Shane warne: ಮರಣೋತ್ತರ ಪರೀಕ್ಷೆಯಲ್ಲಿ ಹೊರಬಿತ್ತು ಶೇನ್ ವಾರ್ನ್​ ಸಾವಿನ ರಹಸ್ಯ! ಥಾಯ್ ಪೊಲೀಸರು ಹೇಳಿದ್ದಿದು

Shane warne: ಆಸ್ಟ್ರೇಲಿಯಾದ ಕೌನ್ಸೆಲರ್‌ ಕಚೇರಿಗೆ ವಾರ್ನ್‌ ಮೃತದೇಹವನ್ನು ರವಾನಿಸಿ, ಅಲ್ಲಿಂದ ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಥಾಯ್‌ ಪೊಲೀಸ್‌ನ ವಕ್ತಾರರು ಹೇಳಿಕೆ ನೀಡಿದ್ದಾರೆ. ಈ ಮೂಲಕ ವಾರ್ನ್​ ಸಾವಿನ ಸುದ್ದಿಯ ಹಿಂದಿದ್ದ ಊಹಾಪೋಹಗಳಿಗೆ ತೆರೆಬಿದ್ದಂತ್ತಾಗಿದೆ.

Shane warne: ಮರಣೋತ್ತರ ಪರೀಕ್ಷೆಯಲ್ಲಿ ಹೊರಬಿತ್ತು ಶೇನ್ ವಾರ್ನ್​ ಸಾವಿನ ರಹಸ್ಯ! ಥಾಯ್ ಪೊಲೀಸರು ಹೇಳಿದ್ದಿದು
ಶೇನ್ ವಾರ್ನ್
Follow us
TV9 Web
| Updated By: ಪೃಥ್ವಿಶಂಕರ

Updated on:Mar 07, 2022 | 4:37 PM

ಕ್ರಿಕೆಟ್​ ದಿಗ್ಗಜ ಶೇನ್​ ವಾರ್ನ್ (Shane Warne)​ ಇನ್ನಿಲ್ಲ ಎಂಬುದನ್ನು ನಂಬಲು ಅವರ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. 52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅವರು ಮೃತಪಟ್ಟರು (Shane Warne Death) ಎಂಬ ಸುದ್ದಿ ಬರಸಿಡಿಲಿನಂತೆ ಬಂದು ಎರಗಿದೆ. ಜನಸಾಮಾನ್ಯರು ಮಾತ್ರವಲ್ಲದೇ ಮನರಂಜನಾ ಲೋಕದ ಘಟಾನುಘಟಿಗಳು ಕೂಡ ಶೇನ್​ ವಾರ್ನ್​ ಅವರಿಗೆ ಅಭಿಮಾನಿಗಳಾಗಿದ್ದರು. ಅವರ ಸ್ಪಿನ್​ ಜಾದೂ ಕಂಡು ಮನಸೋಲದವರೇ ಇಲ್ಲ.​ ವಾರ್ನ್ ಹೃದಯಾಘಾತದಿಂದ ನಿಧನರಾಗಿರುವುದಕ್ಕೆ ವಿಶ್ವಾದ್ಯಂತ ಇರುವ ಅವರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಕ್ರಿಕೆಟ್​ ಲೋಕದ ಅನೇಕ ದಿಗ್ಗಜರು ಶೇನ್​ ವಾರ್ನ್​ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ವಾರ್ನ್​ ಅವರ ಸಾವಿನ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದು ಉಂಟು. ಹೀಗಾಗಿ ವಾರ್ನ್​ ಅವರ ಮರೋಣತ್ತರ ಪರೀಕ್ಷೆಯ ವರದಿಗಾಗಿ ಇಡೀ ವಿಶ್ವವೇ ಕಾಯುತ್ತಿತ್ತು. ಈಗ ಆ ಕಾಯುವಿಕೆಗೆ ತೆರೆಬಿದ್ದಿದೆ.

ಥಾಯ್‌ ಪೊಲೀಸರ ಹೇಳಿಕೆಯಿದು ಕಳೆದ ಶುಕ್ರವಾರ ಮೃತ ಪಟ್ಟ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾರ್ನ್‌ ಅವರ ಶವಪರೀಕ್ಷೆ ವರದಿ ಕೊನೆಗೂ ಹೊರಬಂದಿದೆ. ಕ್ರಿಕೆಟ್ ಸೂಪರ್‌ಸ್ಟಾರ್ ಶೇನ್ ವಾರ್ನ್ ಅವರು ಸಹಜ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ಶವಪರೀಕ್ಷೆ ವರದಿಯನ್ನು ಉಲ್ಲೇಖಿಸಿ ಥಾಯ್ ಪೊಲೀಸರು ಸೋಮವಾರ ತಿಳಿಸಿದ್ದಾರೆ. ರಜೆ ದಿನಗಳನ್ನು ಕಳೆಯುವ ಸಲುವಾಗಿ ಥಾಯ್ಲೆಂಡ್‌ಗೆ ತೆರಳಿದ್ದ ವಾರ್ನ್‌, ಶುಕ್ರವಾರ ಮೃತಪಟ್ಟಿದ್ದರು. ಇದರಲ್ಲಿ ಫೋರೆನ್ಸಿಕ್ ವೈದ್ಯರು ಸಾವು ನೈಸರ್ಗಿಕ ಕಾರಣಗಳಿಂದ ಸಂಭವಿಸಿದೆ ಎಂದು ತೀರ್ಮಾನಿಸಿದ್ದಾರೆ ಎಂದು ಉಪ ರಾಷ್ಟ್ರೀಯ ಪೊಲೀಸ್ ವಕ್ತಾರ ಕ್ರಿಸ್ಸಾನಾ ಪಟ್ಟನಾಚರೋನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿರುವ ಅಂಶಗಳ ಪ್ರಕಾರ ಶೇನ್‌ ವಾರ್ನ್‌ ಸಹಜ ಸಾವಿಗೀಡಾಗಿದ್ದಾರೆ ಎಂದು ಅವರ ಕುಟುಂಬದವರಿಗೆ ತಿಳಿಸಲಾಗಿದೆ. ಆಸ್ಟ್ರೇಲಿಯಾದ ಕೌನ್ಸೆಲರ್‌ ಕಚೇರಿಗೆ ವಾರ್ನ್‌ ಮೃತದೇಹವನ್ನು ರವಾನಿಸಿ, ಅಲ್ಲಿಂದ ಕುಟುಂಬದವರಿಗೆ ಒಪ್ಪಿಸಲಾಗುತ್ತದೆ ಎಂದು ಥಾಯ್‌ ಪೊಲೀಸ್‌ನ ವಕ್ತಾರರು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರ ಸಾವಿನ ಸುದ್ದಿಯ ಹಿಂದಿದ್ದ ಊಹಾಪೋಹಗಳಿಗೆ ತೆರೆಬಿದ್ದಂತ್ತಾಗಿದೆ.

52 ವರ್ಷ ವಯಸ್ಸಿನ ವಾರ್ನ್ ಅವರ ಅನಿರೀಕ್ಷಿತ ಸಾವು ಪ್ರಧಾನ ಮಂತ್ರಿಗಳು, ರಾಕ್ ಸ್ಟಾರ್‌ಗಳು ಮತ್ತು ಸಹ ಕ್ರೀಡಾಪಟುಗಳಿಂದ ದುಃಖದ ಸುರಿಮಳೆಯನ್ನು ಉಂಟುಮಾಡಿತು. ಶುಕ್ರವಾರದಂದು ಸಮುಜನಾ ರೆಸಾರ್ಟ್ ವಿಲ್ಲಾದಲ್ಲಿ ಪ್ರಜ್ಞಹೀನರಾಗಿ ಬಿದ್ದಿದ್ದ ವಾರ್ನ್ ಅವರನ್ನು ಸಂಜೆ 6:00 ಗಂಟೆಗೆ (1100 GMT) ಥಾಯ್ ಇಂಟರ್‌ನ್ಯಾಶನಲ್ ಹಾಸ್ಪಿಟಲ್ ಸಮುಯಿಗೆ ಕರೆದೊಯ್ಯಲಾಯಿತು. ಆದರೆ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಅವರನ್ನು ಬದುಕಿಸಲಾಗಲಿಲ್ಲ ಎಂದು ಅವರ ಆಪ್ತವಲಯ ಹೇಳಿಕೆ ನೀಡಿತ್ತು.

ವಾರ್ನ್​ ವೃತ್ತಿ ಬದುಕು ಶೇನ್ ವಾರ್ನ್ ಅವರು 1992 ರಲ್ಲಿ ಭಾರತದ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಟೆಸ್ಟ್‌ನಲ್ಲಿ ಕೇವಲ 2 ವಿಕೆಟ್‌ಗಳನ್ನು ಪಡೆದರು. ಆದರೆ ನಂತರ ಅವರ ಪ್ರತಿಭೆ ಅನಾವರಣಗೊಂಡಿತ್ತು. ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗಳು ಅವರ ಸ್ಪಿನ್‌ ಜಾದೂಗೆ ಬಲಿಯಾಗಿ ಹೋಗಿದ್ದರು. ಸುಮಾರು 16 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ, ವಾರ್ನ್ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರು. ತಮ್ಮ 145 ಟೆಸ್ಟ್ ವೃತ್ತಿಜೀವನದಲ್ಲಿ 708 ವಿಕೆಟ್‌ಗಳನ್ನು ಪಡೆದು ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ (800 ವಿಕೆಟ್) ನಂತರ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್‌ಗಳನ್ನು ಪಡೆದಿದ್ದಾರೆ. ಜೊತೆಗೆ 1999 ರ ವಿಶ್ವಕಪ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಹಾಗೆಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದರು.

ಇದನ್ನೂ ಓದಿ:Shane Warne Demise: ಅಬ್ಬಬ್ಬಾ..! ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಜೀವಿತಾವಧಿಯಲ್ಲಿ ಗಳಿಸಿದ ಆಸ್ತಿ ಇಷ್ಟೊಂದಾ?

Published On - 4:35 pm, Mon, 7 March 22