ನಲ್ಲಿ 26 ಪಂದ್ಯಗಳನ್ನು ಆಡಿ 662 ರನ್ ಮತ್ತು 24 ವಿಕೆಟ್ ಪಡೆದಿದ್ದಾರೆ. ಇನ್ನು 56 ಟಿ20 ಪಂದದ್ಯಗಳನ್ನು ಆಡಿರುವ ಶಹ್ಬಾಜ್ 512 ರನ್ ಬಾರಿಸಿ 29 ವಿಕೆಟ್ ಕಿತ್ತಿದ್ದಾರೆ.

ಭಾರತ ತಂಡವು ಆರು ವರ್ಷಗಳ ಬಳಿಕ ಜಿಂಬಾಬ್ವೆ ನಾಡಿಗೆ ತೆರಳುತ್ತಿದೆ. ಈ ಹಿಂದೆ ಎಂಎಸ್ ಧೋನಿ ನೇತೃತ್ವದ ತಂಡವು 2016 ರಲ್ಲಿ ಮೂರು ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಜಿಂಬಾಬ್ವೆಯಲ್ಲಿ ಆಡಿತ್ತು. ಈ ಎರಡೂ ಸರಣಿಯಲ್ಲಿ ಅಂದು ಭಾರತ ತಂಡ ಗೆಲುವು ದಾಖಲಿಸಿತ್ತು. ಉಭಯ ತಂಡಗಳ ನಡುವೆ ಹರಾರೆ ಮೈದಾನದಲ್ಲಿ ಆಗಸ್ಟ್​ 18, 20 ಹಾಗೂ 22ರಂದು ಪಂದ್ಯಗಳು ನಡೆಯಲಿವೆ.

ಭಾರತ ತಂಡ: ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್ ಹಾಗೂ ಶಹ್ಬಾಜ್ ಅಹ್ಮದ್.

Published On - 2:04 pm, Tue, 16 August 22