IND vs WI ODI: 50ನೇ ಓವರ್, 6 ಬಾಲ್, 15 ರನ್: ಭಾರತಕ್ಕೆ ರೋಚಕ ಜಯ ತಂದುಕೊಟ್ಟ ಸ್ಯಾಮ್ಸನ್-ಸಿರಾಜ್
Sanju Samson: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದ ಕೊನೆಯ ಓವರ್ನಲ್ಲಿ ಮೊಹಮ್ಮದ್ ಸಿರಾಜ್ (Mohammed Siraj) ಅಮೋಘ ಬೌಲಿಂಗ್ ಹಾಗೂ ಸಂಜು ಸ್ಯಾಮ್ಸನ್ ಅವರ ಅದ್ಭುತ ವಿಕೆಟ್ ಕೀಪಿಂಗ್ ನೆರವಿನಿಂದ ಟೀಮ್ ಇಂಡಿಯಾ ಜಯ ಸಾಧಿಸಿದೆ.
ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (India vs West Indies) 3 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ನಾಯಕ ಶಿಖರ್ ಧವನ್ (Shikhar Dhawan), ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದಿಂದ ದೊಡ್ಡ ಟಾರ್ಗೆಟ್ ನೀಡಿದ್ದ ಭಾರತ ಬೌಲಿಂಗ್ನಲ್ಲಿ ಹಿಡಿತ ಸಾಧಿಸಲಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ಗೆಲುವಿನ ಸಮೀಪ ಬಂದಿತ್ತು. ಆದರೆ, ಕೊನೆಯ ಓವರ್ನಲ್ಲಿ ಮೊಹಮ್ಮದ್ ಸಿರಾಜ್ (Mohammed Siraj) ಅಮೋಘ ಬೌಲಿಂಗ್ ಹಾಗೂ ಸಂಜು ಸ್ಯಾಮ್ಸನ್ ಅವರ ಅದ್ಭುತ ವಿಕೆಟ್ ಕೀಪಿಂಗ್ ನೆರವಿನಿಂದ ಟೀಮ್ ಇಂಡಿಯಾ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಕೊನೆಯ 6 ಎಸೆತಗಳಲ್ಲಿ ವಿಂಡೀಸ್ಗೆ ಗೆಲ್ಲಲು 15 ರನ್‌ಗಳ ಅವಶ್ಯಕತೆಯಿತ್ತು. ಇದನ್ನು ತಡೆಯುವಲ್ಲಿ ಸಿರಾಜ್ ಯಶಸ್ವಿಯಾದರು. ಇದರಲ್ಲಿ ಸ್ಯಾಮ್ಸನ್ ಪಾತರ ಕೂಡ ಮಹತ್ವದ್ದಾಗಿತ್ತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಶತಕದ ಜೊತೆಯಾಟ ಆಡಿದರು. ಗಿಲ್ ಬಿರುಸಿನ ಬ್ಯಾಟಿಂಗ್ ನಡೆಸಿದರೆ ಇವರಿಗೆ ಧವನ್ ಉತ್ತಮ ಸಾಥ್ ನೀಡಿದರು. ಈ ಜೋಡಿ 17.4 ಓವರ್ಗೆ 119 ರನ್ ಸಿಡಿಸಿತು. 53 ಎಸೆತಗಳಲ್ಲಿ 6 ಫೋರ್, 2 ಸಿಕ್ಸರ್ ಸಿಡಿಸಿ ಗಿಲ್ ಔಟಾದರು. ನಂತರ ಶ್ರೇಯಸ್ ಅಯ್ಯರ್ ಜೊತೆಯಾದ ಧವನ್ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು.
ಧವನ್–ಅಯ್ಯರ್ ಜೋಡಿ 96 ರನ್‌ಗಳ ಕಾಣಿಕೆ ನೀಡಿದರು. ಬೊಂಬಾಟ್ ಆಗಿ ಆಟವಾಡುತ್ತಿದ್ದ ಧವನ್ ಶತಕದ ಅಂಚಿನಲ್ಲಿ ಎಡವಿದರು. 99 ಎಸೆತಗಳಲ್ಲಿ 10 ಫೋರ್, 3 ಸಿಕ್ಸರ್ ಸಿಡಿಸಿ 97 ರನ್ಗೆ ಬ್ಯಾಟ್ ಕೆಳಗಿಟ್ಟರು. ಇದರ ಬೆನ್ನಲ್ಲೆ ಅರ್ಧಶತಕ ಸಿಡಿಸಿ ಅಯ್ಯರ್ ಕೂಡ ನಿರ್ಗಮಿಸಿದರು. ಇವರು 57 ಎಸೆತಗಳಲ್ಲಿ ಶ್ರೇಯಸ್ 5 ಫೋರ್, 2 ಸಿಕ್ಸರ್ ಬಾರಿಸಿ 54 ರನ್ ಕಲೆಹಾಕಿದರು.
ನಂತರ ಬಂದ ಬ್ಯಾಟರ್ಗಳ ಪೈಕಿ ದೀಪಕ್ ಹೂಡ (27) ಹಾಗೂ ಅಕ್ಷರ್ ಪಟೇಲ್ (21) ಕೊಂಚ ರನ್ ಗಳಿಸಿದ್ದು ಬಿಟ್ಟರೆ ಉಳಿದವರೆಲ್ಲ ಬೇಗನೆ ಪೆವಿಲಿಯನ್ ಸೇರಿಕೊಂಡರು. ಭಾರತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು. ವಿಂಡೀಸ್ ಪರ ಅಲ್ಜರಿ ಜೋಸೆಫ್ ಹಾಗೂ ಗುಡಕೇಶ್ ಮೋಕಿ ತಲಾ 2 ವಿಕೆಟ್ ಪಡೆದರು.
309 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ನಂತರ ಖೈಲ್ ಮೇಯೆಯರ್ಸ್ (75) ಹಾಗೂ ಶಮರ್ ಬ್ರೂಕ್ಸ್ (46) ಭರ್ಜರಿ ಬ್ಯಾಟಿಂಗ್ ನಡೆಸಿದರು. ಬ್ರಾಂಡನ್ ಕಿಂಗ್ ಕೂಡ 66 ಎಸೆತಗಳಲ್ಲಿ 54 ರನ್ ಗಳಿಸಿ ಗೆಲುವಿಗೆ ಹೋರಾಟ ನಡೆಸಿದರು. ಆದರೆ, ಅಂದುಕೊಂಡಷ್ಟು ವೇಗದಲ್ಲಿ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಅಖೆಲ್ ಹುಸೈನ್ (32*) ಹಾಗೂ ರೊಮಾರಿಯೊ ಶೆಫೆರ್ಡ್ (39*) ಕೊನೆ ಕ್ಷಣದಲ್ಲಿ ಜಯಕ್ಕೆ ಸಾಕಷ್ಟು ಹೋರಾಟ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ವಿಂಡೀಸ್ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿತಷ್ಟೆ.
.@BCCI WIN BY 3 RUNS! A brilliant final over, nerves of steel by @mdsirajofficial ! Sign of things to come for this series!
Watch the India tour of West Indies LIVE, exclusively on #FanCode ?https://t.co/RCdQk12YsM@windiescricket #WIvIND #INDvsWIonFanCode #INDvWI pic.twitter.com/PoJFvSiaqz
— FanCode (@FanCode) July 22, 2022
ಭಾರತ ಪರ ಮೊಹಮ್ಮದ್ ಸಿರಾಜ್ 10 ಓವರ್ಗೆ 57 ರನ್ ನೀಡಿ 2 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ ಹಾಗೂ ಚಹಲ್ ಕೂಡ 2 ವಿಕೆಟ್ ಕಿತ್ತರು. ಅದರಲ್ಲೂ 50ನೇ ಓವರ್ ಬೌಲಿಂಗ್ ಮಾಡಿದ ಸಿರಾಜ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯ ಓವರ್ನಲ್ಲಿ ವಿಂಡೀಸ್ ಗೆಲುವಿಗೆ 15 ರನ್ ಬೇಕಾಗಿತ್ತು. ಮೊದಲ ಎಸೆತ ಡಾಟ್ ಆದರೆ, ಎರಡನೇ ಎಸೆತದಲ್ಲಿ 1 ರನ್ ಮೂಡಿಬಂತು. ಮೂರನೇ ಎಸೆತದಲ್ಲಿ ಶೆಫೆರ್ಡ್ ಫೋರ್ ಬಾರಿಸಿದರು. 4ನೇ ಎಸೆತದಲ್ಲಿ ಮತ್ತೆ 2 ರನ್ ಕಲೆಹಾಕಿದರು.
ಹೀಗಾಗಿ ಕೊನೆಯ 2 ಎಸೆತದಲ್ಲಿ 8 ರನ್ಗಳು ಬೇಕಾಗಿತ್ತು. 5ನೇ ಎಸೆತ ವೈಡ್ ಆಯಿತು. ಆದರೆ ಈ ಬಾಲ್ ದೊಡ್ಡ ವೈಡ್ ಆಗಿದ್ದರಿಂದ ಹಿಂಬದಿ ಫೋರ್ ಹೋಗುವುದರಲ್ಲಿತ್ತು. ಅತ್ತ ಕೀಪರ್ ಸಂಜು ಸ್ಯಾಮ್ಸನ್ ಸೂಪರ್ ಮ್ಯಾನ್ ರೀತಿ ಡೈವ್ ಬಿದ್ದು ಚೆಂಡು ಹಿಡಿದಿದ್ದು ಪಂದ್ಯದ ಗತಿಯನ್ನೇ ಬದಲಾಯಿಸಿತು. ನಂತರದ ಎರಡು ಎಸೆತದಲ್ಲಿ ವಿಂಡೀಸ್ 3 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.
Published On - 7:59 am, Sat, 23 July 22