FIFA Suspends AIFF: ಫಿಫಾ ಅಮಾನತು, ಭಾರತೀಯ ಫುಟ್​ಬಾಲ್​ ಮೇಲೆ ಹೇಗೆ ಪ್ರಭಾವ ಬೀರಲಿದೆ?

FIFA Suspends AIFF: ಇಂಡಿಯನ್ ಫುಟ್​ಬಾಲ್ ಕ್ಲಬ್​ಗಳಿಗೆ ವಿದೇಶಿ ಕ್ಲಬ್​ಗಳ ಜೊತೆ ಆಡಲು ಅವಕಾಶ ಇರಲ್ಲ. ಇನ್ನು ಫಿಫಾ ಪ್ರತಿ ದೇಶದಿಂದ ಒಂದಷ್ಟು ಯುವ ಪ್ರತಿಭೆಗಳನ್ನು ಆಯ್ಕೆ ಮಾಡಿ ಅವರಿಗೆ ಅತ್ಯುತ್ತಮ ತರಬೇತಿ ನೀಡುತ್ತದೆ.

FIFA Suspends AIFF: ಫಿಫಾ ಅಮಾನತು, ಭಾರತೀಯ ಫುಟ್​ಬಾಲ್​ ಮೇಲೆ ಹೇಗೆ ಪ್ರಭಾವ ಬೀರಲಿದೆ?
Indian Football Team
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 16, 2022 | 12:33 PM

ಅಂತಾರಾಷ್ಟ್ರೀಯ ಫುಟ್‌ ಬಾಲ್​ನ ಜಾಗತಿಕ ಮಂಡಳಿ (FIFA) ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಅನ್ನು ಅಮಾನತುಗೊಳಿಸಿದೆ. ಎಐಎಫ್‌ಎಫ್‌ನ ವ್ಯವಹಾರಗಳಲ್ಲಿ “ಮೂರನೇ ವ್ಯಕ್ತಿಯ ಹಸ್ತಕ್ಷೇಪ” ದಿಂದಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಫಿಫಾ ತಿಳಿಸಿದೆ. ಬ್ಯೂರೊ ಆಫ್ ಫಿಫಾ (FIFA) ಕೌನ್ಸಿಲ್‍ನಲ್ಲಿ ಈ ಸಂಬಂಧ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದ್ದು, ಅದರಂತೆ ಅಖಿಲ ಭಾರತ ಫುಟ್​ಬಾಲ್​ ಫೆಡರೇಶನ್​ ಅನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಈ ಅಮಾನತಿನೊಂದಿಗೆ FIFA U-17 ಮಹಿಳಾ ವಿಶ್ವಕಪ್ 2022 ಆಯೋಜಿಸುವ ಭಾರತದ ಕನಸು ಕೂಡ ಕಮರಿದೆ.

ಫಿಫಾ ತೆಗೆದುಕೊಂಡಿರುವ ಈ ಮಹತ್ವದ ನಿರ್ಧಾರಗಳಿಂದ ಭಾರತೀಯ ಫುಟ್​ಬಾಲ್​ ಮೇಲೆ ನೇರ ಪರಿಣಾಮ ಬೀರಲಿದೆ. ಅದರಲ್ಲೂ ಉದೋನ್ಮುಖ ಫುಟ್​ಬಾಲ್ ತಾರೆಯರು ಆಟದಿಂದ ವಿಮುಖರಾಗುವ ಸಾಧ್ಯತೆ ಹೆಚ್ಚು. ಹಾಗಿದ್ರೆ ಫಿಫಾ ಕ್ರಮ ಕೈಗೊಳ್ಳಲು ಕಾರಣವೇನು? ಇದರಿಂದ ಭಾರತದ ಫುಟ್​ಬಾಲ್ ಮೇಲೆ ಬೀರುವ ಪ್ರಭಾವಗಳೇನು ನೋಡೋಣ…

ಅಮಾನತು ಮಾಡಲು ಮುಖ್ಯ ಕಾರಣವೇನು?

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಫಿಫಾ ಇಡೀ ವಿಶ್ವದ ಫುಟ್​ಬಾಲ್​ ಮಂಡಳಿಗಳನ್ನು ನಿಯಂತ್ರಿಸುವ ಸಂಸ್ಥೆ. ಪ್ರತಿ ಮಂಡಳಿಗಳೂ ಫುಟ್​ಬಾಲ್ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಗಳನ್ನು ಫಿಫಾ ಗಮನಕ್ಕೆ ತರಬೇಕಾಗುತ್ತದೆ. ಉದಾಹರಣೆಗೆ ಭಾರತದಲ್ಲಿ ಆಯೋಜಿಸಲಾಗುತ್ತಿರುವ ಫುಟ್​ಬಾಲ್ ಟೂರ್ನಿ ಭಾರತೀಯ ಸೂಪರ್ ಲೀಗ್​ಗೂ ಫಿಫಾದಿಂದ ಅನುಮತಿ ಪಡೆಯಬೇಕು. ಇನ್ನು ಫಿಫಾ ಆಯೋಜಿಸುವ ಪ್ರಮುಖ ಟೂರ್ನಿಗಳಲ್ಲಿ ಆಯಾ ದೇಶಗಳ ಫುಟ್​ಬಾಲ್​ ಮಂಡಳಿಗೆ ತಮ್ಮ ಸಲಹೆಗಳನ್ನು ಮುಂದಿಡುವ ಅವಕಾಶವಿದ್ದರೂ, ಅಸೋಷಿಯೇಶನ್​ನ ಹೊರಗಿರುವ ವ್ಯಕ್ತಿಗಳು ಹಸ್ತಕ್ಷೇಪ ಮಾಡುವಂತಿಲ್ಲ.

ಇದೀಗ ಭಾರತ ಅಂಡರ್ 17 ಮಹಿಳಾ ವಿಶ್ವಕಪ್ ಆಯೋಜಿಸುವ ಹೊಸ್ತಿಲಲ್ಲಿ ಫಿಫಾ ಭಾರತೀಯ ಫುಟ್​ಬಾಲ್ ಫೆಡರೇಷನ್​ನ್ನು ಅಮಾನತುಗೊಳಿಸಿದೆ. ಇಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶವೆಂದರೆ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ. ಅಂದರೆ ಎಐಎಫ್‌ಎಫ್‌ನ ವ್ಯವಹಾರಗಳಲ್ಲಿ ಹೊರಗಿನ ವ್ಯಕ್ತಿಗಳ ಅಥವಾ ಇನ್ನಿತರ ಅಧಿಕಾರಿಗಳ ನೇರ ಹಸ್ತಕ್ಷೇಪ ಕಂಡು ಬಂದಿದೆ. ಅದರಲ್ಲೂ ಫಿಫಾ ಚುನಾವಣಾ ವಿಷಯ ಸುಪ್ರೀಂ ಕೋರ್ಟ್​ನಲ್ಲಿದೆ. ಈ ವಿಚಾರವಾಗಿ ಭಾರತೀಯ ಫುಟ್​ಬಾಲ್ ಸಂಸ್ಥೆಯನ್ನು​ ನಿಯಂತ್ರಿಸಲು ನ್ಯಾಯಾಲಯ ಆಡಳಿತಗಾರರ ಸಮಿತಿ ರಚಿಸಿದೆ. ಈ ಎಲ್ಲಾ ಕಾರಣಗಳಿಂದ ಫಿಫಾ ಭಾರತೀಯ ಫುಟ್​ಬಾಲ್ ಫೆಡರೇಶನ್​ ಅನ್ನು ಅಮಾನತು ಮಾಡುವ ನಿರ್ಧಾರಕ್ಕೆ ಬಂದಿದೆ.

ಕೈ ತಪ್ಪಿದ ಅಂಡರ್ 17 ವಿಶ್ವಕಪ್​:

ಭಾರತ ಇನ್ನೂ ಕೂಡ ಹಿರಿಯರ ಫಿಫಾ ವಿಶ್ವಕಪ್​ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿಲ್ಲ. ಆದರೆ ಯುವ ಪ್ರತಿಭೆಗಳು ಇತ್ತೀಚಿನ ದಿನಗಳಲ್ಲಿ ಫುಟ್​ಬಾಲ್​ನಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಅದರಲ್ಲೂ ಭಾರತೀಯ ಸೂಪರ್ ಲೀಗ್​ನಂತಹ ಫುಟ್​ಬಾಲ್​​ ಲೀಗ್​ ಮೂಲಕ ಅತ್ಯುತ್ತಮ ಆಟಗಾರರು ಹೊರಹೊಮ್ಮುತ್ತಿದ್ದಾರೆ. ಇದೇ ಕಾರಣಗಳಿಂದಾಗಿ ಭಾರತ ಮುಂಬರುವ ದಿನಗಳಲ್ಲಿ ಫಿಫಾ ವಿಶ್ವಕಪ್​ ಅರ್ಹತೆ ಗಿಟ್ಟಿಸಿಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ ಅದಕ್ಕೂ ಮುನ್ನ ವಿಶ್ವದ ಪ್ರಮುಖ ದೇಶಗಳ ತಂಡಗಳ ವಿರುದ್ದ ಆಡಬೇಕಾದ ಅನಿವಾರ್ಯತೆ ಇದೆ. ಇಂತಹ ಟೂರ್ನಿಗಳನ್ನು ಫಿಫಾ ಆಯೋಜಿಸುತ್ತಿದೆ. ಉದಾಹರಣೆಗೆ ಈ ಬಾರಿ ಭಾರತದಲ್ಲೇ FIFA U-17 ಮಹಿಳಾ ವಿಶ್ವಕಪ್ 2022 ನಡೆಯಬೇಕಿತ್ತು. ಇದೀಗ ಅಮಾನತು ಮೂಲಕ ಭಾರತದ ಆತಿಥ್ಯವನ್ನು ಕಸಿದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಅಕ್ಟೋಬರ್​ನಲ್ಲಿ ನಡೆಯಲಿರುವ ಅಂಡರ್ 17 ವಿಶ್ವಕಪ್​ನಲ್ಲಿ ಭಾರತದ ಮಹಿಳಾ ತಂಡಕ್ಕೆ ಅವಕಾಶವನ್ನು ನಿಷೇಧಿಸಲಾಗಿದೆ. ಅಂದರೆ ಇಲ್ಲಿ ವರ್ಷಗಳ ಕಾಲ ಅಭ್ಯಾಸ ನಡೆಸಿದ್ದ ಒಂದು ತಂಡದ ಕನಸುಗಳು ಒಂದೇ ಒಂದು ನಿರ್ಧಾರದಿಂದ ಕಮರಿದೆ ಎನ್ನಬಹುದು. ಮತ್ತೊಂದೆಡೆ ಫಿಫಾದ ಟೂರ್ನಿಗಳಲ್ಲಿ ಆಡುವ ಅವಕಾಶ ಇನ್ಮುಂದೆ ಭಾರತೀಯ ಆಟಗಾರರಿಗೆ ಸಿಗುವುದಿಲ್ಲ.

ಪ್ರಮುಖ ಟೂರ್ನಿಗಳ ಮೇಲೆ ನಿಷೇಧ ಇರಲಿದೆಯಾ?

ಫಿಫಾ ಅಮಾನತು ಅಂದರೆ, ಇಡೀ ಟೂರ್ನಿಗಳ ಮೇಲೆ ನಿಷೇಧ ಎಂದೇ ಹೇಳಬಹುದು. ಏಕೆಂದರೆ ಭಾರತವು ಏಷ್ಯಾನ್ ರಾಷ್ಟ್ರಗಳ ಟೂರ್ನಿಗಳಲ್ಲಿ ಹೆಚ್ಚಾಗಿ ಆಡುತ್ತವೆ. ಅದರೀಗ ವಿಶ್ವ ಫುಟ್​ಬಾಲ್​ ಅನ್ನು ನಿಯಂತ್ರಿಸುವ ಫಿಫಾ ನಿರ್ಧಾರವನ್ನು ಏಷ್ಯನ್ ಫುಟ್ಬಾಲ್ ಒಕ್ಕೂಟ ಕೂಡ ಅಂಗೀಕರಿಸಲಿದೆ. ಇದರಿಂದ 2023 ರಲ್ಲಿ ನಡೆಯಲಿರುವ ಏಷ್ಯಾಕಪ್ ಫುಟ್​ಬಾಲ್​ನಿಂದ ಕೂಡ ಭಾರತ ಹೊರಬೀಳಲಿದೆ.

ಭಾರತದ ಫುಟ್​ಬಾಲ್ ಮೇಲೆ ಬೀರುವ ಪ್ರಭಾವಗಳೇನು?

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್​ ಮೇಲಿನ ನಿಷೇಧ ಭಾರತೀಯ ಫುಟ್​ಬಾಲ್ ಮೇಲೆ ನೇರ ಪ್ರಭಾವ ಬೀರುತ್ತದೆ. ಮುಖ್ಯವಾಗಿ ಫುಟ್​ಬಾಲ್ ಲೀಗ್​ ಮೇಲೆ ಎನ್ನಬಹುದು. ಏಕೆಂದರೆ ಭಾರತೀಯ ಫುಟ್​ಬಾಲ್ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ತೆರೆದಿಡುವ ಹಾಗೂ ಒಂದಷ್ಟು ಆದಾಯಗಳಿಸುವ ಏಕೈಕ ಮಾರ್ಗವೆಂದರೆ ಇಂಡಿಯನ್ ಸೂಪರ್ ಲೀಗ್. ಆದರೆ ಇದೀಗ ಫಿಫಾ ನಿಷೇಧದಿಂದ ಈ ಫುಟ್​ಬಾಲ್ ಲೀಗ್ ಕೂಡ ನಡೆಯುವುದು ಅನುಮಾನ. ಒಂದು ವೇಳೆ ಆಯೋಜಿಸಿದರೂ ಅದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಇರುವುದಿಲ್ಲ. ಅಂದರೆ ವಿಶ್ವದ ಪ್ರಮುಖ ಆಟಗಾರರು ಈ ಲೀಗ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಇತ್ತ ಸೂಪರ್ ಲೀಗ್​ನಂತಹ ಅತ್ಯುತ್ತಮ ವೇದಿಕೆಯ ಮೂಲಕ ಅಂತಾರಾಷ್ಟ್ರೀಯ ಫುಟ್​ಬಾಲ್​ ಕನಸುಗಳನ್ನು ಕಾಣುತ್ತಿರುವ ಯುವ ಪ್ರತಿಭೆಗಳಿಗೆ ಇದು ದೊಡ್ಡ ಹೊಡೆತ ನೀಡಲಿದೆ. ಏಕೆಂದರೆ ಫಿಫಾ ನಿಷೇಧದಿಂದ ಅತ್ತ ರಾಷ್ಟ್ರೀಯ ತಂಡ ಕೂಡ ನಿಷೇಧಕ್ಕೊಳಗಾಗಲಿದೆ. ಇದರಿಂದ ಯಾಕಾಗಿ ಫುಟ್​ಬಾಲ್ ಆಡಬೇಕೆಂಬ ಪ್ರಶ್ನೆಯೊಂದು ಮೂಡುತ್ತದೆ. ಅಂದರೆ ಭಾರತವನ್ನು ಪ್ರತಿನಿಧಿಸಬೇಕೆಂಬ ಕನಸಿನೊಂದಿಗೆ ಎಲ್ಲಾ ಆಟಗಾರರು ಮೈದಾನಕ್ಕಿಳಿಯುತ್ತಾರೆ. ಆದರೆ ಇದೀಗ ಬ್ಯಾನ್​ನಿಂದ ಭಾರತ ಇನ್ಮುಂದೆ ಅಂತಾರಾಷ್ಟ್ರೀಯ ಫುಟ್​ಬಾಲ್ ಆಡಲು ಅವಕಾಶ ಇರುವುದಿಲ್ಲ.

ಹಾಗೆಯೇ ಇಂಡಿಯನ್ ಫುಟ್​ಬಾಲ್ ಕ್ಲಬ್​ಗಳಿಗೆ ವಿದೇಶಿ ಕ್ಲಬ್​ಗಳ ಜೊತೆ ಆಡಲು ಅವಕಾಶ ಇರಲ್ಲ. ಇನ್ನು ಫಿಫಾ ಪ್ರತಿ ದೇಶದಿಂದ ಒಂದಷ್ಟು ಯುವ ಪ್ರತಿಭೆಗಳನ್ನು ಆಯ್ಕೆ ಮಾಡಿ ಅವರಿಗೆ ಅತ್ಯುತ್ತಮ ತರಬೇತಿ ನೀಡುತ್ತದೆ. ಇದರಿಂದ ಕೂಡ ಭಾರತೀಯ ಆಟಗಾರರು ವಂಚಿತರಾಗಲಿದ್ದಾರೆ. ಹೀಗಾಗಿ ಯುವ ಪ್ರತಿಭೆಗಳು ಫುಟ್​ಬಾಲ್​ನಿಂದ ವಿಮುಖರಾಗುವ ಸಾಧ್ಯತೆ ಹೆಚ್ಚು.

ಫಿಫಾ ಅಮಾನತು ತೆಗೆದುಹಾಕಲು ಸಾಧ್ಯವಿಲ್ಲವಾ?

ಮೊದಲ ಹೇಳಿದಂತೆ ಫಿಫಾ ಅಂತಾರಾಷ್ಟ್ರೀಯ ಫುಟ್​ಬಾಲ್ ಮಂಡಳಿಗಳನ್ನು ನಿಯಂತ್ರಿಸುವ ಸಂಸ್ಥೆ. ಭಾರತದಂತಹ ಒಂದು ದೇಶವನ್ನು ಅಮಾನತು ಮಾಡುವುದರಿಂದ ಫಿಫಾಗೆ ಯಾವುದೇ ನಷ್ಟವಿಲ್ಲ. ಇಲ್ಲಿ ನಷ್ಟವಿರುವುದು ಭಾರತೀಯ ಫುಟ್​ಬಾಲ್​ಗೆ ಎಂಬುದೇ ಸತ್ಯ. ಇದೀಗ ಈ ಅಮಾನತನ್ನು ತೆಗೆದುಹಾಕಲು ಭಾರತ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲಿ ಮೂರನೇ ವ್ಯಕ್ತಿಗಳ ಅನಗತ್ಯ ಪ್ರಭಾವದಿಂದಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಅನ್ನು ತಕ್ಷಣವೇ ಜಾರಿಗೆ ತರಲು ಫಿಫಾ ಕೌನ್ಸಿಲ್‌ನ ಬ್ಯೂರೋ ಸರ್ವಾನುಮತದಿಂದ ನಿರ್ಧರಿಸಿದೆ. ಏಕೆಂದರೆ ಇದು ಫಿಫಾ ಕಾಯಿದೆಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಅಂತಾರಾಷ್ಟ್ರೀಯ ಫುಟ್‌ ಬಾಲ್​ನ ಜಾಗತಿಕ ಮಂಡಳಿ ತಿಳಿಸಿದೆ.

ಇನ್ನು AIFF ಆಡಳಿತವು ದೈನಂದಿನ ವ್ಯವಹಾರಗಳ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆದ ನಂತರ ಅಮಾನತು ತೆಗೆದುಹಾಕಲಾಗುವುದು ಎಂದು ಫಿಫಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಂದರೆ ಇದೀಗ AIFF ಚುನಾವಣಾ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ರಾಷ್ಟ್ರೀಯ ಫೆಡರೇಶನ್‌ನ ವ್ಯವಹಾರಗಳನ್ನು ನಡೆಸುತ್ತಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಪ್ರಸ್ತಾಪಿಸಿದ ವೇಳಾಪಟ್ಟಿಯಂತೆ ಚುನಾವಣೆಗಳು ನಡೆಯಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಇದನ್ನೂ ಕೂಡ ಫಿಫಾ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಎಂದೇ ಪರಿಗಣಿಸಿದೆ. ಹೀಗಾಗಿ ಈ ಎಲ್ಲಾ ಸಮಸ್ಯೆಗಳು ಬೇಗನೆ ಇತ್ಯರ್ಥವಾದರೆ ಮಾತ್ರ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ತನ್ನ ಮೇಲಿನ ಅಮಾನತನ್ನು ತೆರವುಗೊಳಿಸಲು ಪ್ರಯತ್ನಿಸಬಹುದು.

Published On - 12:22 pm, Tue, 16 August 22

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ