ICC: ವಿಕೆಟ್ ಪಡಿ ಪಲ್ಟಿ ಹೊಡಿ; ಸಖತ್ ವೈರಲ್ ಆಗ್ತಿದೆ ಈ ಬೌಲರ್ ವಿಶಿಷ್ಟ ಸಂಭ್ರಮಾಚರಣೆ; ವಿಡಿಯೋ ನೋಡಿ

ICC: ಪ್ರತಿಯೊಂದು ವಿಕೆಟ್ ಬಿದ್ದಾಗಲು ಪಲ್ಟಿ ಹೊಡೆದು ಸಂಭ್ರಮ ಹೊರಹಾಕಿದರು. ಈಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಮೆನೆ-ಎಜೆಗಿ ಅವರ ಪಿನ್‌ಪಾಯಿಂಟ್ ಯಾರ್ಕರ್‌ಗಳಿಗೆ ಪ್ರಶಂಸೆ ಕೂಡ ಕೇಳಿಬರುತ್ತಿದೆ.

ICC: ವಿಕೆಟ್ ಪಡಿ ಪಲ್ಟಿ ಹೊಡಿ; ಸಖತ್ ವೈರಲ್ ಆಗ್ತಿದೆ ಈ ಬೌಲರ್ ವಿಶಿಷ್ಟ ಸಂಭ್ರಮಾಚರಣೆ; ವಿಡಿಯೋ ನೋಡಿ
Image Credit source: Hindustan Times
Follow us
TV9 Web
| Updated By: ಪೃಥ್ವಿಶಂಕರ

Updated on:Jul 22, 2022 | 5:52 PM

ಇತ್ತೀಚೆಗೆ ಐಸಿಸಿ (ICC) ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಸರ್ಬಿಯಾದ ಬೌಲರ್‌, ತನ್ನ ಬೌಲಿಂಗ್‌ನಿಂದ ವಿಕೆಟ್ ಪಡೆದಾಗಲೆಲ್ಲಾ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ಮಾಡುವ ವೀಡಿಯೊವನ್ನು ಹಂಚಿಕೊಂಡಿತ್ತು. ಈಗ ಈ ವೀಡಿಯೊ ಎಲ್ಲೆಡೆ ಸಖತ್ ವೈರಲ್ ಆಗಿದ್ದು, Instagram ರೀಲ್ಸ್‌ನಲ್ಲಿ 1.5 ಮಿಲಿಯನ್ ವೀಕ್ಷಣೆ ಕಂಡಿದೆ. ಜುಲೈ 13 ರಂದು ನಡೆದ ಪಂದ್ಯದಲ್ಲಿ ಈ ರೀತಿಯ ಘಟನೆ ಸಂಭವಿಸಿದ್ದು, ಈ ರೀತಿಯ ಸಂಭ್ರಮಾಚರಣೆ ಮಾಡಿದ್ದ ಬೌಲರ್ ಹೆಸರು ಅಯೋ ಮೆನೆ-ಎಜೆಗಿ ಆಗಿದೆ. ಅಯೋ ಮೆನೆ-ಎಜೆಗಿ, ಐಲ್ ಆಫ್ ಮ್ಯಾನ್ ತಂಡದ ವಿರುದ್ಧದ ಪಂದ್ಯದಲ್ಲಿ ತಮ್ಮ ಬೌಲಿಂಗ್​ನಲ್ಲಿ ಪ್ರತಿಯೊಂದು ವಿಕೆಟ್‌ಗಳು ಉರುಳಿದಾಗಲು ಪಲ್ಟಿ ಹೊಡೆಯುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ಪಲ್ಟಿ ಹೊಡೆದ ಬಳಿಕ ಮೈದಾನದಲ್ಲಿ ಅಂಗಾತ ಮಲಗಿ ಸಂಭ್ರಮಿಸುತ್ತಾರೆ.

ಸಾಮಾನ್ಯವಾಗಿ ಕ್ರಿಕೆಟ್, ಬೌಲರ್ ಮತ್ತು ಬ್ಯಾಟ್ಸ್‌ಮನ್​ಗಳ ಅಬ್ಬರದ ಪ್ರದರ್ಶನದಿಂದ ಹೆಚ್ಚು ರೋಮಾಂಚನಕಾರಿ ಮತ್ತು ಮನರಂಜನೆಯನ್ನು ನೀಡುತ್ತದೆ. ಹಾಗೆಯೇ ಇದರ ಜೊತೆಗೆ, ಅತ್ಯುತ್ತಮ ಫೀಲ್ಡಿಂಗ್, ಅದ್ಭುತ ಕ್ಯಾಚ್‌, ಪ್ರೇಕ್ಷಕರ ವಿಚಿತ್ರ ಶೈಲಿ ಮತ್ತು ಕೆಲವೊಮ್ಮೆ ಸ್ಟಂಪ್ ಮೈಕ್‌ನಲ್ಲಿ ವಿಕೆಟ್‌ಕೀಪರ್‌ಗಳ ಕಾಮೆಂಟರಿಯೂ ವಿಶಿಷ್ಟ ಮನರಂಜನೆ ನೀಡುತ್ತದೆ. ಇವುಗಳಲ್ಲದೆ, ಕ್ರಿಕೆಟ್​ನಲ್ಲಿ ವಿಕೆಟ್ ಪಡೆದ ನಂತರ ಬೌಲರ್ ಸಂಭ್ರಮಿಸುವ ರೀತಿಗೆ ಬೇರೆಯದ್ದೇ ಫ್ಯಾನ್ಸ್ ಫಾಲೋಯಿಂಗ್ ಇರುತ್ತದೆ.

ಇದನ್ನೂ ಓದಿ
Image
ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾಗೆ ಆತಿಥ್ಯ ವಹಿಸಲಿದೆ ಭಾರತ; ಸಂಪೂರ್ಣ ವೇಳಾಪಟ್ಟಿ ಹೀಗಿದೆ
Image
Asia Cup2022: ಏಷ್ಯಾ ಕಪ್ ಆಯೋಜನೆಗೆ ಅಧಿಕೃತ ಸ್ಥಳ ನಿಗದಿ! ಗಂಗೂಲಿ ನೀಡಿದ್ರು ಬಿಗ್​ ಅಪ್​ಡೇಟ್
Image
Virat Kohli: ಕ್ರಿಕೆಟ್​ಗೆ ಬ್ರೇಕ್; ಮಡದಿಯೊಂದಿಗೆ ಈ ರೊಮ್ಯಾಂಟಿಕ್ ಸಿಟಿಯಲ್ಲಿ ಒಂದು ತಿಂಗಳು ಕಳೆಯಲಿದ್ದಾರೆ ಕೊಹ್ಲಿ

ಬ್ರೆಟ್ ಲೀಯಿಂದ ಡೇಲ್ ಸ್ಟೇಯ್ನ್ ಮತ್ತು ಇತ್ತೀಚಿನ ದಿನಗಳಲ್ಲಿ, ಮೊಹಮ್ಮದ್ ಸಿರಾಜ್ ಅವರಂತಹ ಬೌಲರ್‌ಗಳು ತಮ್ಮ ಪ್ರದರ್ಶನದ ಹೊರತಾಗಿ ವಿಕೆಟ್‌ಗಳನ್ನು ಪಡೆದ ನಂತರ ಅವರ ಸಂಭ್ರಮಾಚರಣೆಯಿಂದಾಗಿ ಅಭಿಮಾನಿಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಅವರ ಸಂಭ್ರಮವನ್ನು ಅಭಿಮಾನಿಗಳು ಒಂದಲ್ಲ ಒಂದು ಹಂತದಲ್ಲಿ ಕಾಪಿ ಮಾಡಿರುತ್ತಾರೆ. ಆದರೆ, ಸೆರ್ಬಿಯಾದ ಅಯೋ ಮೆನೆ-ಎಜೆಗಿ ಅವರು ವಿಕೆಟ್ ಪಡೆದ ಬಳಿಕ ಅದನ್ನು ಆಚರಿಸುವ ರೀತಿಯನ್ನು, ಯಾವುದೇ ಅಭಿಮಾನಿಗಳು ನಕಲಿಸುವುದಿಲ್ಲ ಅಥವಾ ಮಾಡಲು ಪ್ರಯತ್ನಿಸುವುದಿಲ್ಲ. ಏಕೆಂದರೆ ಅದಕ್ಕೆ ಸೂಕ್ತ ಕಾರಣವು ಇದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ನೈಜೀರಿಯಾ ಮತ್ತು ಸೆರ್ಬಿಯಾ ಎರಡೂ ದೇಶಗಳನ್ನು ಪ್ರತಿನಿಧಿಸಿರುವ ಮೆನೆ-ಎಜೆಗಿ, ಆ ಪಂದ್ಯದಲ್ಲಿ ಐಲ್ ಆಫ್ ಮ್ಯಾನ್ ತಂಡದ ನಾಲ್ಕು ವಿಕೆಟ್‌ಗಳನ್ನು ಪಡೆದರು. ಪ್ರತಿಯೊಂದು ವಿಕೆಟ್ ಬಿದ್ದಾಗಲು ಪಲ್ಟಿ ಹೊಡೆದು ಸಂಭ್ರಮ ಹೊರಹಾಕಿದರು. ಈಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಜೊತೆಗೆ ಮೆನೆ-ಎಜೆಗಿ ಅವರ ಪಿನ್‌ಪಾಯಿಂಟ್ ಯಾರ್ಕರ್‌ಗಳಿಗೆ ಪ್ರಶಂಸೆ ಕೂಡ ಕೇಳಿಬರುತ್ತಿದೆ.

ಪಂದ್ಯದ ಫಲಿತಾಂಶ ಬದಲಾಯಿಸಲು ಸಾಧ್ಯವಾಗಲಿಲ್ಲ

2024 ರಲ್ಲಿ ನಡೆಯಲಿರುವ ICC T20 ವಿಶ್ವಕಪ್‌ಗಾಗಿ ಸ್ಥಳೀಯ ಅರ್ಹತಾ ಪಂದ್ಯಗಳನ್ನು ಆಡಲಾಗುತ್ತಿದೆ ಮತ್ತು ಈ ಪಂದ್ಯವು ಯುರೋಪ್‌ನ ಉಪ-ಪ್ರಾದೇಶಿಕ ಗುಂಪು A ಕ್ವಾಲಿಫೈಯರ್ ಆಗಿತ್ತು. ಮೆನೆ-ಎಜೆಗಿಯ ಭರ್ಜರಿ ಬೌಲಿಂಗ್ ಮತ್ತು ಮನರಂಜನೆಯ ಸಂಭ್ರಮದ ಹೊರತಾಗಿಯೂ ಸೆರ್ಬಿಯಾ ಈ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಐಲ್ ಆಫ್ ಮ್ಯಾನ್ 7 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ಸರ್ಬಿಯಾ ತಂಡ ಕೇವಲ 97 ರನ್‌ಗಳಿಗೆ ಆಲೌಟ್ ಆಯಿತು.

Published On - 5:43 pm, Fri, 22 July 22

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ