6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾ ಪರ ಪದಾರ್ಪಣೆ..?

India vs Zimbabwe: ಜಿಂಬಾಬ್ವೆ ಸರಣಿಗೆ ಭಾರತ ತಂಡ: ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್.

6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾ ಪರ ಪದಾರ್ಪಣೆ..?
rahul tripathi
TV9kannada Web Team

| Edited By: Zahir PY

Aug 16, 2022 | 1:25 PM

ಭಾರತ-ಜಿಂಬಾಬ್ವೆ (India vs Zimbabwe) ನಡುವಣ ಸರಣಿಯು ಆಗಸ್ಟ್ 18 ರಿಂದ ಶುರುವಾಗಲಿದೆ. 3 ಪಂದ್ಯಗಳ ಈ ಏಕದಿನ ಸರಣಿಯ ಮೂಲಕ ಟೀಮ್ ಇಂಡಿಯಾ (Team India) ಪರ ಯುವ ಆಟಗಾರ ರಾಹುಲ್ ತ್ರಿಪಾಠಿ (Rahul Tripathi)  ಪಾದರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಐಪಿಎಲ್ 2022 ರಲ್ಲಿ ಅದ್ಭುತ ಪ್ರದರ್ಶನದ ನಂತರ ತ್ರಿಪಾಠಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದರು. ಐರ್ಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದರೂ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಜಿಂಬಾಬ್ವೆ ವಿರುದ್ದದ ಸರಣಿಯ ಮೂಲಕ ಟೀಮ್ ಇಂಡಿಯಾ ಪರ ರಾಹುಲ್ ತ್ರಿಪಾಠಿ ಚೊಚ್ಚಲ ಪಂದ್ಯವಾಡಲಿದ್ದಾರೆ ಎಂದು ವರದಿಯಾಗಿದೆ.

ಬಿಸಿಸಿಐ ಮೂಲಗಳ ಪ್ರಕಾರ ರಾಹುಲ್ ತ್ರಿಪಾಠಿ 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ. ಏಕೆಂದರೆ ಆರಂಭಿಕರಾಗಿ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಆಡಲಿದ್ದಾರೆ. ಹೀಗಾಗಿ ಶುಭ್​ಮನ್ ಗಿಲ್ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಕಂಡು ಬರಲಿದೆ. ಅದರಂತೆ ರಾಹುಲ್ ತ್ರಿಪಾಠಿಗೆ ಮೂರನೇ ಸ್ಥಾನ ನೀಡಿ, ಗಿಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವ ಬಗ್ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚರ್ಚಿಸಿದೆ ಎಂದು ವರದಿಯಾಗಿದೆ.

ಐಪಿಎಲ್​ನಲ್ಲೂ ಆರಂಭಿಕ ಹಾಗೂ ಮೂರನೇ ಕ್ರಮಾಂಕದಲ್ಲಿ ಆಡಿದ ಅನುಭವವನ್ನು ಹೊಂದಿರುವ ತ್ರಿಪಾಠಿಗೆ ಮೊದಲ ಪಂದ್ಯದಲ್ಲೇ ಒನ್​ಡೌನ್​ ಕ್ರಮಾಂಕವನ್ನು ನೀಡುವ ಸಾಧ್ಯತೆ ಹೆಚ್ಚು. ಇನ್ನು ಲಿಸ್ಟ್ ಎ ವೃತ್ತಿಜೀವನದಲ್ಲಿ 1209 ರನ್ ಕಲೆಹಾಕಿರುವ ತ್ರಿಪಾಠಿ ಐಪಿಎಲ್​ ಮೂಲಕ ಬೆಳಕಿಗೆ ಬಂದ ಆಟಗಾರ.

ಐಪಿಎಲ್​ನಲ್ಲಿ ಕೆಕೆಆರ್ ಹಾಗೂ ಎಸ್​ಆರ್​ಹೆಚ್​ ಪರ ಆಡಿರುವ ರಾಹುಲ್ ತ್ರಿಪಾಠಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಇನ್ನು ಐಪಿಎಲ್ 2022 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ 8 ಇನ್ನಿಂಗ್ಸ್‌ಗಳಲ್ಲಿ 228 ರನ್ ಗಳಿಸುವ ಮೂಲಕ ಮಿಂಚಿದ್ದರು. ಇದೇ ಕಾರಣದಿಂದಾಗಿ ತ್ರಿಪಾಠಿಯನ್ನು ಐರ್ಲೆಂಡ್ ವಿರುದ್ದದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಇದೀಗ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಜಿಂಬಾಬ್ವೆ ವಿರುದ್ದದ ಸರಣಿಗೂ ಆಯ್ಕೆಯಾಗಿದ್ದಾರೆ.

ಒಂದೇ ಓವರ್​ನಲ್ಲಿ 6 ಸಿಕ್ಸ್​: ರಾಹುಲ್ ತ್ರಿಪಾಠಿ ದೇಶೀಯ ಅಂಗಳದ ಕ್ಲಬ್ ಪಂದ್ಯಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಾ ಹೆಸರುಗಳಿಸಿದ ಆಟಗಾರ. ಈ ಹಿಂದೊಮ್ಮೆ 6 ಎಸೆತಗಳಲ್ಲಿ 6 ಸಿಕ್ಸ್ ಸಿಡಿಸುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಅಷ್ಟೇ ಅಲ್ಲದೆ ಕ್ಲಬ್ ಕ್ರಿಕೆಟ್​ನಲ್ಲಿ ಎರಡು ಬಾರಿ ಒಂದು ಓವರ್​ನಲ್ಲಿ 6 ಸಿಕ್ಸ್​ ಬಾರಿಸಿದ ಬ್ಯಾಟ್ಸ್​ಮನ್ ಎಂಬ ವಿಶೇಷ ದಾಖಲೆಯೊಂದು ಕೂಡ ರಾಹುಲ್ ತ್ರಿಪಾಠಿ ಹೆಸರಿನಲ್ಲಿದೆ. ಇದೀಗ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ತ್ರಿಪಾಠಿ ಚೊಚ್ಚಲ ಬಾರಿಗೆ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ.

ಜಿಂಬಾಬ್ವೆ ಸರಣಿಗೆ ಭಾರತ ತಂಡ: ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada