Shikhar Dhawan: ರಣ ರೋಚಕ ಜಯದ ಬಳಿಕ ನಾಯಕ ಶಿಖರ್ ಧವನ್ ಏನು ಹೇಳಿದರು ನೋಡಿ

| Updated By: Vinay Bhat

Updated on: Jul 23, 2022 | 8:54 AM

IND vs WI, 1st ODI: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 3 ರನ್​ಗಳ ರೋಚಕ ಜಯ ಸಾಧಿಸಿದ ಬಳಿಕ ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ಮಾತನಾಡಿದ್ದು, ಏನು ಹೇಳಿದರು ನೋಡಿ.

Shikhar Dhawan: ರಣ ರೋಚಕ ಜಯದ ಬಳಿಕ ನಾಯಕ ಶಿಖರ್ ಧವನ್ ಏನು ಹೇಳಿದರು ನೋಡಿ
Shikhar Dhawan post match IND vs WI ODI
Follow us on

ಕೆರಿಬಿಯನ್ ಪ್ರವಾಸವನ್ನು ಭಾರತ (IND vs WI) ತಂಡ ಭರ್ಜರಿ ಆಗಿ ಆರಂಭಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ 3 ರನ್​ಗಳ ರೋಚಕ ಜಯ ಸಾಧಿಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ನಾಯಕ ಶಿಖರ್ ಧವನ್ (Shikhar Dhawan) ಅವರ 97 ರನ್, ಶುಭ್ಮನ್ ಗಿಲ್ 64 ಹಾಗೂ ಶ್ರೇಯಸ್ ಅಯ್ಯರ್ ಅವರ 54 ರನ್​ಗಳ ನೆರವಿನಿಂದ ಭಾರತ 50 ಓವರ್​ಗಳಲ್ಲಿ 308 ರನ್ ಕಲೆಹಾಕಿತು. ವೆಸ್ಟ್ ಇಂಡೀಸ್ ಗುರಿ ಬೆನ್ನಟ್ಟಿ ಜಯಕ್ಕೆ ಕಠಿಣ ಹೋರಾಟ ನಡೆಸಿತು. ಖೈಲ್ ಮೇಯೆಯರ್ಸ್ 75 ರನ್ ಸಿಡಿಸಿದರು. ಆದರೆ, ಕೊನೆಯ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ (Mohammed Siraj) 15 ರನ್​ಗಳನ್ನು ತಡೆಯುವಲ್ಲಿ ಯಶಸ್ವಿಯಾಗಿ ತಂಡಕ್ಕೆ ಜಯ ತಂದುಕೊಟ್ಟರು. ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ಮಾತನಾಡಿದ್ದು, ಏನು ಹೇಳಿದರು ನೋಡಿ.

“ಶತಕ ಗಳಿಸಲು ಸಾಧ್ಯವಾಗಲಿಲ್ಲ, ಅದರ ಬಗ್ಗೆ ಬೇಸರವಿದೆ. ಆದರೆ, ತಂಡದಿಂದ ಉತ್ತಮ ಆಟ ಮೂಡಿಬಂದಿದೆ. ಕೊನೆಯಲ್ಲಿ ನಾವು ಸವಾಲಿನ ಟಾರ್ಗೆಟ್ ನೀಡಿದೆವು. ಅಂತಿಮ ಹಂತದಲ್ಲಿ ಒತ್ತಡಕ್ಕೆ ಒಳಗಾಗಿದ್ದೆವು. ಆದರೆ, ಪಂದ್ಯ ಈರೀತಿ ಟರ್ನ್ ಆಗುತ್ತದೆ ಎಂದು ಭಾವಿಸಿರಲಿಲ್ಲ. ಶಾಂತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದೇವೆ. ಒಂದು ಸಣ್ಣ ತಪ್ಪಿನಿಂದ ಕೂಡ ಪಂದ್ಯವನ್ನು ಕಳೆದುಕೊಳ್ಳುತ್ತಿದ್ದೆವು. ಆದರೆ, ಫೈನ್​ ಲೆಗ್ ಹಿಂದೆ ಸ್ಯಾಮ್ಸನ್ ಚೆಂಡನ್ನು ಹಿಡಿದಿದ್ದು ಸಹಾಯವಾಯಿತು. ಈ ಪಂದ್ಯದಲ್ಲಿ ಮಾಡಿದ ಕೆಲ ತಪ್ಪುಗಳಿಂದ ಪಾಠ ಕಲಿಯುತ್ತೇವೆ,” ಎಂದು ಹೇಳಿದ್ದಾರೆ.

ಇನ್ನು ಸೋತ ತಂಡದ ನಾಯಕ ನಿಕೋಲಸ್ ಪೂರನ್ ಮಾತನಾಡಿ, “ನಮಗೆ ಗೆದ್ದಂತೆ ಭಾಸವಾಗುತ್ತಿದೆ. ನಾನು ಈ ಸರಣಿ ಆರಂಭಕ್ಕೂ ಮುನ್ನ 50 ಓವರ್​ ಆಡುತ್ತೇವೆ ಎಂದು ಹೇಳಿದ್ದೆ. ಅದೇರೀತಿ ಪೂರ್ಣ ಓವರ್ ಆಡಿದ್ದೇವೆ. ನಮ್ಮಿಂದ ಏನು ಸಾಧ್ಯ ಎಂದು ಇಂದು ಎಲ್ಲರೂ ನೋಡಿದ್ದಾರೆ. ಇಲ್ಲಿಂದ ಮುಂದಕ್ಕೆ ಇನ್ನಷ್ಟು ಬಲಿಷ್ಠರಾಗುತ್ತೇವೆ. ಈ ಪಿಚ್​ನಲ್ಲಿ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಬೌಲರ್​ಗಳು ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಸೋತಿರುವುದು ನಿಜ ಆದರೆ, ಇದರಿಂದ ಉತ್ತಮವಾಗಿ ಕಮ್​ಬ್ಯಾಕ್ ಮಾಡುತ್ತೇವೆ,” ಎಂಬುದು ಪೂರನ್ ಮಾತು.

ಇದನ್ನೂ ಓದಿ
IND vs WI ODI: 50ನೇ ಓವರ್, 6 ಬಾಲ್, 15 ರನ್: ಭಾರತಕ್ಕೆ ರೋಚಕ ಜಯ ತಂದುಕೊಟ್ಟ ಸ್ಯಾಮ್ಸನ್-ಸಿರಾಜ್
ICC: ವಿಕೆಟ್ ಪಡಿ ಪಲ್ಟಿ ಹೊಡಿ; ಸಖತ್ ವೈರಲ್ ಆಗ್ತಿದೆ ಈ ಬೌಲರ್ ವಿಶಿಷ್ಟ ಸಂಭ್ರಮಾಚರಣೆ; ವಿಡಿಯೋ ನೋಡಿ
ನೀರಜ್​ರನ್ನು ಸೋಲಿಸಲು ಬೇಕಾದ ಜಾವೆಲಿನ್ ಪಾಕಿಸ್ತಾನದಲ್ಲಿ ಲಭ್ಯವಿಲ್ಲ, ನಾವೇನು ​​ಮಾಡಬೇಕು?- ಅರ್ಷದ್ ನದೀಮ್ ಅಳಲು
BCCI: ಎರಡು ಪ್ರಮುಖ ದೇಶೀ ಕ್ರಿಕೆಟ್ ಪಂದ್ಯಾವಳಿಗಳು ಪುನರಾರಂಭ: ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ ಬಿಸಿಸಿಐ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ 119 ರನ್​ ಬಾರಿಸಿದರು. ಗಿಲ್ ಅರ್ಧಶತಕ ಸಿಡಿಸಿ ಔಟಾದರೆ, ನಂತರ ಶ್ರೇಯಸ್ ಅಯ್ಯರ್ ಜೊತೆಯಾದ ಧವನ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು.

ಧವನ್ 97 ರನ್​ಗೆ ಬ್ಯಾಟ್ ಕೆಳಗಿಟ್ಟರು. ಇದರ ಬೆನ್ನಲ್ಲೆ ಅರ್ಧಶತಕ ಸಿಡಿಸಿ ಅಯ್ಯರ್ ಕೂಡ ನಿರ್ಗಮಿಸಿದರು. ಭಾರತ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು.

309 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ನಂತರ ಖೈಲ್ ಮೇಯೆಯರ್ಸ್ (75) ಹಾಗೂ ಶಮರ್ ಬ್ರೂಕ್ಸ್ (46) ಭರ್ಜರಿ ಬ್ಯಾಟಿಂಗ್ ನಡೆಸಿದರು. ಬ್ರಾಂಡನ್ ಕಿಂಗ್ ಕೂಡ 66 ಎಸೆತಗಳಲ್ಲಿ 54 ರನ್ ಗಳಿಸಿದರು. ಅಖೆಲ್ ಹುಸೈನ್ (32*) ಹಾಗೂ ರೊಮಾರಿಯೊ ಶೆಫೆರ್ಡ್ (39*) ಕೊನೆ ಕ್ಷಣದಲ್ಲಿ ಜಯಕ್ಕೆ ಸಾಕಷ್ಟು ಹೋರಾಟ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ವಿಂಡೀಸ್ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿತು.