ನೀರಜ್​ರನ್ನು ಸೋಲಿಸಲು ಬೇಕಾದ ಜಾವೆಲಿನ್ ಪಾಕಿಸ್ತಾನದಲ್ಲಿ ಲಭ್ಯವಿಲ್ಲ, ನಾವೇನು ​​ಮಾಡಬೇಕು?- ಅರ್ಷದ್ ನದೀಮ್ ಅಳಲು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗುವ ಜಾವಲಿನ್‌ಗಳು ಪಾಕಿಸ್ತಾನದಲ್ಲಿ ಕಾಣಸಿಗುವುದಿಲ್ಲ. ಅವುಗಳ ಬೆಲೆ ಸಾಕಷ್ಟು ಹೆಚ್ಚಾಗಿದೆ. ಒಂದು ಜಾವೆಲಿನ್ ಮೌಲ್ಯ ನಾಲ್ಕು ಲಕ್ಷ ರೂಪಾಯಿ. ನಮ್ಮ ದೇಶದಲ್ಲಿ ಈವರೆಗೆ ಇಂತಹ ಜಾವೆಲಿನ್ ಬಂದಿಲ್ಲ ಎಂದಿದ್ದಾರೆ.

ನೀರಜ್​ರನ್ನು ಸೋಲಿಸಲು ಬೇಕಾದ ಜಾವೆಲಿನ್ ಪಾಕಿಸ್ತಾನದಲ್ಲಿ ಲಭ್ಯವಿಲ್ಲ, ನಾವೇನು ​​ಮಾಡಬೇಕು?- ಅರ್ಷದ್ ನದೀಮ್ ಅಳಲು
Arshad Nadeem
Follow us
TV9 Web
| Updated By: ಪೃಥ್ವಿಶಂಕರ

Updated on: Jul 22, 2022 | 5:05 PM

ಪಾಕಿಸ್ತಾನದ ಸ್ಟಾರ್ ಅಥ್ಲೀಟ್ ಅರ್ಷದ್ ನದೀಮ್ (Arshad Nadeem) ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championships) ಜಾವೆಲಿನ್ ಥ್ರೋ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಅರ್ಷದ್ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, 81.71 ಮೀಟರ್‌ ಜಾವೆಲಿನ್ ಎಸೆಯುವುದರೊಂದಿಗೆ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಅಗ್ರ 12 ಆಟಗಾರರು ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದು, ಅವರಲ್ಲಿ ಒಬ್ಬರಾದ ಅರ್ಷದ್ ದೀರ್ಘಕಾಲದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಅರ್ಷದ್, ನೀರಜ್ ಚೋಪ್ರಾ (Neeraj Chopra) ಅವರನ್ನು ಸೋಲಿಸಲಿದ್ದಾರೆ ಎಂಬ ನಿರೀಕ್ಷೆ ಅವರ ಅಭಿಮಾನಿಗಳಲ್ಲಿದೆ. ಆದರೆ, ಪಾಕಿಸ್ತಾನದಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಅರ್ಷದ್ ತಮ್ಮ ಅಸಹಾಯಕತೆಯನ್ನು ಸುದ್ದಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಮ್ಮಲ್ಲಿ ಹೆಚ್ಚು ಅಥ್ಲೆಟಿಕ್ಸ್ ಮೈದಾನವಿಲ್ಲ

ಈ ಕಾರ್ಯಕ್ರಮದಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕುರಿತು ಮಾತನಾಡುತ್ತಿದ ಅರ್ಷದ್, ನಾನು ತನ್ನ ಪ್ರಾಯೋಜಕರ ಸಹಾಯದಿಂದ ಕೆಲವೊಮ್ಮೆ ವಿದೇಶದಲ್ಲಿ ತರಬೇತಿ ಪಡೆಯುತ್ತೇನೆ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಜಾವಲಿನ್‌ಗಳು ನಮ್ಮ ದೇಶದಲ್ಲಿ ತರಬೇತಿಗೆ ಲಭ್ಯವಿಲ್ಲ ಎಂದು ಅರ್ಷದ್ ಈ ಹಿಂದೆ ಹೇಳಿದ್ದರು. ಈಗ ಪರಿಸ್ಥಿತಿ ಬದಲಾಗಿದೆಯೇ ಎಂದು ಕೇಳಿದಾಗ. ಈಗ ನೋಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗುವ ಜಾವಲಿನ್‌ಗಳು ಪಾಕಿಸ್ತಾನದಲ್ಲಿ ಕಾಣಸಿಗುವುದಿಲ್ಲ. ಅವುಗಳ ಬೆಲೆ ಸಾಕಷ್ಟು ಹೆಚ್ಚಾಗಿದೆ. ಒಂದು ಜಾವೆಲಿನ್ ಮೌಲ್ಯ ನಾಲ್ಕು ಲಕ್ಷ ರೂಪಾಯಿ. ನಮ್ಮ ದೇಶದಲ್ಲಿ ಈವರೆಗೆ ಇಂತಹ ಜಾವೆಲಿನ್ ಬಂದಿಲ್ಲ. ನಮ್ಮಲ್ಲಿ ಹೆಚ್ಚು ಅಥ್ಲೆಟಿಕ್ಸ್ ಮೈದಾನವಿಲ್ಲ. ಎಲ್ಲರೂ ಒಂದೇ ಮೈದಾನದಲ್ಲಿ ಅಭ್ಯಾಸ ಮಾಡುತ್ತಾರೆ. ಹಾಗಾಗಿ ಈ ಬಗ್ಗೆ ಸರಕಾರ ಯೋಚಿಸಬೇಕು ಎಂದಿದ್ದಾರೆ.

ಇದನ್ನೂ ಓದಿ
Image
BCCI: ಎರಡು ಪ್ರಮುಖ ದೇಶೀ ಕ್ರಿಕೆಟ್ ಪಂದ್ಯಾವಳಿಗಳು ಪುನರಾರಂಭ: ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ ಬಿಸಿಸಿಐ
Image
Virat Kohli: ಒಂದು ಇನ್ಸ್ಟಾಗ್ರಾಂ ಪೋಸ್ಟ್​ಗೆ ಕೊಹ್ಲಿ ಪಡೆಯುವ ಹಣದಲ್ಲಿ ನಾವು ನೀವು ಇಡೀ ಜೀವನವನ್ನೇ ಕಳೆಯಬಹುದು..!
Image
CWG 2022: ನೀರಜ್ ಚೋಪ್ರಾ ನಮ್ಮ ಸ್ಫೂರ್ತಿ; ಚಿನ್ನ ಗೆಲ್ಲುವುದೇ ತಂಡದ ಗುರಿ ಎಂದ ಸ್ಮೃತಿ ಮಂಧಾನ

ನೀರಜ್ ತನ್ನ ಪ್ರತಿಸ್ಪರ್ಧಿಯಲ್-ನದೀಮ್

ಈ ಹಿಂದೆ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನದೀಮ್ 84.62 ಮೀಟರ್ ಜಾವೆಲಿನ್ ಎಸೆದು ಐದನೇ ಸ್ಥಾನ ಪಡೆದಿದ್ದರು. ಮತ್ತೊಂದೆಡೆ ಭಾರತದ ನೀರಜ್ 87.58 ಮೀಟರ್‌ ದೂರ ಎಸೆದು ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿ ಈ ಬಾರಿ ನೀರಜ್‌ರನ್ನು ಹಿಂದಿಕ್ಕಲು ಸಾಧ್ಯವೇ ಎಂದು ಅರ್ಷದ್‌ಗೆ ಕೇಳಲಾಯಿತು. ಇದಕ್ಕೆ ಅರ್ಷದ್ ಸ್ಪಷ್ಟ ಉತ್ತರ ನೀಡಿಲ್ಲ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮ್ಮ ನಡುವೆ ಹೆಚ್ಚಿನ ವ್ಯತ್ಯಾಸವಿರಲಿಲ್ಲ ಆದರೆ ನಾನು ಯಾರೊಂದಿಗೂ ಸ್ಪರ್ಧಿಸುವುದಿಲ್ಲ ಎಂದು ಅರ್ಷದ್ ಹೇಳಿದರು. ಜೊತೆಗೆ ನಾನೇ ನನ್ನ ಎದುರಾಳಿ ಎಂದು ಹೇಳುವ ಮೂಲಕ ಅಡ್ಡ ಗೋಡೆಯ ಮೇಲೆ ದೀಪವಿಟ್ಟರು.

ನೀರಜ್ ಜಾವೆಲಿನ್ ಮಾಯ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನೀರಜ್ ಚೋಪ್ರಾ, ನಾನು ಫೈನಲ್ಸ್ ಥ್ರೋ ಎಸೆಯಲು ಹೋದಾಗ ನನ್ನ ಜಾವೆಲಿನ್ ಕಾಣಿಸುತ್ತಿರಲಿಲ್ಲ. ಎಲ್ಲಿ ಎಂದು ಹುಡುಕಲು ಆರಂಭಿಸಿದಾಗ ಅದು ಪಾಕಿಸ್ತಾನದ ಜಾವಲಿನ್ ಆಟಗಾರ ಅರ್ಷದ್ ನದೀಮ್ ಕೈಯಲ್ಲಿತ್ತು. ಕೇಳಿದ ನಂತರ ಅವರು ಅದನ್ನು ನನಗೆ ಹಿಂದಿರುಗಿಸಿದ್ದರು. ಎಂಬ ತಮಾಷೆಯ ವಿಚಾರವನ್ನು ಭಾರತೀಯ ಅಭಿಮಾನಿಗಳ ಮುಂದಿಟ್ಟಿದ್ದರು. ಆದಾಗ್ಯೂ, ಈ ಘಟನೆ ಕೇಳಿದ ಬಳಿಕ ಭಾರತೀಯ ಅಭಿಮಾನಿಗಳು ನದೀಮ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದರು. ಇದನ್ನು ಗಮನಿಸಿದ ನೀರಜ್, ಅರ್ಷದ್ ನನ್ನ ಜಾವೆಲಿನ್​ನ್ನು ಉದ್ದೇಶ ಪೂರ್ವಕವಾಗಿ ತೆಗೆದುಕೊಂಡಿರಲಿಲ್ಲ ಎಂದು ಹೇಳುವ ಮೂಲಕ ಅರ್ಷದ್ ನೆರೆವಿಗೆ ಬಂದಿದ್ದರು.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ