ದಾಂಪತ್ಯ ಜೀವನಕ್ಕೆ ಕಾಲಿಟ್ಟ CSK ಆಟಗಾರ..!
ಐಪಿಎಲ್ 2021 ರ ಮಿನಿ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಹರಿ ನಿಶಾಂತ್ ಅವರನ್ನು ಮೂಲ ಬೆಲೆಗೆ ಖರೀದಿಸಿತು. ಈ ಬಾರಿಯ ಐಪಿಎಲ್‌ನ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ ಸಿಎಸ್‌ಕೆ ಅವರನ್ನು 20 ಲಕ್ಷ ರೂ ಮೂಲ ಬೆಲೆಗೆ ಖರೀದಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಆಟಗಾರ ಸಿ ಹರಿ ನಿಶಾಂತ್ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. CSK ಫ್ರಾಂಚೈಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ನವದಂಪತಿಗೆ ಅಭಿನಂದಿಸಿದೆ. ನಿಶಾಂತ್ ಇನ್ನೂ ಐಪಿಎಲ್‌ಗೆ ಪದಾರ್ಪಣೆ ಮಾಡಿಲ್ಲ. ಆದರೆ ಅವರು ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡದ ಖಾಯಂ ಸದಸ್ಯರಾಗಿದ್ದಾರೆ. ಈ ಬಾರಿ ಕೂಡ ಸಿಎಸ್‌ಕೆ ತಂಡವು ಹರಿ ನಿಶಾಂತ್ ಅವರನ್ನು ಆರಂಭಿಕ ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಆದರೆ ತಂಡದಲ್ಲಿ ರುತುರಾಜ್ ಗಾಯಕ್ವಾಡ್ ರಾಬಿನ್ ಉತ್ತಪ್ಪ ಹಾಗೂ ಡೆವೊನ್ ಕಾನ್ವೇ ಆರಂಭಿಕರಾಗಿರುವ ಕಾರಣ ನಿಶಾಂತ್ಗೆ ಅವಕಾಶ ಸಿಗಲಿಲ್ಲ. ಇದೀಗ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಹರಿ ನಿಶಾಂತ್ ದಾಂಪತ್ಯ ಜೀವನದ ಇನಿಂಗ್ಸ್ ಆರಂಭಿಸಿದ್ದಾರೆ.
Hari got hitched! ? Here’s to the one where we pronounce you “Super Couple!“ ??#WhistlePodu #Yellove ? @harinishaanth16 pic.twitter.com/J8uh9BVrbh
ಇದನ್ನೂ ಓದಿ— Chennai Super Kings (@ChennaiIPL) June 10, 2022
ಈ ಶುಭ ಸಮಾರಂಭದ ವೀಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ನವದಂಪತಿಗಳಿಗೆ ಯೆಲ್ಲೊ ಆರ್ಮಿಯ ಶುಭಾಶಯ ತಿಳಿಸಿದೆ. 25 ವರ್ಷದ ಹರಿ ನಿಶಾಂತ್ 2020-21ರಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆ ಟೂರ್ನಿಯಲ್ಲಿ 41 ರ ಸರಾಸರಿಯಲ್ಲಿ ಒಟ್ಟು 246 ರನ್ ಗಳಿಸಿದರು. ಇದಲ್ಲದೇ ಫೈನಲ್ ನಲ್ಲಿ ನಿಶಾಂತ್ 35 ರನ್ ಗಳಿಸಿ ಮಿಂಚಿದ್ದರು. ತಮಿಳುನಾಡು ಪರ ತಮ್ಮ ಬಾಲ್ಯದ ಗೆಳೆಯ ಮತ್ತು CSK ಬ್ಯಾಟ್ಸ್‌ಮನ್ ಎನ್ ಜಗದೀಸನ್ ಅವರೊಂದಿಗೆ ಅಗ್ರ ಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡುತ್ತಾರೆ.
ಐಪಿಎಲ್ 2021 ರ ಮಿನಿ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಹರಿ ನಿಶಾಂತ್ ಅವರನ್ನು ಮೂಲ ಬೆಲೆಗೆ ಖರೀದಿಸಿತು. ಈ ಬಾರಿಯ ಐಪಿಎಲ್‌ನ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ ಸಿಎಸ್‌ಕೆ ಅವರನ್ನು 20 ಲಕ್ಷ ರೂ ಮೂಲ ಬೆಲೆಗೆ ಖರೀದಿಸಿದೆ. ಆದರೆ ಸಿಎಸ್‌ಕೆ ಪರ ಪದಾರ್ಪಣೆ ಮಾಡುವ ಅವಕಾಶವನ್ನು ಯುವ ಆಟಗಾರ ಎದುರು ನೋಡುತ್ತಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.