ಕೊಹ್ಲಿ ಅಥವಾ ಬಾಬರ್, ಯಾರು ಬೆಸ್ಟ್​? ಶಾಹೀನ್ ಅಫ್ರಿದಿ ನೀಡಿದ ಉತ್ತರ ಹೀಗಿದೆ

| Updated By: ಝಾಹಿರ್ ಯೂಸುಫ್

Updated on: Jun 12, 2022 | 3:56 PM

Shaheen Afridi: ಬಾಬರ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ 103 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು ಹೊಸ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು.

ಕೊಹ್ಲಿ ಅಥವಾ ಬಾಬರ್, ಯಾರು ಬೆಸ್ಟ್​? ಶಾಹೀನ್ ಅಫ್ರಿದಿ ನೀಡಿದ ಉತ್ತರ ಹೀಗಿದೆ
virat kohli,shaheen afridi, babar azam
Follow us on

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್. ಕಿಂಗ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದರೆ, ಕೆಲ ದಿನಗಳಿಂದ ಕಳಪೆ ಫಾರ್ಮ್‌ನಲ್ಲಿದ್ದಾರೆ. ಅಷ್ಟೇ ಅಲ್ಲದೆ ಕಳೆದ 3 ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ ಪಾಕಿಸ್ತಾನದ ನಾಯಕ ಬಾಬರ್ ಆಜಂ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಹೀಗಾಗಿಯೇ ಕೊಹ್ಲಿ ಹಾಗೂ ಬಾಬರ್ ನಡುವೆ ಹೋಲಿಕೆಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಅದರಲ್ಲೂ ಯಾರು ಅತ್ಯುತ್ತಮ ಆಟಗಾರ ಎಂಬ ಪ್ರಶ್ನೆಗಳು ಸದಾ ಚರ್ಚೆಯಲ್ಲಿರುತ್ತದೆ. ಇದೀಗ ಅಂತಹದೊಂದು ಪ್ರಶ್ನೆ ಪಾಕಿಸ್ತಾನ್ ತಂಡದ ವೇಗಿ ಶಾಹೀನ್ ಅಫ್ರಿದಿ ಮುಂದಿಡಲಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಶಾಹೀನ್ ಅಫ್ರಿದಿ ‘ವಿರಾಟ್ ಕೊಹ್ಲಿ ಮತ್ತು ಬಾಬರ್ ಆಜಂ ನಡುವೆ ಹೋಲಿಕೆ ಅನ್ಯಾಯವಾಗುತ್ತದೆ. ಕೊಹ್ಲಿಗೆ 33 ವರ್ಷ ಮತ್ತು ಬಾಬರ್‌ಗೆ 27 ವರ್ಷ. ಬಾಬರ್ ಕಳೆದ ಕೆಲವು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಈಗಾಗಲೇ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಸಾಬೀತುಪಡಿಸಲು ಹೆಚ್ಚೇನು ಉಳಿದಿಲ್ಲ. ವಿರಾಟ್ ಕೊಹ್ಲಿ 458 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೆ, ಬಾಬರ್ ಅಜಮ್ 202 ಪಂದ್ಯವಾಡಿದ್ದಾರೆ. ಅಂದರೆ ಅರ್ಧಕ್ಕಿಂತ ಕಡಿಮೆ ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಹೋಲಿಕೆ ಮಾಡುವುದು ತಪ್ಪು ಎಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಇಬ್ಬರಲ್ಲಿ ಯಾರು ಬೆಸ್ಟ್ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಶಾಹೀನ್ ಅಫ್ರಿದಿ, ” ನಾನು ಇಬ್ಬರನ್ನೂ ಇಷ್ಟಪಡುತ್ತೇನೆ. ಹೀಗಾಗಿ ಇಬ್ಬರೂ ಅತ್ಯುತ್ತಮರು ಎಂದಷ್ಟೇ ಹೇಳಬಲ್ಲೆ ಎಂದರು. ಏಕೆಂದರೆ ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರು ಭಾರತ ತಂಡದ ಬೆನ್ನೆಲುಬು. ಅದೇ ರೀತಿ ಬಾಬರ್ ಕೂಡ ಅತ್ಯುತ್ತಮ ಆಟಗಾರನಾಗಿ ಪಾಕ್ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ನಾನು ಅತ್ಯುತ್ತಮರಲ್ಲಿ ಇಬ್ಬರನ್ನೂ ಆಯ್ಕೆ ಮಾಡುತ್ತೇನೆ ಎಂದು ಶಾಹೀನ್ ಅಫ್ರಿದಿ ಹೇಳಿದ್ದಾರೆ.

ಇದನ್ನೂ ಓದಿ
KL Rahul: ಗಾಯ ಗಂಭೀರವಲ್ಲ..ಜಿಮ್​ನಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್..!
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಇನ್ನು ಟಿ20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿಯ ವಿಕೆಟ್ ಪಡೆದಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ ಶಾಹೀನ್, ಅಂದು ನಾನು ತಂತ್ರಗಳ ಮೂಲಕ ಕೊಹ್ಲಿಯನ್ನು ಔಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ. ಏಕೆಂದರೆ ಅವತ್ತು ಲೆಗ್ ಸೈಡ್ ಬೌಂಡರಿ ಚಿಕ್ಕದಾಗಿತ್ತು, ಸುಮಾರು 60-65 ಮೀಟರ್ ಮಾತ್ರವಿತ್ತು. ನಾನು ವಿರಾಟ್ ಕೊಹ್ಲಿ ಕಡೆಗೆ ನೇರವಾಗಿ ಮತ್ತು ವೇಗವಾಗಿ ಬೌಲಿಂಗ್ ಮಾಡಿದ್ದರೆ, ಅವರು ಫ್ಲಿಕ್ ಮಾಡುತ್ತಿದ್ದರು ಅಥವಾ ರನ್​ಗಳಿಸುತ್ತಿದ್ದರು. ಹೀಗಾಗಿ ನಾನು ನಿಧಾನವಾದ ಬೌನ್ಸರ್ ಅನ್ನು ಬೌಲ್ ಮಾಡಲು ಬಯಸಿದ್ದೆ. ಇದರಿಂದ ಕೊಹ್ಲಿಗೆ ಲೆಗ್ ಸೈಡ್​ನತ್ತ ಬಾರಿಸಲು ಕಷ್ಟವಾಗುತ್ತಿತ್ತು. ಆ ಮೂಲಕ ಅವರ ವಿಕೆಟ್ ಪಡೆದಿದ್ದೆ ಎಂದು ತಿಳಿಸಿದರು.

ಸದ್ಯ ಬಾಬರ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ 103 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು ಹೊಸ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು. ಬಾಬರ್ ಆಜಂ ನಾಯಕನಾಗಿ ಏಕದಿನದಲ್ಲಿ ವೇಗವಾಗಿ 1000 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಿದ್ದಾರೆ. ನಾಯಕನಾಗಿ ಕೊಹ್ಲಿ 17 ಏಕದಿನ ಪಂದ್ಯಗಳಲ್ಲಿ 1000 ರನ್ ಪೂರೈಸಿ ದಾಖಲೆ ಬರೆದಿದ್ದರು. ಆದರೀಗ ಕೇವಲ 13 ಪಂದ್ಯಗಳ ಮೂಲಕ 1000 ರನ್​ ಬಾರಿಸಿ ಬಾಬರ್ ಆಜಂ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಿಂದ ಹೊರಗುಳಿದಿದ್ದು, ಇಂಗ್ಲೆಂಡ್​ ವಿರುದ್ದದ ಸರಣಿಯ ಮೂಲಕ ಟೀಮ್ ಇಂಡಿಯಾಗೆ ಮರಳಲಿದ್ದಾರೆ. ಅಲ್ಲದೆ ಈ ಸರಣಿಯಲ್ಲಿ ತಮ್ಮ ಫಾರ್ಮ್​ ಪ್ರದರ್ಶಿಸುವ ಮೂಲಕ ಟೀಕಾಗಾರರಿಗೆ ಉತ್ತರ ನೀಡುವ ವಿಶ್ವಾಸದಲ್ಲಿದ್ದಾರೆ.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.