Kannada News » Photo gallery » CWG 2022 Smriti Mandhanas promise only intention is to win gold Neeraj Chopra filled the fire of winning gold
CWG 2022: ನೀರಜ್ ಚೋಪ್ರಾ ನಮ್ಮ ಸ್ಫೂರ್ತಿ; ಚಿನ್ನ ಗೆಲ್ಲುವುದೇ ತಂಡದ ಗುರಿ ಎಂದ ಸ್ಮೃತಿ ಮಂಧಾನ
TV9kannada Web Team | Edited By: pruthvi Shankar
Updated on: Jul 22, 2022 | 2:28 PM
CWG 2022: ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಟೀಮ್ ಇಂಡಿಯಾದ ಪ್ರತಿಯೊಬ್ಬ ಕ್ರಿಕೆಟಿಗರು ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿ ಇದೇ ರೀತಿಯ ಏನನ್ನಾದರೂ ಮಾಡಲು ಬಯಸುತ್ತಾರೆ ಎಂದಿದ್ದಾರೆ.
Jul 22, 2022 | 2:28 PM
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅವರು ಕಾಮನ್‌ವೆಲ್ತ್ ಗೇಮ್ಸ್ 2022 ಗೆ ಹೊರಡುವ ಮೊದಲು ಚಿನ್ನ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. ತಮ್ಮ ತಂಡದ ಗುರಿ ಕೇವಲ ಚಿನ್ನ ಗೆಲ್ಲುವುದು ಮಾತ್ರ ಎಂಬ ಹೇಳಿಕೆಯನ್ನು ಮಂಧಾನ ನೀಡಿದ್ದಾರೆ. ಟೀಂ ಇಂಡಿಯಾ ಸಂಪೂರ್ಣ ಸನ್ನದ್ಧವಾಗಿದ್ದು, ನೀರಜ್ ಚೋಪ್ರಾ ಅವರಿಂದ ಸ್ಫೂರ್ತಿ ಪಡೆಯುತ್ತಿದೆ ಎಂದು ಮಂಧಾನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
1 / 5
ಮಂಧಾನ ಅವರಿಗೂ ಮೊದಲು, ಮಿಥಾಲಿ ರಾಜ್ ಮತ್ತು ಹರ್ಮನ್‌ಪ್ರೀತ್ ಕೌರ್ ಭಾರತದ ಪರ 3000 ರನ್ ಗಳಿಸಿದ್ದರು. ಆದರೆ ಮಂಧಾನ ಈ ಇಬ್ಬರಿಗಿಂತ ಅತ್ಯಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಮಾಡಿದ ಬ್ಯಾಟರ್ ಎನಿಸಿಕೊಂಡರು. ಮಂಧಾನ ಕೇವಲ 76 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು.
2 / 5
ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತಂಡ ಬಲಿಷ್ಠವಾಗಿದೆ ಎಂದು ಸ್ಮೃತಿ ಮಂಧಾನ ಹೇಳಿದ್ದಾರೆ. ಪ್ರತಿಯೊಬ್ಬ ಆಟಗಾರ್ತಿಯೂ ತನ್ನ ಶಕ್ತಿಯನ್ನು ಅರ್ಥಮಾಡಿಕೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ವಿರೋಧಿಗಳ ವಿರುದ್ಧ ಯೋಜನೆ ಮಾಡುವುದು ಸುಲಭ. ಇತ್ತೀಚೆಗೆ ಟೀಂ ಇಂಡಿಯಾ ಶ್ರೀಲಂಕಾವನ್ನು ODI ಮತ್ತು T20 ಸರಣಿಗಳಲ್ಲಿ ಸೋಲಿಸಿರುವುದು ನಮಗೆ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ.
3 / 5
ಜೊತೆಗೆ ತಮ್ಮ ತಂಡ ನೀರಜ್ ಚೋಪ್ರಾ ಅವರಿಂದ ಸ್ಫೂರ್ತಿ ಪಡೆಯುತ್ತಿದೆ ಎಂದು ಮಂಧಾನ ಹೇಳಿದ್ದಾರೆ. ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಟೀಮ್ ಇಂಡಿಯಾದ ಪ್ರತಿಯೊಬ್ಬ ಕ್ರಿಕೆಟಿಗರು ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿ ಇದೇ ರೀತಿಯ ಏನನ್ನಾದರೂ ಮಾಡಲು ಬಯಸುತ್ತಾರೆ ಎಂದಿದ್ದಾರೆ.
4 / 5
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತಂಡವು ಜುಲೈ 29 ರಂದು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇದರ ನಂತರ, ಜುಲೈ 31 ರಂದು ಪಾಕಿಸ್ತಾನದೊಂದಿಗೆ ಘರ್ಷಣೆ ನಡೆಯಲಿದೆ. ಆಗಸ್ಟ್ 3 ರಂದು ಟೀಂ ಇಂಡಿಯಾ ಮತ್ತು ಬಾರ್ಬಡೋಸ್ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ.