
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (Worlds Championship of Legends) ಟೂರ್ನಮೆಂಟ್‌ನಲ್ಲಿ ಇಂಡಿಯಾ ಚಾಂಪಿಯನ್ಸ್ (India Champions) ತಂಡ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹಾಲಿ ಚಾಂಪಿಯನ್ ಆಗಿರುವ ಇಂಡಿಯಾ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಆದಾಗ್ಯೂ ಈ ಲೀಗ್ನಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡ, ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಪಂದ್ಯವನ್ನು ಆಡಲು ನಿರಾಕರಿಸಿತು. ತಂಡದ ಈ ನಿರ್ಧಾರಕ್ಕೆ ಪಾಕ್ ತಂಡದ ಆಟಗಾರರು ಆಕ್ರೋಶ ಹೊರಹಾಕಿದ್ದರು. ಇದೀಗ ಅಂತಹದ್ದೇ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಲಾಗಿದೆ. ಇದಕ್ಕೆ ತಂಡದ ಆಟಗಾರ ಶಿಖರ್ ಧವನ್ (Shikhar Dhawan) ಕೂಡ ಖಡಕ್ ಉತ್ತರ ನೀಡಿದ್ದಾರೆ.
ವಾಸ್ತವವಾಗಿ ಈ ಟೂರ್ನಮೆಂಟ್ನ ಲೀಗ್ ಸುತ್ತಿನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಪರಸ್ಪರ ಆಡಬೇಕಿತ್ತು. ಆದರೆಪಂದ್ಯಕ್ಕೆ 12 ಗಂಟೆಗಳ ಮೊದಲು ಭಾರತೀಯ ಆಟಗಾರರು ಪಾಕ್ ವಿರುದ್ಧ ಆಡಲು ನಿರಾಕರಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಇದೀಗ ಮುಂದಿನ ಸುತ್ತಿನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೆ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಈ ಪಂದ್ಯದ ಕುರಿತು ಪತ್ರಕರ್ತರೊಬ್ಬರು ಇಂಡಿಯಾ ಚಾಂಪಿಯನ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಬಳಿ ಈ ಪ್ರಶ್ನೆ ಕೇಳಿದ್ದಾರೆ.
ವಾಸ್ತವವಾಗಿ ಈ ಲೀಗ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ರದ್ದಾಗಲು ಶಿಖರ್ ಧವನ್ ಪ್ರಮುಖ ಕಾರಣ ಎಂದು ಪಾಕಿಸ್ತಾನಿ ಆಟಗಾರರು ದೂಷಿಸಿದ್ದರು. ಇದೀಗ ಪಾಕಿಸ್ತಾನಿ ಪತ್ರಕರ್ತರೊಬ್ಬರು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡ, ಭಾರತದ ಎದುರಾದರೆ ಆ ಪಂದ್ಯವನ್ನು ನೀವು ಆಡುವುದಿಲ್ಲವಾ ಎಂದು ಧವನ್‌ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ ಧವನ್,‘ಅಣ್ಣ, ಈ ಪ್ರಶ್ನೆ ಕೇಳಲು ಇದು ಸರಿಯಾದ ಜಾಗವಲ್ಲ. ಆದಾಗ್ಯೂ ನೀವು ಈ ಪ್ರಶ್ನೆಯನ್ನು ಕೇಳುವುದರಿಂದ ನಾನು ಒತ್ತಡಕ್ಕೆ ಸಿಲುಕಿ ಏನಾದರೂ ಹೇಳುತ್ತೇನೆ ಎಂದು ನೀವು ಭಾವಿಸುತ್ತೀರಿ. ಆದರೆ ನಾನು ಆ ರೀತಿಯಾಗಿ ಏನನ್ನು ಹೇಳುವುದಿಲ್ಲ. ನೀವು ಈ ಪ್ರಶ್ನೆಯನ್ನು ಕೇಳಬಾರದಿತ್ತು. ಆದರೂ ಹೇಳುತ್ತೀನಿ ಕೇಳಿ, ನಾವು ಮೊದಲು ಆಡಿಲ್ಲವೆಂದಾಗ, ಈಗಲೂ ಆಡುವುದಿಲ್ಲ ಎಂದಿದ್ದಾರೆ.
Shikhar Dhawan angry reply on If Pakistan reaches the semi-final against you… will you still play, or ask for a day off? 😄🇵🇰🇮🇳 #WCL25 pic.twitter.com/d96yRQpsp2
— Ahtasham Riaz (@ahtashamriaz22) July 26, 2025
ಶಿಖರ್ ಧವನ್, ಪಾಕಿಸ್ತಾನದೊಂದಿಗೆ ಪಂದ್ಯವನ್ನು ಆಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಆದರೆ ಬಿಸಿಸಿಐ ಮಾತ್ರ ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ನಲ್ಲಿ ಆಡುವುದನ್ನು ಖಚಿತಪಡಿಸಿದೆ. ಏಷ್ಯಾಕಪ್ನಲ್ಲಿ ಎರಡೂ ತಂಡಗಳು ಒಂದೇ ಗುಂಪಿನಲ್ಲಿದ್ದು, ಟೂರ್ನಿಯಲ್ಲಿ 3 ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಹೀಗಿರುವಾಗ ಮುಂದಿನ ದಿನಗಳಲ್ಲಿ ಬಿಸಿಸಿಐನ ಈ ನಡೆಗೆ ಭಾರತೀಯರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Sun, 27 July 25