India vs Zimbabwe: ಭಾರತದ ವಿರುದ್ದ ಸರಣಿ ಗೆದ್ದಿದ್ದ ಜಿಂಬಾಬ್ವೆ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

India vs Zimbabwe: ಭಾರತದಂತಹ ಬಲಿಷ್ಠ ತಂಡವನ್ನು ಎದುರಿಸುವಾಗ ಯಾರು ಗೆಲ್ಲುತ್ತಾರೆ ಎಂಬುದನ್ನು ಮೊದಲೇ ಊಹಿಸಬಹುದು. ಇತ್ತ ಭಾರತೀಯರು ಕೂಡ ಈ ಪಂದ್ಯದ ವೀಕ್ಷಣೆಗೆ ಹೆಚ್ಚಿನ ಉತ್ಸುಕರಾಗಿಲ್ಲ.

India vs Zimbabwe: ಭಾರತದ ವಿರುದ್ದ ಸರಣಿ ಗೆದ್ದಿದ್ದ ಜಿಂಬಾಬ್ವೆ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
India vs Zimbabwe
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 16, 2022 | 11:15 AM

ಆಗಸ್ಟ್ 18 ರಿಂದ ಭಾರತ-ಜಿಂಬಾಬ್ವೆ (India vs Zimbabwe)  ನಡುವಣ 3 ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಈ ಸರಣಿಯಿಂದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಹೀಗಾಗಿ ತಂಡವನ್ನು ಕೆಎಲ್ ರಾಹುಲ್ (KL Rahul) ಮುನ್ನಡೆಸುತ್ತಿದ್ದಾರೆ. ಮುಂಬರುವ ಏಷ್ಯಾಕಪ್​ ಹಿನ್ನೆಲೆಯಲ್ಲಿ ಈ ಸರಣಿಯು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಮಹತ್ವದಾಗಿ ಪರಿಣಮಿಸಿದೆ. ಅತ್ತ ಜಿಂಬಾಬ್ವೆ ಬಾಂಗ್ಲಾದೇಶ ತಂಡವನ್ನು ಮಣಿಸಿ ಹೊಸ ಹುರುಪಿನಲ್ಲಿದೆ. ಹೀಗಾಗಿ ಉಭಯ ತಂಡಗಳಿಂದ ಉತ್ತಮ ಪೈಪೋಟಿಯನ್ನು ನಿರೀಕ್ಷಿಸಬಹುದು. ಇದಾಗ್ಯೂ ಜಿಂಬಾಬ್ವೆ ತಂಡವನ್ನು ಭಾರತ ಹಗುರವಾಗಿ ಪರಿಗಣಿಸಬಾರದು ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಏಕೆಂದರೆ ಈ ಹಿಂದೆ ಭಾರತದ ವಿರುದ್ದ ಏಕದಿನ ಸರಣಿ ಗೆದ್ದ ಇತಿಹಾಸ ಜಿಂಬಾಬ್ವೆ ತಂಡಕ್ಕಿದೆ. ಹೀಗಾಗಿ ಕೆಎಲ್ ರಾಹುಲ್ ಪಡೆಯನ್ನು ಮಣಿಸುವ ಆತ್ಮ ವಿಶ್ವಾಸದಲ್ಲೇ ಜಿಂಬಾಬ್ವೆ ತಂಡದ ಯುವ ತರುಣರು ಮೈದಾನಕ್ಕಿಳಿಯಲಿದ್ದಾರೆ.

ಇದಾಗ್ಯೂ ಜಿಂಬಾಬ್ವೆ ವಿರುದ್ದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಮೆರೆಯುತ್ತಾ ಬಂದಿದೆ. ಅಂದರೆ ಜಿಂಬಾಬ್ವೆ ವಿರುದ್ದ ಭಾರತ ಇದುವರೆಗೆ 9 ಏಕದಿನ ಸರಣಿಗಳನ್ನು ಆಡಿದೆ. ಇದರಲ್ಲಿ ಅತೀ ಹೆಚ್ಚು ಬಾರಿ ಗೆದ್ದಿದ್ದು ಯಾರು? ಅಂದಿನ ನಾಯಕ ಯಾರು? ಎಂಬಿತ್ಯಾದಿಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.

ಜಿಂಬಾಬ್ವೆ ಸರಣಿಗಳ ಇತಿಹಾಸ:

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
  1. – ಭಾರತ ತಂಡವು ಮೊದಲ ಬಾರಿಗೆ ಜಿಂಬಾಬ್ವೆ ವಿರುದ್ದ ಏಕದಿನ ಸರಣಿ ಆಡಿದ್ದು 1992 ರಲ್ಲಿ. ಅಂದು ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಏಕೈಕ ಏಕದಿನ ಪಂದ್ಯವಾಡಿದ್ದ ಭಾರತ, ಜಿಂಬಾಬ್ವೆಯನ್ನು 30 ರನ್​ಗಳಿಂದ ಸೋಲಿಸಿ ಸರಣಿ ಗೆದ್ದಿತ್ತು.
  2. – 1993 ರಲ್ಲಿ ಭಾರತ ಮತ್ತೊಮ್ಮೆ ಜಿಂಬಾಬ್ವೆ ವಿರುದ್ದ ಸರಣಿ ಆಡಿತ್ತು. ಮೂರು ಪಂದ್ಯಗಳ ಈ ಸರಣಿಯನ್ನು ಟೀಮ್ ಇಂಡಿಯಾ 3-0 ಅಂತರದಿಂದ ಗೆದ್ದುಕೊಂಡಿತ್ತು. ಅಂದು ಸಹ ಭಾರತ ತಂಡವನ್ನು ಅಜರುದ್ದೀನ್ ಮುನ್ನಡೆಸಿದ್ದರು.
  3. – ಭಾರತ ತಂಡವು ಜಿಂಬಾಬ್ವೆ ವಿರುದ್ದ ಮೂರನೇ ಸರಣಿ ಆಡಲು ಬರೋಬ್ಬರಿ 4 ವರ್ಷಗಳನ್ನು ತೆಗೆದುಕೊಂಡಿತು. ಅಂದರೆ 1993 ರ ಸರಣಿಯ ಬಳಿಕ ಮತ್ತೊಮ್ಮೆ ಜಿಂಬಾಬ್ವೆ ವಿರುದ್ದ ಸಿರೀಸ್ ಆಡಿದ್ದು 1997 ರಲ್ಲಿ. ಅಂದು ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲೇ ಜಿಂಬಾಬ್ವೆ ವಿರುದ್ದ ಸೋಲನುಭವಿಸಿತ್ತು. ಅಂದರೆ ಏಕದಿನ ಸರಣಿಯಲ್ಲಿ ಭಾರತದ ವಿರುದ್ದ ಜಿಂಬಾಬ್ವೆ ಮೊದಲ ಜಯ ಸಾಧಿಸಿ ಹೊಸ ಇತಿಹಾಸ ಬರೆಯಿತು. 2 ಪಂದ್ಯಗಳ ಈ ಸರಣಿಯ 2ನೇ ಪಂದ್ಯವು ಮಳೆಗೆ ಅಹುತಿಯಾದ ಕಾರಣ ಸರಣಿಯನ್ನು 1-0 ಅಂತರದಿಂದ ಜಿಂಬಾಬ್ವೆ ಗೆದ್ದುಕೊಂಡಿತು. ಇದು ಟೀಮ್ ಇಂಡಿಯಾ ವಿರುದ್ದ ಜಿಂಬಾಬ್ವೆ ತಂಡದ ಮೊದಲ ಏಕದಿನ ಸರಣಿ ಜಯ ಎಂಬುದು ವಿಶೇಷ.
  4. – ಚೊಚ್ಚಲ ಬಾರಿ ಜಿಂಬಾಬ್ವೆ ವಿರುದ್ದ ಸರಣಿ ಸೋತಿದ್ದ ಭಾರತ ಮರುವರ್ಷವೇ ಮತ್ತೊಮ್ಮೆ 3 ಪಂದ್ಯಗಳ ಏಕದಿನ ಸಿರೀಸ್ ಆಡಿತ್ತು. ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಮೊದಲೆರಡು ಪಂದ್ಯಗಳಲ್ಲಿ ಗೆದ್ದರೆ, ಮೂರನೇ ಪಂದ್ಯದಲ್ಲಿ ಜಿಂಬಾಬ್ವೆ ಜಯ ಸಾಧಿಸಿತು. ಇದಾಗ್ಯೂ ಭಾರತ ತಂಡವು 2-1 ಅಂತರದಿಂದ ಸರಣಿ ಗೆದ್ದುಕೊಂಡಿತು.
  5. – 2000 ರಲ್ಲಿ ಭಾರತ ತಂಡವು ಮೊದಲ ಬಾರಿಗೆ ಜಿಂಬಾಬ್ವೆ ವಿರುದ್ದ 5 ಪಂದ್ಯಗಳ ಸರಣಿ ಆಡಿತ್ತು. ಸೌರವ್ ಗಂಗೂಲಿ ನಾಯಕತ್ವದಲ್ಲಿ ಆಡಲಾಗಿದ್ದ ಈ ಸರಣಿಯ ಮೊದಲ ಎರಡು ಪಂದ್ಯಗಳನ್ನು ಭಾರತ ಗೆದ್ದುಕೊಂಡರೆ, ಮೂರನೇ ಪಂದ್ಯದಲ್ಲಿ ಜಿಂಬಾಬ್ವೆ ಜಯ ಸಾಧಿಸಿತ್ತು. ಇನ್ನು ನಾಲ್ಕನೇ ಮತ್ತು ಐದನೇ ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ 4-1 ಅಂತರದಿಂದ ಸರಣಿ ಗೆದ್ದುಕೊಂಡಿತು.
  6. – 2002 ರಲ್ಲಿ ಮತ್ತೊಮ್ಮೆ ಐದು ಪಂದ್ಯಗಳ ಸರಣಿ ಆಡಿದ್ದ ಭಾರತವನ್ನು ಜಿಂಬಾಬ್ವೆ 2 ಪಂದ್ಯಗಳಲ್ಲಿ ಸೋಲಿಸಲು ಯಶಸ್ವಿಯಾಗಿತ್ತು. ಇದಾಗ್ಯೂ ಸೌರವ್ ಗಂಗೂಲಿ ನೇತೃತ್ವದ ಟೀಮ್ ಇಂಡಿಯಾ 3-2 ಅಂತರದಿಂದ ಸರಣಿ ಗೆಲ್ಲುವ ಮೂಲಕ ನಿಟ್ಟುಸಿರು ಬಿಟ್ಟಿತು.
  7. – ಇದಾದ ಬಳಿಕ ಭಾರತ ಜಿಂಬಾಬ್ವೆ ವಿರುದ್ದ ಏಕದಿನ ಸರಣಿ ಆಡಿದ್ದು ಬರೋಬ್ಬರಿ 1 ದಶಕದ ಬಳಿಕ ಎಂಬುದು ವಿಶೇಷ. ಅಂದರೆ 2013 ರಲ್ಲಿ. ಅಂದು ಧೋನಿಯ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಐದು ಪಂದ್ಯಗಳ ಸರಣಿಯಲ್ಲಿ ಜಿಂಬಾಬ್ವೆ ತಂಡವನ್ನು 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು.
  8. – 2015 ರಲ್ಲಿ ಮತ್ತೆ 5 ಪಂದ್ಯಗಳ ಸರಣಿಯ ಮೂಲಕ ಭಾರತ-ಜಿಂಬಾಬ್ವೆ ಮುಖಾಮುಖಿಯಾಗಿತ್ತು. ವಿರಾಟ್ ಕೊಹ್ಲಿ, ಧೋನಿ ಸೇರಿದಂತೆ ಪ್ರಮುಖ ಆಟಗಾರರು ತಂಡದಿಂದ ಹೊರಗುಳಿದಿದ್ದ ಕಾರಣ ಅಜಿಂಕ್ಯ ರಹಾನೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಅಲ್ಲದೆ ಈ ಸರಣಿಯನ್ನು ಭಾರತ 4-1 ಅಂತರದಿಂದ ಗೆದ್ದುಕೊಂಡಿತ್ತು.
  9. – ಇದಾದ ಬಳಿಕ ಮರುವರ್ಷವೇ ಮತ್ತೊಮ್ಮೆ ಭಾರತ ಜಿಂಬಾಬ್ವೆ ವಿರುದ್ದ 3 ಪಂದ್ಯಗಳ ಏಕದಿನ ಸರಣಿ ಆಡಿತ್ತು. 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ 3-0 ಅಂತರದಿಂದ ಜಿಂಬಾಬ್ವೆ ತಂಡವನ್ನು ಕ್ಲೀನ್ ಸ್ವೀಪ್ ಮಾಡಿ ಸರಣಿ ಗೆದ್ದುಕೊಂಡಿತು.

ಇದೀಗ ಬರೋಬ್ಬರಿ 6 ವರ್ಷಗಳ ಬಳಿಕ ಭಾರತ ತಂಡವು ಜಿಂಬಾಬ್ವೆ ವಿರುದ್ದ ಸರಣಿ ಆಡಲು ಸಜ್ಜಾಗಿದೆ. ಅತ್ತ ಬಾಂಗ್ಲಾದೇಶ್ ವಿರುದ್ದ ಏಕದಿನ ಸರಣಿ ಗೆದ್ದಿರುವ ಜಿಂಬಾಬ್ವೆ ಭಾರತಕ್ಕೂ ಕಠಿಣ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

ಜಿಂಬಾಬ್ವೆ ವಿರುದ್ದ ಭಾರತ ಯಾಕೆ ಸರಣಿ ಆಡುತ್ತಿದೆ? ಮೇಲ್ನೋಟಕ್ಕೆ ಜಿಂಬಾಬ್ವೆ ಐಸಿಸಿ ಪಾಯಿಂಟ್ ಟೇಬಲ್​ನಲ್ಲಿ ಕೆಳ ಹಂತದಲ್ಲಿರುವ ತಂಡ. ಅದರಲ್ಲೂ ಭಾರತದಂತಹ ಬಲಿಷ್ಠ ತಂಡವನ್ನು ಎದುರಿಸುವಾಗ ಯಾರು ಗೆಲ್ಲುತ್ತಾರೆ ಎಂಬುದನ್ನು ಮೊದಲೇ ಊಹಿಸಬಹುದು. ಇತ್ತ ಭಾರತೀಯರು ಕೂಡ ಈ ಪಂದ್ಯದ ವೀಕ್ಷಣೆಗೆ ಹೆಚ್ಚಿನ ಉತ್ಸುಕರಾಗಿಲ್ಲ. ಇದಾಗ್ಯೂ ಬಿಸಿಸಿಐ ಯಾಕೆ ಜಿಂಬಾಬ್ವೆ ವಿರುದ್ದ ಸರಣಿ ಆಯೋಜಿಸುತ್ತಿದೆ ಎಂಬ ಪ್ರಶ್ನೆಯೊಂದು ಮೂಡುತ್ತದೆ. ಇದಕ್ಕೆ ಎರಡು ಉತ್ತರಗಳನ್ನು ನೀಡಬಹುದು.

1- ಭಾರತದಂತಹ ಬಲಿಷ್ಠ ತಂಡದ ವಿರುದ್ದ ಜಿಂಬಾಬ್ವೆ ಸರಣಿ ಆಡುವುದರಿಂದ ಇಲ್ಲಿನ ಕ್ರಿಕೆಟ್ ಬೋರ್ಡ್​ ಆರ್ಥಿಕ ಲಾಭ ಪಡೆದುಕೊಳ್ಳುತ್ತದೆ. ಅಂದರೆ ಒಂದು ಸರಣಿ ಆಯೋಜಿಸುವುದರಿಂದ ಟಿವಿ ರೈಟ್ಸ್ ಹಾಗೂ ಜಾಹೀರಾತಿನ ಮೂಲಕ ಕ್ರಿಕೆಟ್ ಮಂಡಳಿ ಒಂದಷ್ಟು ಲಾಭ ಪಡೆದುಕೊಳ್ಳುತ್ತದೆ. ಪ್ರಸ್ತುತ ಸಂಕಷ್ಟದಲ್ಲಿರುವ ಜಿಂಬಾಬ್ವೆಗೆ ಆರ್ಥಿಕ ಪುನಶ್ಚೇತನಕ್ಕೆ ಟೀಮ್ ಇಂಡಿಯಾದಂತಹ ಬಲಿಷ್ಠ ತಂಡದ ವಿರುದ್ದದ ಸರಣಿ ಅನಿವಾರ್ಯ. ಈ ಒಂದು ಕಾರಣದಿಂದ ಜಿಂಬಾಬ್ವೆ ನೆರವಿಗೆ ಬಿಸಿಸಿಐ ಮುಂದಾಗಿದೆ ಎನ್ನಬಹುದು.

2- ಐಸಿಸಿ ನಿಯಮದ ಪ್ರಕಾರ ಮುಂಬರುವ ಏಕದಿನ ವಿಶ್ವಕಪ್​ಗೆ ಪ್ರತಿ ತಂಡಗಳು ಏಕದಿನ ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್​ ಟೇಬಲ್​ನಂತೆ ಅರ್ಹತೆ ಪಡೆಯಲಿದೆ. ಈ ಪಟ್ಟಿಯಲ್ಲಿ ಒಟ್ಟು 13 ತಂಡಗಳಿವೆ. ಇದರಲ್ಲಿ ಜಿಂಬಾಬ್ವೆ ಕೂಡ ಒಂದು. ಹೀಗಾಗಿ ಈ ತಂಡಗಳ ವಿರುದ್ದ ಭಾರತ ಕೂಡ ಏಕದಿನ ಸರಣಿ ಆಡಬೇಕಿದೆ. ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್ ಟೇಬಲ್​ನಲ್ಲಿ 8 ಸ್ಥಾನಗಳನ್ನು ಪಡೆಯುವ ತಂಡಗಳು ನೇರವಾಗಿ 2023 ರ ವಿಶ್ವಕಪ್​ಗೆ ಅರ್ಹತೆ ಪಡೆಯಲಿದೆ. ಹೀಗಾಗಿ ಈ ಪಟ್ಟಿಯಲ್ಲಿ ಭಾರತಕ್ಕೆ ಎದುರಾಳಿಯಾಗಿ ಸಿಕ್ಕಿರುವ ಜಿಂಬಾಬ್ವೆ ವಿರುದ್ದ ಸರಣಿ ಆಡಬೇಕಿರುವುದು ಅನಿವಾರ್ಯ. ಈ ಎರಡು ಕಾರಣಗಳಿಂದ ಬಿಸಿಸಿಐ ಜಿಂಬಾಬ್ವೆ ವಿರುದ್ದ 6 ವರ್ಷಗಳ ಬಳಿಕ ಸರಣಿ ಆಡಲು ಮುಂದಾಗಿದೆ.

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ