IND vs NZ, T20 World Cup 2021: ಟೀಮ್ ಇಂಡಿಯಾಗೆ 6ನೇ ಬೌಲರ್ ಚಿಂತೆ: ಯಾರಿಗೆ ಸಿಗಲಿದೆ ಚಾನ್ಸ್​?

Shardul Thakur Or Hardik Pandya: ನ್ಯೂಜಿಲೆಂಡ್​ ವಿರುದ್ದದ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರುವ ಟೀಮ್ ಇಂಡಿಯಾ 6ನೇ ಬೌಲರ್ ಆಯ್ಕೆಯೊಂದಿಗೆ ಕಣಕ್ಕಿಳಿಯುವುದು ಖಚಿತ.

IND vs NZ, T20 World Cup 2021: ಟೀಮ್ ಇಂಡಿಯಾಗೆ 6ನೇ ಬೌಲರ್ ಚಿಂತೆ: ಯಾರಿಗೆ ಸಿಗಲಿದೆ ಚಾನ್ಸ್​?
Shardul Thakur -Hardik Pandya
Follow us
TV9 Web
| Updated By: ಝಾಹಿರ್ ಯೂಸುಫ್

Updated on:Oct 30, 2021 | 10:37 PM

ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ 28ನೇ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ. ಹೀಗಾಗಿಯೇ ಉಭಯ ತಂಡಗಳು ಕೂಡ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿಯಲಿದೆ. ಆದರೆ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ದ ಗೆಲ್ಲಲು ವಿಫಲರಾಗಿದ್ದ ಟೀಮ್ ಇಂಡಿಯಾದಲ್ಲಿ ಕೆಲ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಅದರಂತೆ ಟೀಮ್ ಇಂಡಿಯಾ ಮುಂದಿನ ಪಂದ್ಯದಲ್ಲಿ 6ನೇ ಬೌಲರ್​ ಅನ್ನು ಬಳಿಸಿಕೊಳ್ಳುವುದು ಬಹುತೇಕ ಖಚಿತ.

ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ 6ನೇ ಬೌಲಿಂಗ್ ಆಯ್ಕೆಯನ್ನು ಅಗತ್ಯತೆಯನ್ನು ಒಪ್ಪಿಕೊಂಡಿದ್ದಾರೆ. ಇದಾಗ್ಯೂ 6ನೇ ಬೌಲರ್ ಯಾರು ಎಂಬುದನ್ನು ಕೊಹ್ಲಿ ಸ್ಪಷ್ಟಪಡಿಸಿಲ್ಲ. ಮೊದಲ ಪಂದ್ಯದಲ್ಲಿ ವೇಗಿಗಳಾಗಿ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಹಾಗೂ ಜಸ್​ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದರು. ಇನ್ನು ಸ್ಪಿನ್ನರ್​ಗಳ ಜವಾಬ್ದಾರಿಯನ್ನು ರವೀಂದ್ರ ಜಡೇಜಾ ಹಾಗೂ ವರುಣ್ ಚಕ್ರವರ್ತಿ ನಿಭಾಯಿಸಿದ್ದರು. ಅದಾಗ್ಯೂ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಆಲ್​ರೌಂಡರ್ ಆಗಿ ಕಾಣಿಸಿಕೊಂಡರೂ ಬೌಲಿಂಗ್ ಮಾಡ್ತಿಲ್ಲ. ಹೀಗಾಗಿಯೇ ಪಾಕ್ ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾ 6ನೇ ಬೌಲರ್ ಸಮಸ್ಯೆಯನ್ನು ಎದುರಿಸಿತ್ತು.

ಇದೀಗ ಪಾಂಡ್ಯ ನೆಟ್ಸ್​​ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿರುವುದಾಗಿ ಕೊಹ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಒಂದೆರೆಡು ಓವರ್​ ಮಾಡಲು ಅವರು ಸಮರ್ಥರಾಗಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ದ ಪಾಂಡ್ಯ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಆದರೆ ಮತ್ತೊಂದೆಡೆ ಒಂದು ಅವಕಾಶಕ್ಕಾಗಿ ಶಾರ್ದೂಲ್ ಠಾಕೂರ್ ಕೂಡ ಎದುರು ನೋಡುತ್ತಿದ್ದಾರೆ. ಹಾಗಾಗಿ ಪ್ಲೇಯಿಂಗ್ 11ನಲ್ಲಿ 6ನೇ ಬೌಲರ್ ಆಗಿ ಪಾಂಡ್ಯ ಅಥವಾ ಶಾರ್ದೂಲ್ ಕಾಣಿಸಿಕೊಳ್ಳಬಹುದು.

ಒಂದು ತಂಡದಲ್ಲಿ 6 ಅಥವಾ 7 ಬೌಲರುಗಳ ಆಯ್ಕೆ ಇದ್ದಾಗ, ಆ ತಂಡವು ಸೋಲುವುದಿಲ್ಲ. ಹಾಗಾಗಿ ಮುಂದಿನ ಪಂದ್ಯಕ್ಕಾಗಿ ನಮಗೆ 6ನೇ ಬೌಲರ್ ಅಗತ್ಯವಿದೆ. ಅದು ಯಾರೆಂಬುದನ್ನು ಇನ್ನೂ ಕೂಡ ನಿರ್ಧರಿಸಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ತಂಡದ ಮುಂದೆ ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್​ ಆಯ್ಕೆಗಳಿರುವ ಸುಳಿವನ್ನು ಕೊಹ್ಲಿ ಬಿಟ್ಟು ಕೊಟ್ಟಿದ್ದಾರೆ.

ನ್ಯೂಜಿಲೆಂಡ್ ವಿರುದ್ದದ ಪ್ಲೇಯಿಂಗ್ 11 ನಲ್ಲಿ ಯಾರಿರಲಿದ್ದಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿರುವ ಕೊಹ್ಲಿ, ಶಾರ್ದೂಲ್ ಉತ್ತಮ ಸಾಮರ್ಥ್ಯ ಹೊಂದಿರುವ ಆಟಗಾರ. ಆತ ಕೂಡ ತಂಡದ ಬಲವನ್ನು ಹೆಚ್ಚಿಸಬಲ್ಲ. ಹೀಗಾಗಿ ಕೊನೆ ಕ್ಷಣದಲ್ಲಿ ಯಾರಿಗೆ ಬೇಕಾದರೂ ಅವಕಾಶ ಸಿಗಬಹುದು ಎಂದರು.

ಅದರಂತೆ ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಫುಲ್ ಫಿಟ್​ನೆಸ್ ಸಾಬೀತುಪಡಿಸದಿದ್ದರೆ, ಆಲ್​ರೌಂಡರ್ ಆಗಿ ಶಾರ್ದೂಲ್ ಠಾಕೂರ್ ಕಣಕ್ಕಿಳಿಯಬಹುದು. ಒಂದು ವೇಳೆ ಪಾಂಡ್ಯ ಒಂದೆರೆಡು ಓವರ್ ಮಾಡಲು ಸಮರ್ಥರಾಗಿದ್ದರೂ ಅನುಭವದ ಆಧಾರದ ಮೇಲೆ ಪಾಂಡ್ಯ ಅವರಿಗೆ ಮತ್ತೊಂದು ಚಾನ್ಸ್​ ನೀಡಬಹುದು. ಒಟ್ಟಿನಲ್ಲಿ ನ್ಯೂಜಿಲೆಂಡ್​ ವಿರುದ್ದದ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರುವ ಟೀಮ್ ಇಂಡಿಯಾ 6ನೇ ಬೌಲರ್ ಆಯ್ಕೆಯೊಂದಿಗೆ ಕಣಕ್ಕಿಳಿಯುವುದು ಖಚಿತ. ಆ ಅವಕಾಶ ಹಾರ್ದಿಕ್ ಪಾಂಡ್ಯಗೆ, ಇಲ್ಲ ಶಾರ್ದೂಲ್ ಠಾಕೂರ್​ಗೆ ಸಿಗಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?

ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ

ಇದನ್ನೂ ಓದಿ:  T20 World Cup 2021: ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ಖುಷಿಯಾಯ್ತು ಎಂದ ಪಾಕ್ ಕ್ರಿಕೆಟಿಗ

(Shardul Thakur Or Hardik Pandya? Who Plays For India vs New Zealand)

Published On - 9:50 pm, Sat, 30 October 21