PAK vs AUS: ಮೈದಾನದಲ್ಲೇ ಪಾಕಿಸ್ತಾನ ಬೌಲರ್​ನ ಮೈಚಳಿ ಬಿಡಿಸಿದ ಡೇವಿಡ್ ವಾರ್ನರ್: ವಿಡಿಯೋ ನೋಡಿ

Shaheen Afridi and David Warner: ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ನ ಮೂರನೇ ದಿನದಾಟದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್ ವಾರ್ನರ್ ಮತ್ತು ಪಾಕಿಸ್ತಾನ ಬೌಲರ್ ಶಾಹಿನ್ ಶಾ ಅಫ್ರಿದಿ ನಡುವೆ ದೊಡ್ಡ ಜಗಳ ನಡೆಯುವುದರಲ್ಲಿತ್ತು.

PAK vs AUS: ಮೈದಾನದಲ್ಲೇ ಪಾಕಿಸ್ತಾನ ಬೌಲರ್​ನ ಮೈಚಳಿ ಬಿಡಿಸಿದ ಡೇವಿಡ್ ವಾರ್ನರ್: ವಿಡಿಯೋ ನೋಡಿ
Warner and Shaheen Afridi PAK vs AUS
Follow us
TV9 Web
| Updated By: Vinay Bhat

Updated on: Mar 24, 2022 | 10:18 AM

ಪಾಕಿಸ್ತಾನ ಪ್ರವಾಸ ಬೆಳೆಸಿರುವ ಆಸ್ಟ್ರೇಲಿಯಾ (Pakistan vs Australia) ಕ್ರಿಕೆಟ್ ತಂಡ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಈಗಾಗಲೇ ನಡೆದಿರುವ ಎರಡು ಪಂದ್ಯ ಡ್ರಾ ಮೂಲಕ ಅಂತ್ಯಕಂಡಿದ್ದರೆ ಸದ್ಯ ಲಾಹೋರ್​ನಲ್ಲಿ ಸಾಗುತ್ತಿರುವ ಮೂರನೇ ಟೆಸ್ಟ್​ ಕೂಡ ರೋಚಕ ಘಟ್ಟದತ್ತ ಸಾಗುತ್ತಿದೆ. ಆಸ್ಟ್ರೇಲಿಯಾವನ್ನು 391 ರನ್​ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ 268 ರನ್​ಗೆ ಸರ್ವಪತನ ಕಂಡಿತು. ಉತ್ತಮ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಶುರು ಮಾಡಿರುವ ಪ್ಯಾಟ್ ಕಮಿನ್ಸ್ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿದೆ. ಕಾಂಗರೂ ಪಡೆ ಒಟ್ಟು 134 ರನ್​ಗಳ ಮುನ್ನಡೆ ಸಾಧಿಸಿದೆ. ಇದರ ನಡುವೆ ಮೂರನೇ ದಿನದಾಟದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್ ವಾರ್ನರ್ (David Warner) ಮತ್ತು ಪಾಕಿಸ್ತಾನ ಬೌಲರ್ ಶಾಹಿನ್ ಶಾ ಅಫ್ರಿದಿ (Shaheen Shah Afridi) ನಡುವೆ ದೊಡ್ಡ ಜಗಳ ನಡೆಯುವುದರಲ್ಲಿತ್ತು.

ಹೌದು, ಪಾಕಿಸ್ತಾನ ತಂಡವನ್ನು 268 ರನ್​ಗೆ ಆಲೌಟ್ ಮಾಡಿ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಲು ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಕಣಕ್ಕಿಳಿದರು. ದಿನದಾಟದ ಅಂತಿಮ 3ನೇ ಓವರ್ ಬೌಲಿಂಗ್ ಮಾಡಲು ಬಂದ ಪಾಕ್ ಸ್ಟಾರ್ ಬೌಲರ್ ಶಾಹಿನ್ ಶಾ ಅಫ್ರಿದಿಯ ಎರಡನೇ ಎಸೆತದಲ್ಲಿ ವಾರ್ನರ್ ಚೆಂಡನ್ನು ಬೌಂಡರಿಗೆ ಅಟ್ಟಿದರು. ಮೂರನೇ ಎಸೆತವನ್ನು ಅಫ್ರಿದಿ ಶಾರ್ಟ್​​ ಬಾಲ್ ಎಸೆದರು. ವಾರ್ನರ್ ಚೆಂಡನ್ನು ಡಿಫೆಂಡ್ ಮಾಡಿ ಕೊಂಚ ಮುಂದೆ ಬಂದರು. ಆಗ ಅಫ್ರಿದಿ ಚೆಂಡು ಕೈಯಲ್ಲಿ ಹಿಡಿದು ಕೊಂಡು ವಾರ್ನರ್ ಬಳಿ ಬಂದಾಗ ನೋ ರನ್ ಎಂದು ಕೂಗಿದರು. ಇದೇವೇಳೆ ಅಫ್ರಿದಿ ನೇರವಾಗಿ ವಾರ್ನರ್​ ಹತ್ತಿರ ಬಂದು ಎದುರು ನಿಂತರು. ಹೆದರದ ವಾರ್ನರ್ ಕೂಡ ಅಫ್ರಿದಿ ಎದುರಿಗೆ ನಿಂತು  ಮೈಗೆ ಮೈ ತಾಕಿಸಿಕೊಂಡರು. ಬಳಿಕ ತಮಾಷೆಯಾಗಿ ನಕ್ಕರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 133.3 ಓವರ್​ನಲ್ಲಿ 391 ರನ್​ಗೆ ಆಲೌಟ್ ಆಯಿತು. ಉಸ್ಮಾನ್ ಖ್ವಾಜಾ 219 ಎಸೆತಗಳಲ್ಲಿ 91 ರನ್ ಗಳಿಸಿದರೆ, ಕ್ಯಾಮೆರಾನ್ ಗ್ರೀನ್ 163 ಎಸೆತಗಳಲ್ಲಿ 79 ರನ್, ಅಲೆಕ್ಸ್ ಹೇಲ್ಸ್ 67 ಮತ್ತು ಸ್ಟೀವ್ ಸ್ಮಿತ್ 59 ರನ್ ಬಾರಿಸಿದರು. ಪಾಕಿಸ್ತಾನ ಪರ ಶಾಹಿನ್ ಶಾ ಅಫ್ರಿದಿ ಹಾಗೂ ನಸೀಂ ಶಾ ತಲಾ 4 ವಿಕೆಟ್ ಕಿತ್ತು ಮಿಂಚಿದರು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆರಂಭದಲ್ಲೇ ಪಾಕ್ ಇಮಾಮ್ ಉಲ್ ಹಖ್ (11) ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟ್​ಗೆ ಅದ್ಬುಲ್ ಶಫೀಖ್ ಮತ್ತು ಅಝರ್ ಅಲಿ 150 ರನ್​ಗಳ ಅಮೋಘ ಜೊತೆಯಾಟ ಆಡಿದರು. ಶಫೀಖ್ 228 ಎಸೆತಗಳಲ್ಲಿ 81 ರನ್ ಗಳಿಸಿದರೆ, ಅಝರ್ ಅಲಿ 208 ಎಸೆತಗಳಲ್ಲಿ 78 ರನ್ ಬಾರಿಸಿದರು. ಬಳಿಕ ಬಂದ ನಾಯಕ ಬಾಬರ್ ಅಜಾಮ್ 131 ಎಸೆತಗಳಲ್ಲಿ 67 ರನ್ ಸಿಡಿಸಿ ಔಟಾದರು.

4 ರನ್​​ಗೆ 5 ವಿಕೆಟ್ ಪತನ:

256 ರನ್​​ಗೆ 5ನೇ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 268 ರನ್​ಗೆ ಆಲೌಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದರಲ್ಲೂ 268 ರನ್​​ ಗಳಿಸಿದ್ದಾಗ ಬರೋಬ್ಬರಿ 4 ವಿಕೆಟ್ ಪತನಗೊಂಡಿತು. ಅಂತಿಮವಾಗಿ ಪಾಕ್ 116.4 ಓವರ್​ನಲ್ಲಿ 268 ರನ್​ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ಪರ ನಾಯಕ ಪ್ಯಾಟ್ ಕಮಿನ್ಸ್ 5 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದರು. 123 ರನ್​ಗಳ ಉತ್ತಮ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿದೆ.

IPL 2022: ಹೊಸ ದಾಖಲೆ: ಬರೋಬ್ಬರಿ 120 ದೇಶಗಳಲ್ಲಿ ಐಪಿಎಲ್ 2022 ನೇರಪ್ರಸಾರ

Venkatesh Iyer: ಬರೋಬ್ಬರಿ 204 ರನ್: ಐಪಿಎಲ್ ಅಭ್ಯಾಸ ಪಂದ್ಯದಲ್ಲಿ ಕೆಕೆಆರ್ ಬ್ಯಾಟರ್​ನ ಸಿಡಿಲಬ್ಬರದ ಆಟ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ